ಮಂಡ್ಯದಲ್ಲಿ ವಿಷ ಸೇವಿಸಿ ರೈತ ಆತ್ಮಹತ್ಯೆ
ಮಂಡ್ಯ, ಡಿಸೆಂಬರ್ 22: ವಿಷ ಸೇವಿಸಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಜಿಲ್ಲೆ ಮದ್ದೂರು ಸಮೀಪದ ಕಬ್ಬಾರೆಯಲ್ಲಿ ಜರುಗಿದೆ.
ಕಬ್ಬಾರೆ ಗ್ರಾಮದ ನಿವಾಸಿ ಬೋರೇಗೌಡ ಆತ್ಮಹತ್ಯೆ ಮಾಡಿಕೊಂಡ ರೈತರಾಗಿದ್ದು, ಇವರು ವವಿಧ ಬ್ಯಾಂಕುಗಳಲ್ಲಿ 4ಲಕ್ಷ ಚಿನ್ನಾಭರಣ ಸಾಲ ಪಡೆದಿದ್ದರು. ಅಲ್ಲದೆ ಲೇವಾದೇವಿದಾರರಿಂದ 3ಲಕ್ಷ ಹೆಚ್ಚುವರಿ ಸಾಲ ಪಡೆದಿದ್ದರು. 3ಎಕರೆ ಜಮೀನಿನಲ್ಲಿ ಕಬ್ಬು ಟಮೋಟೋ ಬೆಳೆದು ನಷ್ಟಹೊಂದಿದ ಪರಿಣಾಮ ಮನನೊಂದು ಕ್ರಿಮಿನಾಶಕ ಸೇವಿಸಿದ್ದರು.

ಇವರನ್ನು ಪಟ್ಟಣ, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ ಸಾವನ್ನಪ್ಪಿದರು. ಮೃತರ ಪತ್ನಿ ವನಿತಾ ನೀಡಿದ ದೂರಿನ ಮೇರೆಗೆ ಪಟ್ಟಣ ಠಾಣೆ ಪೊಲಿಸರು ಪ್ರಕರಣ ದಾಖಲಿಸಿದ್ದಾರೆ.
ಮೃತ ರೈತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಜೆಡಿಎಸ್ ಜಿಲ್ಲಾ ಯುವ ಪ್ರಧಾನ ಕಾರ್ಯದರ್ಶಿ ಬ್ಯಾಡರಹಳ್ಳಿ ಶಿವಕುಮಾರ್ ಆಗ್ರಹಿಸಿದ್ದಾರೆ.












Click it and Unblock the Notifications