ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯದಲ್ಲಿ ತಡವಾಗಿ ಬೆಳಕಿಗೆ ಬಂದ ಹನಿಟ್ರ್ಯಾಪ್ ಪ್ರಕರಣ: ಉದ್ಯಮಿಯಿಂದ ₹ 50 ಲಕ್ಷ ವಸೂಲಿ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಆಗಸ್ಟ್‌ 22: ಜಿಲ್ಲೆಯಲ್ಲಿ ಹನಿಟ್ರ್ಯಾಪ್ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದ್ದು, ಚಿನ್ನಾಭರಣ ಅಂಗಡಿ ಮಾಲೀಕನನ್ನು ಹನಿಟ್ರಾಪ್‌ಗೆ ಒಳಪಡಿಸಿ 50 ಲಕ್ಷ ರೂ. ವಸೂಲಿ ಮಾಡಿರುವ ಬಗ್ಗೆ ವರದಿಯಾಗಿದೆ. ನಗರದ ಮಹಾವೀರ ವೃತ್ತದಲ್ಲಿರುವ ಶ್ರೀನಿಧಿ ಗೋಲ್ಡ್ ಮಾಲೀಕ ಎಸ್. ಜಗನ್ನಾಥಶೆಟ್ಟಿ ಎಂಬುವರೇ ಹನಿಟ್ರ್ಯಾಪ್‌ಗೆ ಒಳಗಾಗಿ 50 ಲಕ್ಷ ಕಳೆದುಕೊಂಡವರಾಗಿದ್ದು, ಈ ಸಂಬಂಧ ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸುಭಾಷ್‌ನಗರ ಬಡಾವಣೆಯ ಸಲ್ಮಾಬಾನು, ಜಯಂತ್ ಹಾಗೂ ಇತರೆ ನಾಲ್ಕು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕೆಪಿಟಿಸಿಎಲ್‌ ಕಿರಿಯ ಸಹಾಯಕ ಹುದ್ದೆ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ, ಗದಗದಲ್ಲಿ ಅಪ್ಪ, ಮಗನಿಂದಲೇ ಡೀಲ್‌ಕೆಪಿಟಿಸಿಎಲ್‌ ಕಿರಿಯ ಸಹಾಯಕ ಹುದ್ದೆ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ, ಗದಗದಲ್ಲಿ ಅಪ್ಪ, ಮಗನಿಂದಲೇ ಡೀಲ್‌

ಘಟನೆ ವಿವರ
ಜಗನ್ನಾಥಶೆಟ್ಟಿ ಫೆಬ್ರವರಿ 26ರಂದು ರಾತ್ರಿ 8 ಗಂಟೆ ಸಮಯದಲ್ಲಿ ಮಂಗಳೂರಿಗೆ ಹೋಗಲು ಬಸ್ ನಿಲ್ದಾಣದ ಬಳಿ ನಿಂತಿದ್ದ ವೇಳೆ ಕಾರಿನಲ್ಲಿ ಬಂದಂತಹ ನಾಲ್ವರು ,ನಾವೂ ಮೈಸೂರಿಗೆ ಹೋಗುವವರಿದ್ದು, ನಮ್ಮ ಕಾರಿನಲ್ಲಿ ಬರುವಂತೆ ಕರೆದಿದ್ದಾರೆ. ಸ್ವಲ್ಪ ಪರಿಚಯವಿದ್ದ ಕಾರಣ ಜಗನ್ನಾಥ್ ಕಾರಿನಲ್ಲಿ ಹೋಗಿದ್ದಾರೆ . ಮೈಸೂರು ಸಿಟಿ ತಲುಪುತ್ತಿದ್ದಂತೆ ಕಾರಿನಲ್ಲಿದ್ದವರು ತಮ್ಮ ಬಳಿ ಇದ್ದ ಚಿನ್ನದ ಬಿಸ್ಕೇಟ್ ಮಾದರಿಯನ್ನು ತೆಗೆದು ಇದು ಚಿನ್ನದ ಬಿಸ್ಕೆಟ್ಟಾ ಎಂದು ಪ್ರಶ್ನಿಸಿದರು. ಈ ಬಗ್ಗೆ ಪರಿಶೀಲಿಸಬೇಕು ಎಂದು ತಿಳಿಸಿದಾಗ ಇಲ್ಲೇ ಬಂದು ನೋಡಿ ತಿಳಿಸಿ ಹೋಗುವಂತೆ ಬಲವಂತ ಮಾಡಿದ್ದಾರೆ. ಇದಕ್ಕೆ ಮೊದಲು ಜಗನ್ನಾಥಶೇಟ್ಟಿ ನಿರಾಕರಿಸಿದೆಯಾದರೂ, ಮತ್ತೆ ಅವರೊಂದಿಗೆ ಹೋಗಬೇಕಾಯಿತು ಎಂದು ದೂರಿನಲ್ಲಿ ತಿಳಿಸಿದ್ದಾರೆ.

Honey Trap of Jewellery shop Owner: A Woman Arrested in Mandya

ಬಳಿಕ ಅವರು ಖಾಸಗಿ ಹೊಟೇಲೊಂದರ ಕೊಠಡಿಗೆ ಕರೆದೊಯ್ದರು. ಅಲ್ಲಿಗೆ ಸಲ್ಮಾಬಾನು, ಜಯಂತ್ ಇತರರು ಕೊಠಡಿಯಿಂದ ಹೊರನಡೆದರು. ನಂತರ ಅದೇ ರೂಂಗೆ ಮತ್ತೊಬ್ಬ ಹುಡುಗಿ ಬಂದಳು. ಸ್ವಲ್ಪ ಸಮಯದ ಬಳಿಕ ಕೊಠಡಿಗೆ ಆಗಮಿಸಿದ ಸಲ್ಮಾಬಾನು, ಜಯಂತು ಇತರರು ತಮ್ಮ ಬಳಿ ಇದ್ದ ಮೊಬೈಲ್‌ನಲ್ಲಿ ಎಲ್ಲವನ್ನೂ ಚಿತ್ರೀಕರಿಸಿ ನನ್ನ ತಂಗಿಯ ಜೊತೆ ಲಾಡ್ಜ್‌ಗೆ ಬಂದಿದ್ದೀಯಾ ಎಂದು ಹೇಳಿ ನನ್ನ ಮೇಲೆ ಹಲ್ಲೆ ನಡೆಸಿದರಲ್ಲದೆ, 4 ಕೋಟಿ ನೀಡಬೇಕು ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದರು.

ಇದರಿಂದ ಆತಂಕಗೊಂಡ ನಾನು, ನನ್ನ ಸ್ನೇಹಿತರಾದ ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ಎಸ್. ಶ್ರೀನಿವಾಸಶೆಟ್ಟಿ ಅವರ ಮೂಲಕ ರಾಜಶ್ರೀ ಜ್ಯೂಯಲರ್ಸ್‌ನಿಂದ 25 ಲಕ್ಷ ಹಣ ತರಿಸಿಕೊಟ್ಟಿದ್ದೇನೆ. 23 ಲಕ್ಷ ರೂ.ಗಳನ್ನು ಮೈಸೂರಿನ ಸೂರ್ಯ ಜ್ಯೂಯಲರ್ಸ್‌ನಿಂದ ಆರೋಪಿಗಳೇ ಪಡೆದಿದ್ದಾರೆ. ಉಳಿದ ಎರಡು ಲಕ್ಷ ರೂ.ಗಳನ್ನು ಮೈಸೂರಿನ ಕಲ್ಪತರು ಸಿಲ್ವರ್ ಹೌಸ್‌ನಿಂದ ಆರೋಪಿಗಳು ಪಡೆದಿದ್ದರು. ಇಷ್ಟೆಲ್ಲಾ ಆದರೂ ಮತ್ತೆ ಈಗ ಹಣಕ್ಕಾಗಿ ಆರೋಪಿಗಳು ಪೀಡಿಸುತ್ತಿದ್ದು, ಇದರಿಂದ ಬೇಸತ್ತ ನಾನು ಪೊಲೀಸರಿಗೆ ದೂರು ನೀಡಬೇಕಾಯಿತು ಎಂದು ತಿಳಿಸಿದ್ದಾರೆ.

Honey Trap of Jewellery shop Owner: A Woman Arrested in Mandya

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಲ್ಮಾ ಬಾನು ಅವರನ್ನು ಬಂಧಿಸಿರುವ ಪೊಲೀಸರು ಆಕೆಯನ್ನು ನ್ಯಾಯಾಧೀಶರ ಮುಂದೆ ಹಾಜಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಸಂಶಯಗಳು ಇದ್ದು, ಪೊಲೀಸರ ಉನ್ನತ ಮಟ್ಟದ ತನಿಖೆಯಿಂದ ಮಾತ್ರ ಎಲ್ಲವೂ ಬಯಲಾಗಲಿದೆ.

Recommended Video

ಮುಂಬೈನ ರಸ್ತೆಯಲ್ಲಿ ಯಾರಿಗೂ ಗೊತ್ತಾಗದಂತೆ ಬೈಕ್ ನಲ್ಲಿ ಸುತ್ತಾಡಿದ ವಿರಾಟ್ ದಂಪತಿ | OneIndia Kannada

English summary
Mandya Police have arrested a woman for allegedly honey trapping a jewellery shop owner in Mandya. police said the accused extortion 50 lakh money from that person.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X