ಮುನಿರತ್ನ ಶಾಸಕತ್ವ ವಜಾಕ್ಕೆ ಆಗ್ರಹ: ಮಂಡ್ಯದಲ್ಲಿ ದಲಿತ, ರೈತ ಸಂಘಟನೆಗಳ ಪ್ರತಿಭಟನೆ

ಮಂಡ್ಯ, ಸೆಪ್ಟೆಂಬರ್‌ 20: ಬೆಂಗಳೂರು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರು ದಲಿತರು ಹಾಗೂ ಒಕ್ಕಲಿಗ ಸಮಾಜದ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿದ್ದಾರೆ. ಈ ಕಾರಣದಿಂದ ಅವರ ಶಾಸಕತ್ವವನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ರೈತ ಸಂಘಟನೆ, ದಲಿತ ಸಂಘಟನೆಗಳ ಒಕ್ಕೂಟ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.

ಪಾಂಡವಪುರ ಪಟ್ಟಣದ ಐದು ದೀಪದ ವೃತ್ತದ ಬಳಿ ಸೇರಿದ ಪ್ರತಿಭಟನಾಕಾರರು ತಾಲೂಕು ಕಚೇರಿಯಗೆ ಮೆರವಣಿಗೆ ನಡೆಸಿದರು. ಈ ವೇಳೆ ಶಾಸಕ ಮುನಿರತ್ನ ವಿರುದ್ಧ ಧಿಕ್ಕಾರದ ಘೋಷಣೆಯನ್ನು ಕೂಗಿ, ಮುನಿರತ್ನ ಅವರ ಶಾಸಕತ್ವವನ್ನು ರದ್ದುಮಾಡಿ ಎಂದು ಪ್ರತಿಭಟನೆಯಲ್ಲಿ ಆಗ್ರಹಿಸಿದರು.

Farmer Organizations Protested In Mandya For Demanding Munirathna s Dismissal As MLA

ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್ ಕೆಂಪುಗೌಡ, 'ಎರಡು ಬಾರಿ ಅಧಿಕಾರದಲ್ಲಿ ಇದ್ದವರು, ಅವರಿಗೆ ಏನು ಮಾತಾಡಬೇಕು ಎಂದು ಕನಿಷ್ಠ ಜ್ಞಾನ ಇಲ್ಲ. ಅಂದಮೇಲೆ ನಾವು ಯೋಚನೆ ಮಾಡಬೇಕು. ಇದು ನಮ್ಮ ರಾಜ್ಯದಲ್ಲಿ ಅಂತ ಅಲ್ಲ, ಇಡಿ ದೇಶದಲ್ಲೇ ಈ ತರ ಲಘುವಾಗಿ ಮಾತನಾಡುವುದು ಜಾಸ್ತಿ ಆಗಿದೆ.'

'ನಾವೇ ಜನಪ್ರತಿನಿಧಿಗಳಿಗೆ ಬುದ್ದಿ ಕಲಿಸಬೇಕು. ಸಾಮಾನ್ಯ ಜನರೇ ಅವರಿಗೆ ಬುದ್ದಿ ಕಲಿಸಬೇಕು.ಇವತ್ತಿನ ಸಮಸ್ಯೆ ಬಗ್ಗೆ ಯಾರು ಚಿಂತೆ ಮಾಡುವುದಿಲ್ಲ. ಇವರು ಹಣ ಅಧಿಕಾರ ಇದೆ ಅಂತ ಬಾಯಿಗೆ ಬಂದಹಾಗೆ ಮಾತನಾಡುತ್ತಾರೆ. ಇದನ್ನು ನಾವು ಖಂಡಿಸುತೇವೆ. ಇನ್ನು ಮುಂದೆ ನಿಮಗೆ ಮಾನ ಮರ್ಯಾದೆ ಇದ್ದಾರೆ ಸರಿಯಾಗಿ ಮಾತನಾಡುವುದನ್ನು ಕಲಿಯಿರಿ. ಯಾರು ಮೇಲು ಕೀಳು ಎಂದು ಇಲ್ಲ. ಸಂವಿಧಾನದಲ್ಲಿ ಎಲ್ಲರೂ ಸಮಾನರು ಆದರೆ, ಈಗ ಮುನಿರತ್ನ ಮಾತನಾಡಿರುವುದಕ್ಕೆ ಶಾಸಕತ್ವವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸುತ್ತೇವೆ' ಎಂದರು.

Farmer Organizations Protested In Mandya For Demanding Munirathna s Dismissal As MLA

ಈ ಪ್ರತಿಭಟನೆಯಲ್ಲಿ ದಲಿತ ಮುಖಂಡ ಡಿ. ಕೆ ಅಂಕಯ್ಯ, ರೈತ ಸಂಘದ ತಾಲೂಕು ಅಧ್ಯಕ್ಷ ಕೆನ್ನಾಳು ನಾಗರಾಜು, ಹಿರಿಯ ದಲಿತ ಮುಖಂಡರಾದ ಹಾಳಯ್ಯ , ಬ್ಯಾಡರಹಳ್ಳಿ ಪ್ರಕಾಶ್, ಶೋಷಿತರು ಹಾಗೂ ಸಾಮಾಜಿಕ ಕಾರ್ಯಕರ್ತರ ಸಮಿತಿಯ ತಾಲ್ಲೂಕು ಅಧ್ಯಕ್ಷ ಚಿಕ್ಕಾಡೆ ಮದನ್ ಕುಮಾರ್, ರೈತ ಸಂಘದ ತಾಲ್ಲೂಕು ಉಪಾಧ್ಯಕ್ಷ ಹಾರೋಹಳ್ಳಿ ಲಕ್ಷ್ಮೇಗೌಡ ಸೇರಿದಂತೆ ಇನ್ನು ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+