ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯದ ಗಂಡು ಅಂಬಿಗೆ ಮದ್ದೂರಿನಲ್ಲಿ ಸಿದ್ಧವಾಯ್ತು ಗುಡಿ

By Coovercolly Indresh
|
Google Oneindia Kannada News

ಮಂಡ್ಯ, ನವೆಂಬರ್‌ 17: ತಮ್ಮ ನೆಚ್ಚಿನ ನಾಯಕ ನಟನ ಅಥವಾ ಆರಾಧ್ಯ ಪುರುಷನ ಮೇಲಿನ ಅಭಿಮಾನದ ಪ್ರತೀಕವಾಗಿ ಅವರ ಪ್ರತಿಮೆಯನ್ನು ನಿರ್ಮಿಸುವುದು ವಾಡಿಕೆ. ಕೆಲವೊಮ್ಮೆ ಅವರಿಗೆಂದು ಗುಡಿಯನ್ನೂ ನಿರ್ಮಿಸಿ ಪೂಜಿಸುತ್ತಾರೆ. ಈ ರೀತಿಯಾಗಿ ಅವರ ನೆನಪನ್ನು ಅಜರಾಮರಗೊಳಿಸಲು ಪ್ರಯತ್ನಿಸುತ್ತಾರೆ ಅಭಿಮಾನಿಗಳು.

ನಮ್ಮ ದೇಶದಲ್ಲಿಯೂ ಸಿನಿಮಾ ನಟ ನಟಿಯರಿಗೆ ಇಂತಹ ಗೌರವ ಹೆಚ್ಚು. ಇದೀಗ ಮಂಡ್ಯ ಜಿಲ್ಲೆಯಿಂದ ಸಂಸದರಾಗಿದ್ದ ದಿವಂಗತ ಅಂಬರೀಶ್ ಅವರಿಗೂ ಅವರ ಅಭಿಮಾನಿಗಳು ಇದೇ ರೀತಿಯ ಗೌರವ ಸಮರ್ಪಣೆಗೆ ಮುಂದಾಗಿದ್ದಾರೆ. ಅವರ ನೆನಪಿಗಾಗಿ ಅಭಿಮಾನಿಗಳು ಗುಡಿಯನ್ನು ಕಟ್ಟಿದ್ದಾರೆ. ಮುಂದೆ ಓದಿ...

 ಅಂಬಿ ನೆನಪಲ್ಲಿ ಗುಡಿ ಕಟ್ಟಿದ ಅಭಿಮಾನಿಗಳು

ಅಂಬಿ ನೆನಪಲ್ಲಿ ಗುಡಿ ಕಟ್ಟಿದ ಅಭಿಮಾನಿಗಳು

ಅಂಬರೀಶ್ ಅವರ ಎರಡನೇ ವರ್ಷದ ಪುಣ್ಯ ಸ್ಮರಣೆಯು ಇದೇ ನವೆಂಬರ್ 24ಕ್ಕೆ ನಡೆಯಲಿದೆ. ಇದಕ್ಕಾಗಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೊಟ್ಟೆಗೌಡನ ದೊಡ್ಡಿ ಗ್ರಾಮದಲ್ಲಿ ತಮ್ಮ ನೆಚ್ಚಿನ ನಟನ ನೆನಪಿಗಾಗಿ ಅಭಿಮಾನಿಗಳು ಗುಡಿಯೊಂದನ್ನು ನಿರ್ಮಿಸಿದ್ದಾರೆ.

ಅಂಬರೀಶ್ ಹೇಳುತ್ತಿದ್ದ ಮಾತು ನೆನಪಿಸಿಕೊಂಡು ಧೈರ್ಯ ತಂದುಕೊಂಡೆಅಂಬರೀಶ್ ಹೇಳುತ್ತಿದ್ದ ಮಾತು ನೆನಪಿಸಿಕೊಂಡು ಧೈರ್ಯ ತಂದುಕೊಂಡೆ

 ಅಂಬಿ ಕಂಚಿನ ಪುತ್ಥಳಿ ನಿರ್ಮಾಣ

ಅಂಬಿ ಕಂಚಿನ ಪುತ್ಥಳಿ ನಿರ್ಮಾಣ

ಗುಡಿಯನ್ನು ಕಟ್ಟಿ, ಆ ಗುಡಿಯಲ್ಲಿ ಅಂಬರೀಶ್ ಅವರ ಕಂಚಿನ ಪುತ್ಥಳಿ ನಿರ್ಮಾಣ ಮಾಡಿದ್ದಾರೆ. ಈ ಗುಡಿಯನ್ನು ಸುಮಾರು 8 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದ್ದು ಈ ಕಂಚಿನ ಪುತ್ಥಳಿಯನ್ನು ಪ್ರತಿಷ್ಠಾಪಿಸುವ ಮುನ್ನ ಅಂಬರೀಶ್ ಚಿತಾಭಸ್ಮವನ್ನು ಅಭಿಮಾನಿಗಳು ಪುತ್ಥಳಿ ನಿರ್ಮಾಣ ಸ್ಥಳದಲ್ಲಿ ಹಾಕಿದ್ದಾರೆ. ಈ ಗುಡಿಗೆ "ಅಂಬಿ ಅಮರ" ಎಂದು ಹೆಸರಿಟ್ಟಿದ್ದಾರೆ. ಈ ಮೂಲಕ ತಮ್ಮ ನೆಚ್ಚಿನ ನಟನ ನೆನಪನ್ನು ಅಜರಾಮರಗೊಳಿಸಲು ಮುಂದಾಗಿದ್ದಾರೆ.

 ಸುಮಲತಾರಿಂದ ಅಂಬರೀಶ್ ಪ್ರತಿಮೆ ಅನಾವರಣ

ಸುಮಲತಾರಿಂದ ಅಂಬರೀಶ್ ಪ್ರತಿಮೆ ಅನಾವರಣ

ಚಿತಾಭಸ್ಮವನ್ನು ತಂದು ಒಂದು ವರ್ಷದ ಕಾಲ ಪೂಜಿಸಿ ನಂತರ ಪುತ್ಥಳಿ ನಿರ್ಮಾಣದ ವೇಳೆ ಅದೇ ಸ್ಥಳದಲ್ಲಿ ಹಾಕಲಾಗಿದೆ. ನಂತರ ಪ್ರತಿಮೆ ಸ್ಥಾಪಿಸಲಾಗಿದೆ. ಇದೇ ತಿಂಗಳ 24ರಂದು ಅಂಬಿ ಪುತ್ಥಳಿಯನ್ನು ಅವರ ಪತ್ನಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅನಾವರಣ ಮಾಡಲಿದ್ದಾರೆ.

ನಿರ್ದಯ ರಾಜಕಾರಣಕ್ಕೆ ಚಡಪಡಿಸುತ್ತಿದ್ದ ಅಂಬಿ: ಸಿದ್ದರಾಮಯ್ಯ ಒಗಟು ಟ್ವೀಟ್ನಿರ್ದಯ ರಾಜಕಾರಣಕ್ಕೆ ಚಡಪಡಿಸುತ್ತಿದ್ದ ಅಂಬಿ: ಸಿದ್ದರಾಮಯ್ಯ ಒಗಟು ಟ್ವೀಟ್

Recommended Video

ವಿದ್ಯಾರ್ಥಿಗಳು ಕೋರೋನಾಗೆ ತಲೆ ಕೆಡ್ಸ್ಕೋತಿಲ್ಲ!! | Oneindia Kannada
 ಊರಿನ ಹಬ್ಬದಂತೆ ಅಂಬಿ ಹುಟ್ಟುಹಬ್ಬ ಆಚರಣೆ

ಊರಿನ ಹಬ್ಬದಂತೆ ಅಂಬಿ ಹುಟ್ಟುಹಬ್ಬ ಆಚರಣೆ

ಅಂಬರೀಶ್ ಇದ್ದಾಗ ಅವರ ಹುಟ್ಟುಹಬ್ಬವನ್ನು ತಮ್ಮದೇ ಗ್ರಾಮದ ಹಬ್ಬ ಎಂಬಂತೆ ಅಭಿಮಾನಿಗಳು ಅದ್ಧೂರಿಯಿಂದ ಆಚರಣೆ ಮಾಡುತ್ತಿದ್ದರು. ಈಗ ಅವರ ನೆನಪಿನಲ್ಲಿ ಗುಡಿ ನಿರ್ಮಿಸಿ ಅಂಬಿಯನ್ನು ಪೂಜಿಸಲು ಅಭಿಮಾನಿಗಳು ಮುಂದಾಗಿದ್ದಾರೆ. ಈ ಮೂಲಕ ತಮ್ಮ ಅಭಿಮಾನವನ್ನು ಮೆರೆದಿದ್ದಾರೆ.

English summary
Actor Ambareesh Fans built temple and statue of Ambareesh at Hottegowdana Doddi in Maddur of Mandya district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X