ಕೆಆರ್ ಪೇಟೆ ಸೋಮೇಶ್ವರನ ಮುಂದೆ ಸಿಎಂ ಪುತ್ರ ಪ್ರಮಾಣ

ಮಂಡ್ಯ, ಜೂನ್ 24: ಕೆ.ಆರ್‌.ಪೇಟೆ ತಾಲೂಕಿನ ಸಾಸಲು ಸೋಮೇಶ್ವರ ದೇವಸ್ಥಾನದ ಮುಂದೆ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ಪ್ರಮಾಣ ಮಾಡಿದ್ದಾರೆ. ಅಕ್ರಮ ಕಲ್ಲು ಗಣಿಗಾರಿಕೆ ಆರೋಪ ಬಂದಿದ್ದು, ದೇವರ ಮೊರೆ ಹೊಂದಿದ್ದಾರೆ.

Recommended Video

      World No.1 Tennis player Novak DJokovic Tests Positive for Coronavirus | Oneindia Kannada

      ಕೆ.ಆರ್‌.ಪೇಟೆಯ ಬೇಬಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಇದು ಗ್ರಾಮಸ್ಥರ ಗಮನಕ್ಕೆ ಬಂದಿದ್ದು, ಪ್ರಶ್ನೆ ಮಾಡಿದ್ದಾರೆ. ಆದರೆ, ಗಣೆ ಮಾಲೀಕರು ನಾವು ಬಿವೈ ವಿಜಯೇಂದ್ರ ಜೊತೆಗೆ ಮಾತನಾಡಿದ್ದೇವೆ. ಅವರಿಗೆ 8 ರಿಂದ 10 ಕೋಟಿ ರೂಪಾಯಿ ಹಣ ನೀಡಿದ್ದೇವೆ ಎಂದಿದ್ದಾರೆ.

      ಈ ಬಗ್ಗೆ ಗ್ರಾಮಸ್ಥರ ವಿಜಯೇಂದ್ರಗೆ ಕೇಳಿದ್ದು, ಅದನ್ನು ಸಿಎಂ ಪುತ್ರ ನಿರಾಕರಿಸಿದ್ದಾರೆ. ''ನಾನು ಗಣಿ ಮಾಲೀಕರಿಂದ ಒಂದೇ ಒಂದು ರೂಪಾಯಿ ತೆಗೆದುಕೊಂಡಿಲ್ಲ'' ಎಂದು ಸಾಸಲು ಸೋಮೇಶ್ವರ ದೇವಸ್ಥಾನದ ಎದುರು ಪ್ರಮಾಣ ಮಾಡಿದ್ದಾರೆ. ಕಾರ್‌ನಲ್ಲಿ ಕುಳಿತಿದ್ದ ಅವರು ಅಲ್ಲಿಂದಲೇ ದೇವರಿಗೆ ಪ್ರಮಾಣ ಮಾಡಿದರು.

      I Dont Take Single Rupee From Mining Owners Says Vijayendra

      ಜೂನ್ 15 ರಿಂದ ಗಣಿಗಾರಿಕೆ ನಡೆಸಲು ಬಿವೈ ವಿಜಯೇಂದ್ರರಿಂದ ಅನುಮತಿ ಪಡೆದಿದ್ದೇವೆ ಎಂದು ಗಣೆ ಮಾಲೀಕರು ಹೇಳಿದ್ದು, ಇದನ್ನು ವಿಜಯೇಂದ್ರ ತಳ್ಳಿ ಹಾಕಿದ್ದಾರೆ. ಇದು ತಮ್ಮ ಹೆಸರಿಗೆ ಕಳಂಕ ತರುವ ಪ್ರಯತ್ನ ಎಂದು ವಿಜಯೇಂದ್ರ ಹೇಳಿದ್ದಾರೆ.

      ಕೆಆರ್‌ಎಸ್‌ ಅಣೆ ಕಟ್ಟು ಸುರಕ್ಷತೆ ದೃಷ್ಟಿಯಿಂದ ಕಲ್ಲು ಗಣಿಗಾರಿಕೆ ನಿಷೇಧಿಸಿ ಜಿಲ್ಲಾಡಳಿತ ಆದೇಶ ನೀಡಿದೆ. ಆದರೆ, ನಿಷೇಧಾಜ್ಞೆ ತೆರವುಗೊಳಿಸಲು ವಿಜಯೇಂದ್ರ ಲಂಚ ಕೊಟ್ಟಿರುವ ಬಗ್ಗೆ ಆರೋಪ ಮಾಡಲಾಗಿದೆ. ಆದರೆ, ಇದನ್ನು ಅವರು ತಳ್ಳಿ ಹಾಕಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+