ಕು.ರಮ್ಯಾ ಕ್ಯಾಂಟೀನ್‌ಗೆ ಊಟಕ್ಕೆ ಬರ್ತಾರೆ ರಮ್ಯಾ!
ಮಂಡ್ಯ, ಡಿಸೆಂಬರ್ 06 : ಮಂಡ್ಯದಲ್ಲಿ ಕು.ರಮ್ಯಾ ಕ್ಯಾಂಟೀನ್ ಆರಂಭವಾಗಿ ನಾಲ್ಕು ದಿನಗಳು ಕಳೆದಿವೆ. ಮಾಜಿ ಸಂಸದೆ ರಮ್ಯಾ ಅವರು ಕ್ಯಾಂಟೀನ್‌ಗೆ ಬಂದು ಒಂದು ದಿನ ಊಟ ಮಾಡುವೆ ಎಂದು ಟ್ವಿಟ್ ಮಾಡಿದ್ದಾರೆ.
ಮಂಡ್ಯದ ಅಶೋಕ ನಗರದ ತ್ರಿವೇಣಿ ರಸ್ತೆಯಲ್ಲಿ ಕು.ರಮ್ಯಾ ಕ್ಯಾಂಟೀನ್ ಭಾನುವಾರ ಆರಂಭವಾಗಿದೆ. 15 ವರ್ಷಗಳಿಂದ ರಸ್ತೆ ಬದಿ ಕ್ಯಾಂಟೀನ್ ನಡೆಸುತ್ತಿದ್ದ ರಘು ಎಂಬುವವರು ರಮ್ಯಾ ಮೇಲಿನ ಅಭಿಮಾನದಿಂದ ಕ್ಯಾಂಟೀನ್ ಆರಂಭಿಸಿದ್ದಾರೆ.

'ರಮ್ಯಾ ಅವರು ಸಂಸದೆಯಾಗಿದ್ದಾಗ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಹಳ್ಳಿಗಳಿಗೆ ಭೇಟಿ ನೀಡಿ ಜನರ ಕಷ್ಟಗಳನ್ನು ಆಲಿಸಿದ್ದಾರೆ. ಆದ್ದರಿಂದ, ಅವರ ಹೆಸರಿನಲ್ಲಿ ಕ್ಯಾಂಟೀನ್ ಆರಂಭ ಮಾಡಿದ್ದೇನೆ' ಎಂದು ರಘು ಹೇಳಿದ್ದರು.
ಕು.ರಮ್ಯಾ ಕ್ಯಾಂಟೀನ್ ಆರಂಭದ ಸುದ್ದಿ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದು He's got the smarts! Will come by some day and have a meal! ಎಂದು ಟ್ವಿಟ್ ಮಾಡಿದ್ದಾರೆ.

ಕು.ರಮ್ಯಾ ಕ್ಯಾಂಟೀನ್‌ನಲ್ಲಿ ಮಸಾಲೆ, ಪ್ಲೇನ್ ದೋಸೆ, ಇಡ್ಲಿ-ವಡೆ, ಅನ್ನ-ಸಾಂಬಾರು, ರಾಗಿ ಮುದ್ದೆ, ರಾಗಿ ಗಂಜಿ ಸಿಗತ್ತದೆ. ಊಟ, ಉಪಹಾರದ ದರ ಕೇವಲ 10 ರೂಪಾಯಿಗಳಾಗಿವೆ.
ನ.29ರಂದು ರಮ್ಯಾ ಅವರ ಹುಟ್ಟು ಹಬ್ಬ ಅವರು ಅಂದು ಮಂಡ್ಯಕ್ಕೆ ಭೇಟಿ ನೀಡುವರು ಎಂದು ಅಂದಾಜಿಸಲಾಗಿತ್ತು. ಆದರೆ, ಮಂಡ್ಯಕ್ಕೆ ಆಗಮಿಸದೇ ನೂರಾರು ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದ್ದರು.












Click it and Unblock the Notifications