ಮಂಡ್ಯದ ಕೊಳೆಗೇರಿಗಳಲ್ಲಿ ಬಿಎಸ್ ವೈ ಜನಸಂಪರ್ಕ ಯಾತ್ರೆ

Posted By:
Subscribe to Oneindia Kannada

ಮಂಡ್ಯ, ಜೂನ್ 15: ಜನ ಸಂಪರ್ಕ ಅಭಿಯಾನದ ಅಂಗವಾಗಿ ಮಾಜಿ ಮುಖ್ಯಮಂತ್ರಿ ಬಿಎಸ್ ವೈ ಕೈಗೊಂಡಿರುವ ಪ್ರವಾಸದ ಹಿನ್ನೆಲೆಯಲ್ಲಿ ಅವರು ಗುರುವಾರ (ಜೂನ್ 15) ಮಂಡ್ಯದಲ್ಲಿ ವಿವಿಧ ಕೊಳೆಗೇರಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದರು.

ಮೊದಲಿಗೆ ಕೊತ್ತನಹಳ್ಳಿಯ ದಲಿತ ಕಾಲೋನಿಗಳಲ್ಲಿ ಪಾದಯಾತ್ರೆ ನಡೆಸಿ, ಡಾ. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿದರು.

ಒಂದು ದಿನಕ್ಕೂ ದಲಿತರ ಮನೆಯಲ್ಲಿ ಊಟ ಮಾಡದ ಸಿದ್ದರಾಮಯ್ಯ: ಬಿಎಸ್ ವೈ

/news/mandya/former-chief-minister-bs-yeddyurappa-visits-dalits-slum-during-his-jana-samparka-abhiyana-119928.html

ನಂತರ ಸಮೃದ್ಧತೆಯ ಸಂಕೇತವಾಗಿ ಸಸಿ ನೆಡುವ ಅಭಿಯಾನವನ್ನು ನಡೆಸಿದರು. ಇದೇ ವೇಳೆ ದೇಶಹಳ್ಳಿಯಲ್ಲಿ ಬರದಿಂದ ಬತ್ತಿ ಹೋಗಿರುವ ಕೆರೆಯ ವೀಕ್ಷಣೆ ಮಾಡಿದರು.

ಶಿವರಾಮ ಕಾರಂತ ಬಡಾವಣೆಯಲ್ಲಿ ಡಿನೋಟಿಫೈ, ಬಿಎಸ್ವೈ ಮೇಲೆ ಎಸಿಬಿಗೆ ದೂರು

/news/mandya/former-chief-minister-bs-yeddyurappa-visits-dalits-slum-during-his-jana-samparka-abhiyana-119928.html

ಆನಂತರ, ಮಂಡ್ಯದಲ್ಲಿ ಸ್ಲಂ ನಿವಾಸಿಗಳನ್ನು ಭೇಟಿಯಾಗಿ ಅವರ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು. ತಮ್ಮ ಅಭಿಯಾನದ ಉದ್ದಕ್ಕೂ ಬಡವರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಅಹವಾಲುಗಳನ್ನು ಸ್ವೀಕರಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Former Chief Minister BS Yeddyurappa's Jana Samparka Abhiyana enters Mandya on June 15, 2017. During this campaign, he visited slums of Dalits and listened to the problems of the slum people.
Please Wait while comments are loading...