ಗೆಳೆಯನ ಜತೆ ಸಲಿಗೆ ಆಕ್ಷೇಪಿಸಿದ್ದಕ್ಕೆ ವೈದ್ಯೆಯಿಂದ ಪತಿಗೆ ಜೀವ ಬೆದರಿಕೆ

ಮಂಡ್ಯ, ನವೆಂಬರ್ 28: ಅತಿಯಾದ ಗೆಳೆತನ ಒಳ್ಳೇದಲ್ಲ ಎಂದು ಪತ್ನಿಗೆ ಬುದ್ಧಿಮಾತು ಹೇಳಿದ್ದಕ್ಕೆ ಪತಿ ಮನೆಗೆ ಹೋಗಿ ಗಲಾಟೆ ಮಾಡಿ ಜೀವ ಬೆದರಿಕೆ ಹಾಕಿರುವ ಘಟನೆ ಇಲ್ಲಿನ ಕಲ್ಲಹಳ್ಳಿಯಲ್ಲಿ ನಡೆದಿದೆ.

ಪತ್ನಿ ಲಕ್ಷ್ಮಿ ಸೇರಿದಂತೆ ಹರೀಶ, ಪೃಥ್ವಿ ಹಾಗೂ ಸೆಲ್ವಿ ಎಂಬ ನಾಲ್ವರು ಗುರುವಾರ ಪತಿ ವೆಂಕಟೇಶ್‌ ಅವರ ಮನೆಗೆ ಬಂದು ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ವೆಂಕಟೇಶ್ ಅವರು ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಹತ್ತು ವರ್ಷಗಳ ಹಿಂದೆ ನಾನು ಡಾ.ಲಕ್ಷ್ಮಿ ಅವರನ್ನು ಪ್ರೀತಿಸಿ ವಿವಾಹವಾಗಿದ್ದೆ. ಲಕ್ಷ್ಮಿಯು ಮಂಡ್ಯ ಇನ್ ಸ್ಟಿಟ್ಯೂಟ್‌ ಆಫ್‌ ಮೆಡಿಕಲ್ ಸೈನ್ಸ್‌ ನಲ್ಲಿ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ನಾವು 2019ರ ವರೆಗೂ ಬಹಳ ಅನೋನ್ಯವಾಗಿದ್ದೆವು. ನಮಗೆ 10 ವರ್ಷದ ಮಗ ಸಹ ಇದ್ದಾನೆ. ಈ ನಡುವೆ ಹರೀಶ್ ಎಂಬಾತ ನನ್ನ ಹೆಂಡತಿಗೆ ಪರಿಚಯವಾಗಿದ್ದು, ಆತ ನಿತ್ಯ ಮನೆಗೆ ಬರುತ್ತಿದ್ದ. ನಾನು ಪತ್ನಿಯನ್ನು ಕೇಳಿದಾಗ ಸ್ನೇಹಿತ ಎಂದಿದ್ದರು. ನಂತರ ಅವರಿಬ್ಬರ ಒಡನಾಟ ನೋಡಿ, ಇದೆಲ್ಲ ಸರಿಯಿಲ್ಲ. ಅವರ ಜೊತೆ ಓಡಾಡಬೇಡ ಮತ್ತು ಆತ ನಮ್ಮ ಮನೆಗೆ ಬರುವುದು ಬೇಡ ಎಂದು ಬುದ್ಧಿಮಾತು ಹೇಳಿದೆ.

Mandya: Doctor Threaten Husband For Objecting To Friendship

ಇದರಿಂದ ಕೋಪಗೊಂಡು ಗುರುವಾರ ರಾತ್ರಿ ಲಕ್ಷ್ಮಿ ಸೇರಿದಂತೆ ಹರೀಶ, ಪೃಥ್ವಿ ಹಾಗೂ ಸೆಲ್ವಿ ಮನೆಗೆ ಏಕಾಏಕಿ ನುಗ್ಗಿ ನಮ್ಮ ತಂದೆ ಮೇಲೆ ಹಲ್ಲೆ ಮಾಡಿ ನನಗೆ ಜೀವ ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ದೂರಿದ್ದಾರೆ.

ನನ್ನ ಪತ್ನಿ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದು, ನಾನು ಹರೀಶ್‌ನನ್ನೇ ಮದುವೆಯಾಗುತ್ತೇನೆ. ನೀನು ನನಗೆ ಡೈವರ್ಸ್ ಕೊಡಬೇಕು ಎಂದಿದ್ದಾಳೆ. ಇದಲ್ಲದೆ ಹರೀಶ್ ಸಹ ನಿನ್ನನ್ನು ಮೂರು ವರ್ಷ ಜೈಲಿಗೆ ಕಳುಹಿಸುತ್ತೀನಿ ನೋಡುತ್ತಿರು ಎಂದು ಬೆದರಿಕೆ ಹಾಕಿದ್ದಾನೆ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ. ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+