ಕುಟುಂಬ ರಾಜಕಾರಣದ ಬಗ್ಗೆ ಯಡಿಯೂರಪ್ಪರನ್ನು ಪ್ರಶ್ನಿಸಿದ ಅನಿತಾ ಕುಮಾರಸ್ವಾಮಿ

Recommended Video

      ಕುಟುಂಬ ರಾಜಕಾರಣದ ವಿಷಯಕ್ಕೆ ಬಿ ಎಸ್ ವೈರನ್ನ ಪ್ರಶ್ನಿಸಿದ ಅನಿತಾ ಕುಮಾರಸ್ವಾಮಿ | Oneindia kannada

      ಮದ್ದೂರು, ಮಾರ್ಚ್ 5: ನಮ್ಮದು ಕುಟುಂಬ ರಾಜಕಾರಣ ಅಂತೀರಲ್ಲ ಹಾಗಾದರೆ ಬಿಎಸ್ ಯಡಿಯೂರಪ್ಪ ಅವರ ಕುಟುಂಬದ್ದೇನು ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

      ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಲು ಯಾರಿಗೂ ಹಕ್ಕಿಲ್ಲ, ಕುಟುಂಬ ರಾಜಕಾರಣ ಎಲ್ಲಿಲ್ಲ, ಯಡಿಯೂರಪ್ಪನವರ ಮಗ ರಾಜಕೀಯದಲ್ಲಿಲ್ವಾ, ಸಿದ್ದರಾಯಮ್ಯ ಪುತ್ರ ರಾಜಕೀಯದಲ್ಲಿಲ್ವಾ ಎಂದು ಪ್ರಶ್ನಿಸಿದರು.

      ನಾವು ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ, ವಿರೋಧಿಗಳು ಇದ್ದೇ ಇರುತ್ತಾರೆ. ಇರಲೇಬೇಕಲ್ವಾ? ಎಂದು ಸುಮಲತಾ ಸ್ಟರ್ಧೆ ಬಗ್ಗೆಗಿನ ಪ್ರಶ್ನೆಗೆ ಉತ್ತರಿಸಿದರು.

      Dont accused our family for dynasty politics

      ನಾವು ಹಿಂಭಾಗಿಲಿನಿಂದ ಬಂದು ರಾಜಕೀಯ ಮಾಡುತ್ತಿಲ್ಲ. ಜನರ ಬಳಿ ಮತ ಹಾಕಿಸಿಕೊಂಡೇ ರಾಜಕೀಯ ಮಾಡುತ್ತಿದ್ದೇವೆ. ಹಾಗೊಂದು ವೇಳೆ ಹಾಗೆ ಹೇಳಿದರೆ ಅವರು ವಿಕೃತ ಮನಸ್ಸುಳ್ಳವರು. ನಾವು ಬದ್ಧತೆ ಇಟ್ಟುಕೊಂಡು ರಾಜಕೀಯ ಮಾಡುವವರು ಎಂದು ಹೇಳಿದರು.

      ನಿಖಿಲ್ ಚುನಾವಣೆಗೋಸ್ಕರ ಮನೆ ಮಾಡಬೇಕೆನ್ನುತ್ತಿಲ್ಲ. ವಿಧಾನಸಭೆ ಚುನಾವಣೆ ಸಂದರ್ಭದಿಂದಲೂ ಮನೆ ಮಾಡುವ ಬಗ್ಗೆ ಹೇಳುತ್ತಿದ್ದ. ನನ್ನ ಪೂಜೆಗೂ ನಿಖಿಲ್ ಸ್ಪರ್ಧೆಗೂ ಸಂಬಂಧವಿಲ್ಲ. ನಾನು ಮೊದಲಿಂದಲೂ ದೈವ ಭಕ್ತೆ. ಎಷ್ಟು ವಾರ ಬೇಕಾದರೂ ಬಂದು ಪೂಜೆ ಸಲ್ಲಿಸುತ್ತೇನೆ ಎಂದು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+