ಗೌಡ-ನಾಯ್ಡು ಹೇಳಿಕೆ: ಸಂಸದ ಶಿವರಾಮೇಗೌಡ ವಿರುದ್ಧ ಎಫ್‌ಐಆರ್

ಮಂಡ್ಯ, ಏಪ್ರಿಲ್ 04: ಸುಮಲತಾ ಅಂಬರೀಶ್ ಮತ್ತು ಅವರ ಬೆಂಬಲಿಗ ಚಿತ್ರರಂಗದ ನಟರುಗಳ ಮೇಲೆ ಎಗ್ಗಿಲ್ಲದೆ ಮಾತಿನ ಛಾಟಿ ಬೀಸುತ್ತಿರುವ ಸಂಸದ ಶಿವರಾಮೇಗೌಡ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

'ಸುಮಲತಾ ಅಂಬರೀಶ್, ದರ್ಶನ್, ರಾಕ್‌ಲೈನ್ ವೆಂಕಟೇಶ್ ಇವರೆಲ್ಲಾ ಗೌಡರಲ್ಲ, ಇವರೆಲ್ಲಾ ನಾಯ್ಡುಗಳು, ಮಂಡ್ಯವನ್ನು ನಾಯ್ಡುಗಳ ಕೈಗೆ ಕೊಡಬೇಡಿ' ಎಂದಿದ್ದರು, ಇದೇ ಹೇಳಿಕೆ ಅವರಿಗೆ ಮುಳುವಾಗುತ್ತಿದೆ.

ಎಲ್‌.ಆರ್.ಶಿವರಾಮಗೌಡ ಅವರು ಜಾತಿಗಳ ಮಧ್ಯೆ ಸಂಘರ್ಷ ಹುಟ್ಟುಹಾಕುವ ಯತ್ನ ಮಾಡುತ್ತಿದ್ದಾರೆ ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಕಬಾಳಯ್ಯ ಅವರು ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.

FIR lodged against Mandya JDS MP LR Shivaramegowda

ಚುನಾವಣಾಧಿಕಾರಿ ಸೂಚನೆಯಂತೆ ಪೀಪಲ್ ರೆಪ್ರೆಸೆಂಟೇಶನ್ ಆಕ್ಟ್‌ ಸೆಕ್ಷನ್ 125 ಪ್ರಕಾರ ಶಿವರಾಮೇಗೌಡ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಶಿವರಾಮೇಗೌಡ ಅವರು ಮಂಡ್ಯ ಚುನಾವಣೆಯಲ್ಲಿ ಜೆಡಿಎಸ್ ನ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಪ್ರಚಾರ ನಡೆಸುತ್ತಿದ್ದು, ಅವರ ಹೇಳಿಕೆಗಳು ರಾಜ್ಯ ಮಟ್ಟದಲ್ಲಿ ಸುದ್ದಿ ಮಾಡುತ್ತಿವೆ. ಸುಮಲತಾ ಅವರ ಜಾತಿ, ದರ್ಶನ್-ಯಶ್ ಬಗ್ಗೆಯೂ ಅವರು ಲಘುವಾಗಿ ಮಾತನಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+