ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತ್ರಿವೇಣಿ ಸಂಗಮ ಕುಂಭ ಮೇಳ ಉದ್ಘಾಟಿಸಿದ ಡಾ.ಡಿ ವೀರೇಂದ್ರ ಹೆಗ್ಗಡೆ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಅಕ್ಟೋಬರ್‌ 14: ತ್ರಿವೇಣಿ ಸಂಗಮದ ಶ್ರೀ ಶ್ರೀ ಶ್ರೀ ಮಲೈ ಮಹದೇಶ್ವರ ಮಹಾ ಕುಂಭ ಮೇಳ ಮಹೋತ್ಸವವನ್ನು ರಾಜ್ಯಸಭಾ ಸದಸ್ಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಉದ್ಘಾಟನೆ ಮಾಡಿದರು.

ಅಂಬಿಗರಹಳ್ಳಿಯ ತ್ರಿವೇಣಿ ಸಂಗಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ಮಲೈ ಮಹದೇಶ್ವರ ಸ್ವಾಮಿಯ ಪ್ರತಿಷ್ಠಾಪನೆ ಮಾಡಲಾಗಿದ್ದು, ಅಕ್ಟೋಬರ್‌ 14ರಿಂದ ಅಕ್ಟೋಬರ್‌ 16ರ ಬೆಳಗ್ಗೆಯವರೆಗೂ ಕುಂಭಮೇಳ ಸಂಬಂಧಪಟ್ಟಂತೆ ಕಳಸ ಪೂಜೆಗಳು ಹಾಗೂ ಇನ್ನಿತರ ಪೂಜಾ ಕಾರ್ಯಕ್ರಮಗಳು ನಡೆಯಲಿದೆ. ಇಂದು ಸಂಜೆ ವಾರಣಾಸಿಯ ಕಾಶಿಯ ಮಾದರಿಯಲ್ಲಿ ಕಾವೇರಿ ನದಿಯ ತ್ರಿವೇಣಿ ಸಂಗಮದಲ್ಲಿ ವಿಶೇಷ ಗಂಗಾರತಿ ಕೂಡ ನೆರವೇರಲಿದೆ.

ಕೊಪ್ಪಳ; ಅಕ್ಟೋಬರ್ 15ರಂದು ಮಿನಿ ಉದ್ಯೋಗ ಮೇಳ ಕೊಪ್ಪಳ; ಅಕ್ಟೋಬರ್ 15ರಂದು ಮಿನಿ ಉದ್ಯೋಗ ಮೇಳ

ಮಹಾಕುಂಭ ಮೇಳದ ಕಾರ್ಯಕ್ರಮಗಳ ವಿವರ ಇಲ್ಲಿದೆ.

ಅಕ್ಟೋಬರ್ 14 ರ ಬೆಳಿಗ್ಗೆ 4 ಗಂಟೆಯಿಂದ ನೂತನ ವಿಗ್ರಹಕ್ಕೆ ಅಷ್ಟ ಬಂಧನ, ಪ್ರಾಣ ಪ್ರತಿಷ್ಠಾಪನೆ, ರುದ್ರಾಭಿಷೇಕ, ಕುಂಭಾಭಿಷೇಕ ಹಾಗೂ ಪೂಜಾ ಕೈಂಕರ್ಯ ನಡೆದಿದೆ. ಬೆಳಗ್ಗೆ 10.30 ರಿಂದ 11 ಗಂಟೆವರೆಗೆ ನೂತನ ಮಲೆ ಮಹದೇಶ್ವರ ಮೂರ್ತಿ ಪ್ರತಿಷ್ಠಾಪನೆ, ಮಹಾಮಂಗಳಾರತಿ 3 ಜ್ಯೋತಿಗಳಿಗೆ ಪೂಜಾ ಕೈಂಕರ್ಯ, ಕಾವೇರಿ ನದಿ ಪೂಜೆ ಬಾಗಿನ ಸಮರ್ಪಣೆ, ವಿವಿಧ ವಸ್ತು ಪ್ರದರ್ಶನ ಮಳಿಗೆಗಳ ಉದ್ಘಾಟನೆ ಮಾಡಲಾಗ ದೆ.

Dr.D.Veerendra Heggade Inaugurated Triveni Sangam Kumbh Mela

ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ.ವಿರೇಂದ್ರ ಹೆಗ್ಗಡೆ ಮತ್ತು ಸಾಧು-ಸಂತರರು ಕುಂಭಮೇಳ ಉದ್ಘಾಟನೆ ಮಾಡಿದ್ದಾರೆ.

ಮಧ್ಯಾಹ್ನ 3 ರಿಂದ 4:30 ಗಂಟೆವರೆಗೆ ಶ್ರೀ ಮಳವಳ್ಳಿ ಮಹದೇವಸ್ವಾಮಿ ಮತ್ತು ತಂಡದವರಿಂದ ಜಾನಪದ ಗೀತೆ ಕಾರ್ಯಕ್ರಮಕ್ರಮ ನಡೆಯಲಿದೆ. ಬಳಿಕ ಸಂಜೆ 5 ರಿಂದ 6-30 ರವರೆಗೆ ಗಂಗಾವತಿ ಪ್ರಾಣೇಶ್ ಪ್ರೋ. ಕೃಷ್ಣೇಗೌಡ, ಹಿರೇಮಗಳೂರು ಕಣ್ಣನ್, ಸುಧಾ ಬರಗೂರುರವರಿಂದ ಹಾಸ್ಯ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಸಂಜೆ 6-30 ರಿಂದ 7 ಗಂಟೆವರೆಗೆ ವಾರಣಾಸಿಯ ಕಾಶಿಯ ಮಾದರಿಯಲ್ಲಿ ಕಾವೇರಿ ನದಿಯ ತ್ರಿವೇಣಿ ಸಂಗಮದಲ್ಲಿ ವಿಶೇಷ ಗಂಗಾರತಿ ನಡೆಯಲಿದೆ.

Dr.D.Veerendra Heggade Inaugurated Triveni Sangam Kumbh Mela

ಇಂದಿನ ಕುಂಭಮೇಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರು ಸ್ವಾಮಿ ಮುಕ್ತಿದಾನಂದ ಜೀ ಮಹಾರಾಜ್, ಕಾಗಿನೆಲೆ ಕನಕಗುರು ಪೀಠ ಶ್ರೀ ಶ್ರೀ ಶಿವಾನಂದಪುರಿ ಸ್ವಾಮೀಜಿ, ಬೇಬಿ ಮಠ ಮತ್ತು ಚಂದ್ರವನ ಆಶ್ರಮ ಶ್ರೀ ಶ್ರೀ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಶ್ರೀ ಮಲೆ ಮಹದೇಶ್ವರ ಬೆಟ್ಟ ಸುಕ್ಷೇತ್ರ ಶ್ರೀ ಸಾಲೂರು ಬೃಹನ್ಮಠ ಪೀಠಾಧ್ಯಕ್ಷರು ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಯವರು, ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಕೆ.ಗೋಪಾಲಯ್ಯ, ರೇಷ್ಮೆ, ಯುವಸಬಲೀಕರಣ ಹಾಗೂ ಕ್ರೀಡೆ ಸಚಿವರಾದ ಡಾ. ನಾರಾಯಣಗೌಡ,ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್ ಅಶ್ವಥ್ ನಾರಾಯಣ್,ಮುಜರಾಯಿ ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ, ಜಿಲ್ಲಾಧಿಕಾರಿ ಎಸ್.ಅಶ್ವತಿ, ಜಿಲ್ಲಾ ಪಂಚಾಯತಿ ಸಿಇಒ ಶಾಂತ ಎಲ್. ಹುಲ್ಮನಿ, ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಉಪವಿಭಾಗಾಧಿಕಾರಿ ಬಿ.ಸಿ ಶಿವಾನಂದಮೂರ್ತಿ, ತಹಶೀಲ್ದಾರ್ ರೂಪ, ಸಣ್ಣ ಸ್ವಾಮಿಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

English summary
Rajya sabha member dr.d.veerendra heggade inaugurated triveni sangam kumbh mela
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X