• search
 • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಡ್ಯ ಫಲಿತಾಂಶ, ಮತ್ತೊಂದು ಸಮೀಕ್ಷೆಗೆ ಸೂಚನೆ ಕೊಟ್ಟರೇ ಕುಮಾರಸ್ವಾಮಿ?

|
   ಮಂಡ್ಯ ಲೋಕಸಭೆ ಚುನಾವಣೆ ಬಗ್ಗೆ ಎಚ್ ಡಿ ಕುಮಾರಸ್ವಾಮಿ ಕೈಗೆ ಬಂತು 3 ರಿಪೋರ್ಟ್

   ಮಂಡ್ಯ, ಮೇ 4: ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆದಿದೆ. ಮಂಡ್ಯ ಫಲಿತಾಂಶ ಏನಾಗಬಹುದು ಎಂಬುದೇ ಸದ್ಯದ ಕುತೂಹಲವಾಗಿದೆ.

   ಕೆಲವರು ನಿಖಿಲ್ ಕುಮಾರಸ್ವಾಮಿ ಗೆಲ್ಲುತ್ತಾರೆ ಎಂದರೆ ಇನ್ನು ಕೆಲವರು ಸುಮಲತಾ ಅಂಬರೀಶ್ ಗೆಲ್ಲುವುದು ಖಚಿತ ಎಂದು ಹೇಳುತ್ತಿದ್ದಾರೆ.

   ಮಂಡ್ಯ ಫಲಿತಾಂಶದ ಕುರಿತು ಕುಮಾರಸ್ವಾಮಿಗೆ ಗುಪ್ತಚರ ಇಲಾಖೆ ವರದಿ

   ಇದು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೂ ತಲೆನೋವಾಗಿ ಪರಿಣಮಿಸಿದೆ.ಮಂಡ್ಯದ ಫಲಿತಾಂಶದ ಬಗ್ಗೆ ತೀರಾ ತಲೆ ಕೆಡಿಸಿಕೊಂಡಿರುವ ಸಿಎಂ ಕುಮಾರಸ್ವಾಮಿ ಇದೀಗ ಅಧಿಕಾರಿಗಳಿಗೆ ಮತ್ತೊಂದು ಸುತ್ತಿನ ಸಮೀಕ್ಷೆಗೆ ಆದೇಶಿಸಿದ್ದಾರೆ.

   ಮಂಡ್ಯದಲ್ಲಿ ಮೊದಲನೇ ಹಂತದಲ್ಲಿ ಏ.18ರಂದು ಚುನಾವಣೆ ನಡೆದಿತ್ತು.ಎಲ್ಲಾ ಚುನಾವಣೆಯಲ್ಲೂ ಜಾತಿ ಆಧಾರದಲ್ಲಿ ಗೆಲುವಿನ ಲೆಕ್ಕಾಚಾರ ನಡೆಯುವ ಮಂಡ್ಯದ ಕಣದಲ್ಲಿ ಮೊದಲ ಬಾರಿಗೆ ಅಭಿವೃದ್ಧಿ ಹಾಗೂ ಸ್ವಾಭಿಮಾನದ ಹೆಸರಲ್ಲಿ ಚುನಾವಣೆ ನಡೆದಿತ್ತು.

   ಚುನಾವಣೆ ಮುಗಿಯುತ್ತಿದ್ದಂತೆ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಒಂದು ಸುತ್ತಿನ ಸಮೀಕ್ಷೆ ನಡೆಸಲು ಸೂಚನೆ ನೀಡಿದ್ದರು.ಅದರಂತೆ ಸಮೀಕ್ಷೆ ನಡೆಸಿದ್ದ ಅಧಿಕಾರಿಗಳು ಸಹ ಕಡಿಮೆ ಅಂತರದಲ್ಲಿ ನಿಖಿಲ್ ಗೆಲುವು ಖಚಿತ ಎಂದು ವರದಿ ನೀಡಿದ್ದರು.

   ಮಂಡ್ಯದಲ್ಲಿ ನಡೆದಿದ್ದು, ಇನ್ಮುಂದೆ ನಡೆಯೋದು ದ್ವೇಷದ ರಾಜಕಾರಣನಾ?

   ಆದರೆ, ಸಿಎಂ ಇಷ್ಟಕ್ಕೆ ಸುಮ್ಮನಾಗದೆ ಮತ್ತೊಂದು ಸುತ್ತಿನ ಸಮೀಕ್ಷೆ ನಡೆಸಲು ಮುಂದಾಗಿದ್ದಾರೆ. ಮೊದಲ ಬಾರಿಗೆ ಮಂಡ್ಯದಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಅಧಿಕವಾಗಿತ್ತು. ಅಲ್ಲದೆ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ದರು.

   ಮಹಿಳೆಯರ ನಿರ್ಧಾರ ಏನು ಎಂಬುದರ ಆಧಾರದಲ್ಲಿ ಈ ಬಾರಿಯ ಮಂಡ್ಯದ ಚುನಾವಣಾ ಫಲಿತಾಂಶ ನಿರ್ಧಾರವಾಗಲಿದೆ. ಫಲಿತಾಂಶ ಕುಮಾರಸ್ವಾಮಿಗೆ ಸಕ್ಕರೆಯಾಗಲಿದೆಯೇ ಸುಮಲತಾ ಅವರಿಗೆ ಸಕ್ಕರೆಯಾಗಲಿದೆಯೇ ಎಂದು ಮೇ 23ರ ವರೆಗೆ ಕಾದು ನೋಡಬೇಕಿದೆ.

   ಸುಮಲತಾ ಔತಣಕೂಟದಲ್ಲಿ ಕಾಂಗ್ರೆಸ್ ನಾಯಕರು ಪಾಲ್ಗೊಂಡಿದ್ದಕ್ಕೆ ಬೇಸರ

   ಸುಮಲತಾ ಔತಣಕೂಟದಲ್ಲಿ ಕಾಂಗ್ರೆಸ್ ನಾಯಕರು ಪಾಲ್ಗೊಂಡಿದ್ದಕ್ಕೆ ಬೇಸರ

   ಮಂಡ್ಯ ರೆಬೆಲ್ ಶಾಸಕರು ಸುಮಲತಾ ಆಯೋಜಿಸಿದ್ದ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದು ಸಿಎಂ ಅಸಮಾಧಾನಕ್ಕೆ ಕಾರಣವಾಗಿದೆ ಎಂಬ ಚರ್ಚೆ ಕೇಳಿ ಬಂದಿದೆ. ರೆಬೆಲ್ ಮಂಡ್ಯ ಮುಖಂಡರ ವಿರುದ್ಧ ಕಾಂಗ್ರೆಸ್ ಕ್ರಮಕೈಗೊಳ್ಳಲು ಸಿಎಂ ದೂರು ನೀಡಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಮಂಡ್ಯ ರೆಬೆಲ್ ನಾಯಕರ ಪರವಾಗಿ ಬ್ಯಾಟಿಂಗ್ ಮಾಡಿದ್ದರಿಂದ ಸಿಎಂ ಅಸಮಾಧಾನಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತು.

   ಗುಪ್ತಚರ ಇಲಾಖೆಯಿಂದ ಮೂರು ಭಿನ್ನ ವರದಿ

   ಗುಪ್ತಚರ ಇಲಾಖೆಯಿಂದ ಮೂರು ಭಿನ್ನ ವರದಿ

   ಗುಪ್ತಚರ ಇಲಾಖೆಯೇ 3 ಭಿನ್ನ ವರದಿಗಳನ್ನು ನೀಡಿರುವುದು ಸಿಎಂ ಎಚ್‍ಡಿಕೆ ಅವರು ಅಸಮಾಧಾನಗೊಳ್ಳುವಂತೆ ಮಾಡಿದ್ದು, ಕಾಂಗ್ರೆಸ್ ನಾಯಕರ ವಿರುದ್ಧವೂ ದೂರು ನೀಡಲು ಕಾರಣ ಎನ್ನಲಾಗಿದೆ. ಪ್ರಮುಖವಾಗಿ ನಿಖಿಲ್ ರಾಜಕೀಯ ಭವಿಷ್ಯದ ಮೇಲೆ ಇದು ಹೆಚ್ಚು ಪ್ರಭಾವ ಉಂಟು ಮಾಡುವ ಕಾರಣದಿಂದ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಆದರೆ ಗುಪ್ತಚರ ಇಲಾಖೆ ಕೆಲ ಸ್ಯಾಂಪಲ್‍ಗಳ ಮೇಲೆಯೇ ವರದಿ ಸಿದ್ಧಪಡಿಸಿದೆ ಎನ್ನಲಾಗಿದ್ದು, ಫಲಿತಾಂಶ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

   ಸುಮಲತಾ ಹಿಂದೆ ಬಿದ್ದಿದೆ ಗುಪ್ತಚರ ಇಲಾಖೆ, ಚಲನವಲನದ ಮೇಲೆ ನಿಗಾ?

   ಗುಪ್ತಚರ ಇಲಾಖೆ ನೀಡಿದ 2ನೇ ವರದಿಯಲ್ಲೇನಿದೆ?

   ಗುಪ್ತಚರ ಇಲಾಖೆ ನೀಡಿದ 2ನೇ ವರದಿಯಲ್ಲೇನಿದೆ?

   ಗುಪ್ತಚರ ಇಲಾಖೆ ಮೊದಲ ವರದಿಯಲ್ಲಿ ನಿಖಿಲ್ ಭಾರೀ ಅಂತರದಿಂದ ಗೆಲುವು ಪಡೆಯಲಿದ್ದಾರೆ ಎಂದು ಹೇಳಿತ್ತು. ಆ ಬಳಿಕ ನೀಡಿದ 2ನೇ ವರದಿಯಲ್ಲಿ ಸುಮಲತಾ ಅವರು ಡೇಂಜರ್ ಝೋನ್‍ಗೆ ಹೋಗಲಿದ್ದು, ನಿಖಿಲ್ ಕಡಿಮೆ ಅಂತರದಲ್ಲಿ ಗೆಲುವು ಪಡೆಯಲಿದ್ದಾರೆ ಎಂದು ತಿಳಿಸಿತ್ತು. ಆದರೆ 3ನೇ ವರದಿಯಲ್ಲಿ ನಿಖಿಲ್ ಗೆಲುವು ಕಷ್ಟ ಆಗಲಿದ್ದು, ಗೆಲ್ಲುವ ಅವಕಾಶ ಶೇ.50 ರಷ್ಟು ಇದೆ. ಯಾರೇ ಗೆದ್ದರೂ ಟಫ್ ಫೈಟ್ ಇರಲಿದೆ ಎಂದು ಹೇಳಿತ್ತು.

   ಪ್ರಕೃತಿ ಚಿಕಿತ್ಸೆ ಬಳಿಕ ಹೋಮದ ಮೊರೆ ಹೋದ ಕುಮಾರಸ್ವಾಮಿ

   ಪ್ರಕೃತಿ ಚಿಕಿತ್ಸೆ ಬಳಿಕ ಹೋಮದ ಮೊರೆ ಹೋದ ಕುಮಾರಸ್ವಾಮಿ

   ಕೊಪ್ಪ ತಾಲೂಕಿನ ಕಮ್ಮರಡಿಗೆಯ ಉಮಾಮಹೇಶ್ವರಿ ದೇವಾಲಯದಲ್ಲಿ ಅಮಾವಾಸ್ಯೆಯಂದೇ ಕುಮಾರಸ್ವಾಮಿಯಿಂದ ವಿಶೇಷ ಪೂಜೆ ನಡೆಯಲಿದೆ ಎಂದು ಹೇಳಲಾಗಿದ್ದು, ಉಡುಪಿಯಿಂದ ಚಿಕ್ಕಮಗಳೂರಿಗೆ ಹೊರಟು ಸಿಎಂ ಶತ್ರು ಸಂಹಾರ, ಯಶಸ್ಸು ಹಾಗೂ ಶ್ರೇಯಸ್ಸಿಗಾಗಿ ಪೂಜೆ ಸಲ್ಲಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

   ಪ್ರಕೃತಿ ಚಿಕಿತ್ಸೆಯ ಬಳಿಕ ಹೋಮದ ಮೊರೆ ಹೋದ ಕುಮಾರಸ್ವಾಮಿ

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Chief minister HD Kumaraswamy instructed second round of survey of Loksabha election result in Mandya.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more