ರಕ್ಷಣಾ ಸಚಿವರು ಹೇಳಿದಂತೆ ಪಾಕಿಸ್ತಾನವಿಲ್ಲ: ರಮ್ಯಾ

By: ಮಂಡ್ಯ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಆಗಸ್ಟ್ 20: ಕೇಂದ್ರ ರಕ್ಷಣಾ ಸಚಿವ ಮನೋಹರ್ ಪೆರಿಕ್ಕರ್ ಅವರು 'ಪಾಕಿಸ್ತಾನಕ್ಕೆ ಹೋದರೆ ನರಕಕ್ಕೆ ಹೋದಂತೆ' ಎಂಬ ಹೇಳಿಕೆಯನ್ನು ಮಾಜಿ ಸಂಸದೆ ರಮ್ಯಾ ಆಕ್ಷೇಪಿಸಿದ್ದು, ಪಾಕಿಸ್ತಾನವನ್ನು ಹೊಗಳಿದ್ದಾರೆ. ನಾನು ಮೋದಿ ಅವರನ್ನು ದ್ವೇಷಿಸುವುದಿಲ್ಲ. ಅವರ ಕೆಲವು ನಿಲುವುಗಳಿಗೆ ನನ್ನ ಸಹಮತವಿಲ್ಲ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಕ್ಷಣಾ ಸಚಿವರು ಹೇಳಿದಂತೆ ಪಾಕಿಸ್ತಾನವಿಲ್ಲ. ಅಲ್ಲಿಯ ಜನ ನಮ್ಮ ರೀತಿನೇ ಇದ್ದಾರೆ. ಸಾರ್ಕ್ ಕಾನ್ಫರೆನ್ಸ್ ನಲ್ಲಿ ನನ್ನನ್ನು ಚೆನ್ನಾಗಿಯೇ ನೋಡಿಕೊಂಡರು. ಅನ್ಯೋನ್ಯವಾಗಿಯೇ ಮಾತನಾಡಿಸಿದರು ಎಂದು ಹೇಳುವ ಮೂಲಕ ಹುಬ್ಬೇರುವಂತೆ ಮಾಡಿದರು. [ರಮ್ಯಾ ಎಂಎಲ್ಸಿ ಆಗುತ್ತಿಲ್ಲ, ಮತ್ತೆ ಹಂಗಾದ್ರೆ ಯಾರಿಗೆ ಚಾನ್ಸ್?]

Former MP Ramya Divyaspanda on Pakistan Manohar Parrikar

ಮಂಡ್ಯದಲ್ಲಿ ಮನೆ : ಮಂಡ್ಯದಲ್ಲಿ ಮನೆ ಮಾಡುವ ಬಯಕೆ ವ್ಯಕ್ತಪಡಿಸಿದ ಅವರು, ತೊಟ್ಟಿ ಮನೆ ನನಗೆ ಇಷ್ಟ. ಪಟ್ಟಣದಲ್ಲಿ ಸಿಗುತ್ತಿಲ್ಲ. ಹಳ್ಳಿಯಲ್ಲಿ ಸಿಕ್ಕರೂ ಅಲ್ಲಿಗೆ ಜನ ಬರಲ್ಲ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ, ಎಲ್ಲ ಸರಿ ಹೋದರೆ ಶ್ರಾವಣ ಮಾಸದಲ್ಲಿಯೇ ಮಂಡ್ಯದಲ್ಲಿ ಮನೆ ಮಾಡಿ ಮನೆ ಗೃಹ ಪ್ರವೇಶ ಮಾಡುವ ಇಂಗಿತ ವ್ಯಕ್ತಪಡಿಸಿದರು.[ಪಾಪ ರಮ್ಯಾಗೆ ಏನು ತಿಳಿದಿಲ್ಲ, ಅವಳನ್ನು ದೂಷಿಸಬೇಡಿ: ಅಂಬರೀಶ್]

ಮಂಡ್ಯದಲ್ಲಿ ಪಕ್ಷದ ನಾಯಕತ್ವ ವಹಿಸಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲೆಯ ರಾಜಕಾರಣದಲ್ಲಿ ಹಲವು ಹಿರಿಯ ನಾಯಕರಿದ್ದಾರೆ. ಅವಕಾಶ ಸಿಕ್ಕಿದರೆ ಕೆಲಸ ಮಾಡುತ್ತೇನೆ. ಆದರೆ, ನಾಯಕತ್ವ ವಹಿಸಿಕೊಳ್ಳಲು ಇದು ಸರಿಯಾದ ಸಮಯವಲ್ಲ ಎಂದರು.

ನೀರ್ ದೋಸೆ ಸಿನಿಮಾದ ಟ್ರೈಲರ್ ಕುರಿತಂತೆ ಹೇಳಿದ ಅವರು, ನಾನಿನ್ನೂ ನೀರ್ ದೋಸೆ ಸಿನಿಮಾದ ಟ್ರೈಲರ್ ನೋಡಿಲ್ಲ. ಅದರ ಬಗ್ಗೆ ಕೇಳಿದ್ದೇನೆ. ಬಹಳ ಸಿನಿಮಾಗಳಲ್ಲಿ ನನ್ನ ಬಗ್ಗೆ ಮಾತನಾಡಿದ್ದಾರೆ, ಏನೇನೋ ಹೇಳಿದ್ದಾರೆ. ಸಿನಿಮಾ ಮನರಂಜನೆ ಅಷ್ಟೆ, ಅದರಿಂದ ನನಗೇನೂ ಕೆಟ್ಟದಾಗಲ್ಲ ಹೀಗಾಗಿ ತಲೆಕೆಡಿಸಿಕೊಳ್ಳುವ ಅವಶ್ಯಕತೆಯೇ ಇಲ್ಲ ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
I don't hate Modi at all. I differ with him on issues. Pakistan treated us delegates very well & I said as is. Defence minister Manohar Parrikar view on Pakistan is different said Former MP from Mandya Ramya alias Divyaspanda.
Please Wait while comments are loading...