HD Kumaraswamy: ನನ್ನ ವಿರುದ್ಧ ಏನೇ ದಾಖಲೆ ಇದ್ದರು ಬಿಡುಗಡೆ ಮಾಡಿ; ಎಚ್‌.ಡಿ. ಕುಮಾರಸ್ವಾಮಿ ಸವಾಲು

ಮುಡಾ ಸೈಟು ಹಂಚಿಕೆ ಪ್ರಕರಣ ಇದೀಗ ಕಾಂಗ್ರೆಸ್ vs ಎಚ್‌ ಡಿ ಕುಮಾರಸ್ವಾಮಿ ಎನ್ನುವ ಹಂತಕ್ಕೆ ಬಂದು ನಿಂತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಡುವೆ ಇದೀಗ ಫೈಟ್ ಶುರುವಾಗಿದ್ದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೇರವಾಗಿ ಸವಾಲು ಹಾಕಿದ್ದಾರೆ. ನೂರು ಜನ್ಮ ಎತ್ತಿದರೂ ನನ್ನನ್ನು ನೀವು ಏನೂ ಮಾಡಲು ಆಗಲ್ಲ, ನನ್ನ ವಿರುದ್ಧ ಏನೇ ದಾಖಲೆ ಇದ್ದರು ಬಿಡುಗಡೆ ಮಾಡಿ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲಾಕಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಎಚ್‌ಡಿ ಕುಮಾರಸ್ವಾಮಿ, ನಾನು ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಕಾಂಗ್ರೆಸ್‌ನವರು ಅದನ್ನು ಮಾಡುತ್ತಿದ್ದಾರೆ. ನನ್ನ ವಿರುದ್ಧ ಏನು ಮಾಡ್ತೀರಾ ಮಾಡಿ, ನಾನು ಎಲ್ಲಕ್ಕೂ ಸಿದ್ಧವಾಗಿದ್ದೇನೆ ಅವರು ರೇಬಾನ್ ಗ್ಲಾಸ್ ಹಾಕುತ್ತಾರೆ, ನಾನು ಕನ್ನಡಕ ಹಾಕೋದೆ ಇಲ್ಲ, ನನ್ನ ವಿರುದ್ಧ ಷಡ್ಯಂತ್ರ ಮಾಡಿದರೆ ದೇವರೇ ತೀರ್ಪು ಕೊಡುತ್ತಾನೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

HD Kumaraswamy open Challenge to CM Siddaramaiah

ದಾಖಲೆ ಇದ್ದರೆ ಬಿಡುಗಡೆ ಮಾಡಿ

ನೀವು ನೂರು ಜನ್ಮ ಎತ್ತಿ ಬಂದರೂ ನನ್ನನ್ನು ಏನೂ ಮಾಡುವುಕ್ಕಾಗುವುದಿಲ್ಲ. ನನ್ನ ವಿರುದ್ಧ ಏನೇ ದಾಖಲೆ ಇದ್ದರೂ ಬಿಡುಗಡೆ ಮಾಡಲಿ, ದಾಖಲೆಗಳನ್ನು ಕಾರಲ್ಲೇ ಇಟ್ಟುಕೊಂಡು ಓಡಾಡುತ್ತಿದ್ದಾರಂತೆ. ಅದೇನಿದೆ, ಬೇಕಿದ್ದರೆ ಜನರ ಮುಂದೆ ಇಡಲಿ, ನಾನು ಅವರ ದಾಖಲೆ ಬಿಡುಗಡೆ ಮಾಡೋದು ಇರಲಿ, ಅವೇ ಹೊರಗೆ ಬರುತ್ತಿವೆ ಎಂದರು.

ಸಾಯಿ ವೆಂಕಟೇಶ್ವರದಲ್ಲಿ ಏನೂ ಇಲ್ಲವೇ, ನನ್ನ ವಿರುದ್ಧ ಬಲವಾದ ಸಾಕ್ಷಿ ಹುಡುಕಬಾರದಾ, ಅಧಿಕಾರಿಗಳು ಮಿಸ್‌ಗೈಡ್ ಮಾಡಿದ್ದಾರೆ ಎಂದು ಸಂತೋಷ್ ಹೆಗಡೆ ಹೇಳಿದ್ದಾರೆ. ನಾನು ದುಡ್ಡು ಹೊಡೆದಿದ್ದೇನೆ ಎಂದು ಲೋಕಾಯುಕ್ತ ಹೇಳಿಲ್ಲ. ಸತ್ತಿರೋ ಕೇಸ್ ಇದು. ಇದನ್ನು ಇಟ್ಟುಕೊಂಡು ದಿನ ಕುಮಾರಸ್ವಾಮಿನ ಏನು ಮಾಡ್ತೀವಿ ನೋಡಿ ಅಂತಿದ್ದಾರೆ. ಏನು ಬೇಕಾದರೂ ಮಾಡಿಕೊಳ್ಳಲಿ ಎಂದು ಹೇಳಿದರು.

ಸರ್ಕಾರ ತೆಗಿತೀನಿ ಎಂದು ಮೋದಿಗೆ ನಾನು ಮಾತು ಯಾಕೆ ಕೊಡಲಿ, ನಾನು ಏನು ಜ್ಯೋತಿಷಿನಾ, ಸರ್ಕಾರ ಬೀಳುತ್ತೆ ಅಂತ ಹೇಳುವುದಕ್ಕೆ, ಸರ್ಕಾರ ಬೀಳಿಸೋಕೆ ನೂರು ಕೋಟಿ ಕೊಟ್ಟು ಖರೀದಿ ಮಾಡಬೇಕಾ, ನೂರು ಕೋಟಿ ಏನು ಕಡ್ಲೆ ಪುರಿನಾ? ಸರ್ಕಾರ ತೆಗೆಯೋಗೆ 5 ಸಾವಿರ ಕೋಟಿನಾ, 5 ಸಾವಿರ ಕೋಟಿನಾ, ಪ್ರಿಂಟಾಕಿಕೊಂಡು ಕೂತಿದ್ದಾರಾ ಇಲ್ಲಿ. ನನ್ನ ಬಗ್ಗೆ ಭಜನೆ ಮಾಡದಿದ್ದರೆ ಅವರಿಗೆ ಸಮಾಧಾನ ಇರಲ್ಲ, ದಿನಾ ನನ್ನ ಭಜನೆ ಮಾಡುತ್ತಾರೆ ನಾನು ಏನು ಮಾಡಲಿ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+