• search

ಮಂಡ್ಯ: ಭತ್ತದ ಕೊಯ್ಲಿಗೆ ತಡವಾಗಿ ಬಂದ ಸಿಎಂ, ವಾಪಸ್ ಹೊರಟ ರೈತರು

Subscribe to Oneindia Kannada
For mandya Updates
Allow Notification
For Daily Alerts
Keep youself updated with latest
mandya News
    ಮಂಡ್ಯ: ಭತ್ತದ ಕೊಯ್ಲಿಗೆ ತಡವಾಗಿ ಬಂದ ಸಿಎಂ, ವಾಪಸ್ ಹೊರಟ ರೈತರು | Oneindia Kannada

    ಮಂಡ್ಯ, ಡಿಸೆಂಬರ್ 07: ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸೀತಾಪುರದಲ್ಲಿ ತಾವೇ ಕೆಲವು ತಿಂಗಳ ಹಿಂದೆ ನಾಟಿ ಮಾಡಿದ್ದ ಭತ್ತದ ಕೊಯ್ಲಿನ ಕಾರ್ಯಕ್ರಮಕ್ಕೆ ಸಿಎಂ ಕುಮಾರಸ್ವಾಮಿ ಅವರು ತಡವಾಗಿ ಬಂದರು. ಸಿಎಂ ಬರುವಿಕೆಗಾಗಿ ಕಾದು ಸುಸ್ತಾಗಿದ್ದ ಹಲವು ರೈತರು ಮನೆಗಳಿಗೆ ವಾಪಸ್ಸು ತೆರಳಿದ್ದರು.

    ಸಿಎಂ ಬರುತ್ತಾರೆಂದು ಬಹಳಷ್ಟು ಜನ ರೈತರು, ಸ್ಥಳೀಯರು ಸ್ಥಳದಲ್ಲಿ ಹಾಜರಿದ್ದರು, ಆದರೆ ಸಿಎಂ ಬರುವುದು ತಡವಾದ ಕಾರಣ ಬಹಳಷ್ಟು ಜನ ವಾಪಸ್ ಹೋಗಿದ್ದರು. ಕೆಲವರಷ್ಟೆ ಉಳಿದಿದ್ದರು. ಸಿಎಂ ಸಹ ಆತುರವಾಗಿ ಮಬ್ಬುಗತ್ತಲಿನಲ್ಲಿ, ಮೊಬೈಲ್‌ ಬೆಳಕಿನಲ್ಲಿ ಭತ್ತ ಕೊಯ್ಲು ಮಾಡಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ರೈತರ ಜೊತೆಗೂಡಿ ಭತ್ತದ ಕೊಯ್ಲು ಮಾಡಲು ಮುಂದಾಗಿರುವ ನಿರ್ಧಾರದಿಂದ ಈ ಭಾಗದ ರೈತರಲ್ಲಿ ಮತ್ತಷ್ಟು ಉತ್ಸಾಹ ಮೂಡಿದ್ದು, ಕೊಡಗಿನಲ್ಲಿ ಉತ್ತಮ ಮಳೆಯಿಂದ ನಾಡಿನ ರೈತರು ಕೃಷಿಯಲ್ಲಿ ಭತ್ತ ಬೆಳೆಯಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು.

    ಪ್ರತಾಪ್ ಸಿಂಹಗೆ ಭಾಷಣ ನಿಲ್ಲಿಸಿ ಸಾಕು ಎಂದು ಸಿಎಂ ಕುಮಾರಸ್ವಾಮಿ

    ರೈತರ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಲಾಗಿದ್ದು, ರೈತರ ಸಾಲಮನ್ನಾವನ್ನು ಹಂತ ಹಂತವಾಗಿ ಮಾಡಲಾಗುತ್ತ್ತದೆ.ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಮೆ ಮಾಡಿಕೊಳ್ಳಬಾರದು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.

    ಮಂಡ್ಯದ 535 ಕೋಟಿ ಸಾಲಮನ್ನಾ

    ಮಂಡ್ಯದ 535 ಕೋಟಿ ಸಾಲಮನ್ನಾ

    ದೊಡ್ಡಬಳ್ಳಾಪುರ ಹಾಗೂ ಸೇಡಂನಲ್ಲಿ ಸಾಲಮನ್ನಾ ಕಾರ್ಯಕ್ರಮಕ್ಕೆ ಡಿಸೆಂಬರ್ 8 ರಂದು ಚಾಲನೆ ನೀಡಲಾಗುತ್ತಿದ್ದು ಮೊದಲ ಹಂತವಾಗಿ ರಾಜ್ಯದಲ್ಲಿ 9,480 ಕೋಟಿ ರೈತರ ಸಾಲಮನ್ನಾ ಮಾಡಲಾಗುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ 535 ಕೋಟಿ ರೈತರ ಸಾಲಮನ್ನಾ ಮಾಡಲಾಗುತ್ತಿದ್ದು, ಮುಂದೆ ಹಂತ ಹಂತವಾಗಿ 45 ಸಾವಿರ ಕೋಟಿ ಸಾಲಮನ್ನಾ ಮಾಡುಲಾಗುವುದು. ಇದರಿಂದ ರೈತರು ನೆಮ್ಮದಿ ಜೀವನ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.

    ಸಾಲಮನ್ನಾ:ಮೊದಲ ಋಣಮುಕ್ತ ಪತ್ರ ಪಡೆಯಲಿದ್ದಾರೆ ದೊಡ್ಡಬಳ್ಳಾಪುರ ರೈತರು

    ಭತ್ತ ಖರೀದಿ ಕೇಂದ್ರ ಸ್ಥಾಪನೆಗೆ ಸೂಚನೆ

    ಭತ್ತ ಖರೀದಿ ಕೇಂದ್ರ ಸ್ಥಾಪನೆಗೆ ಸೂಚನೆ

    ಭತ್ತ ಖರೀದಿ ಕೇಂದ್ರವನ್ನು ರಾಜ್ಯದಲ್ಲಿ ಪ್ರಾರಂಭಿಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದು, ರೂ 1,850 ಭತ್ತಕ್ಕೆ ಬೆಂಬಲ ಬೆಲೆಯನ್ನು ಸರ್ಕಾರ ಘೋಷಿಸಿದ್ದು, ರೈತರು ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಕೈಗೆ ಭತ್ತವನ್ನು ನೀಡಿ ನಷ್ಟ ಅನುಭವಿಸಬಾರದು ಎಂದು ರೈತರಿಗೆ ಮನವಿ ಮುಖ್ಯ ಮಂತ್ರಿಗಳು ಮಾಡಿದರು.

    ಬ್ಯಾಂಕ್‌ನಿಂದ ನೋಟಿಸ್, ಏನು ಮಾಡಬೇಕು ಎಂದು ಸಿಎಂಗೆ ರೈತನ ಪತ್ರ

    50 ಸಾವಿರ ರೈತ ಮಕ್ಕಳಿಗೆ ಉದ್ಯೋಗ

    50 ಸಾವಿರ ರೈತ ಮಕ್ಕಳಿಗೆ ಉದ್ಯೋಗ

    ರೈತರು ಬೆಳೆಯುವ ಬೆಳೆಗಳ ರಕ್ಷಣೆ ಮಾಡುವುದು ಹಾಗೂ ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆ ಮಾಡಲಾಗುವುದು. ರೈತರು ಸಾವಯವ ಕೃಷಿ ಕಡೆ ಮಾಡಲು ಸರ್ಕಾರ ಯೋಜನೆಯನ್ನು ರೂಪಿಸುತ್ತಿದ್ದು. ದೂರದೃಷ್ಠಿಯಿದ ಕೆ.ಆರ್.ಎಸ್ ನಲ್ಲಿ ಡಿಸ್ನಿಲ್ಯಾಂಡ್ ಮಾಡುವುದರಿಂದ ರೈತ ಕುಟುಂಬ 50 ಸಾವಿರ ಮಕ್ಕಳಿಗೆ ಉದ್ಯೋಗ ಸೃಷ್ಠಿಯಾಗುತ್ತದೆ. ಇದರಿಂದ ಆರ್ಥಿಕವಾಗಿ ಸದೃಡವಾಗಲು ಸಾಧ್ಯವಾಗುತ್ತದೆ ಹಾಗೂ ಪ್ರವಾಸೋದ್ಯಮ ಬೆಳೆವಣಿಗೆ ಸಾಧ್ಯವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

    ನಿಖಿಲ್ ಮದುವೆ, ಪ್ರತ್ಯಂಗಿರ ಯಾಗ: ಏಕಾಗಿ ಎಚ್ ಡಿಕೆ ಶೃಂಗೇರಿ ಭೇಟಿ?

    ವಿಸಿ ಕಾಲುವೆಗೆ ತಡೆಗೋಡೆ

    ವಿಸಿ ಕಾಲುವೆಗೆ ತಡೆಗೋಡೆ

    ವಿಸಿ ಕಾಲುವೆ ಇರುವ ಎಲ್ಲಾ ಕಡೆ ತಡೆಗೋಡೆಗಳನ್ನು ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಆಗುವ ಅವಗಡಗಳನ್ನು ತಡೆಯಲು ತಡೆಗೋಡೆ ನಿರ್ಮಾಣ ಮಾಡುವ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

    ರೈತರಿಂದ ಸಿಎಂಗೆ ಕ್ಲಾಸ್‌, ಮತ್ತೆ ಹಂಗಿನ ಮಾತಾಡಿದ ಕುಮಾರಸ್ವಾಮಿ

    ಕನಗನಮರಡಿಯಲ್ಲಿ ಪರಿಹಾರ ವಿತರಣೆ

    ಕನಗನಮರಡಿಯಲ್ಲಿ ಪರಿಹಾರ ವಿತರಣೆ

    ಸೀತಾಪುರ ಗ್ರಾಮದ ಭತ್ತ ಕಟಾವು ಕಾರ್ಯಕ್ರಮದ ಬಳಿಕ ಪಾಂಡವಪುರ ತಾಲ್ಲೂಕಿನ ಕನಗನಮುರಡಿ ಗ್ರಾಮದ ಬಳಿ ನಾಲೆಗೆ ಬಸ್ ಉರುಳಿ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ವದೇಸಮುದ್ರ ಗ್ರಾಮದಲ್ಲಿ ಸಾಂತ್ವನ ಹೇಳಿ ಪರಿಹಾರದ ಚೆಕ್ ವಿತರಣೆ ಮಾಡಿದರು. ಅಪಘಾತದಲ್ಲಿ ಸಾವಿಗೀಡಾದ ಪ್ರತಿ ಮೃತರ ಕುಟುಂಬದ ಸದಸ್ಯರಿಗೆ ತಲಾ ರೂ 5 ಲಕ್ಷ ಸರ್ಕಾರ ಚೆಕ್‍ನ್ನು ಮುಖ್ಯಮಂತ್ರಿಯವರು ನೀಡಿದರು. ನವೆಂಬರ್ 24 ರಂದು ನಡೆದ ಬಸ್ ದುರಂತದಲ್ಲಿ 30 ಮಂದಿ ಮೃತಪಟ್ಟಿದ್ದು, ಹೆಚ್ಚಿನ ಜನರು ವದೇ ಸಮುದ್ರ ಗ್ರಾಮದವರಾಗಿದ್ದರು.

    ಹಲವರು ಮುಖಂಡರು ಭಾಗಿ

    ಹಲವರು ಮುಖಂಡರು ಭಾಗಿ

    ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವರಾದ ಸಾರಾ ಮಹೇಶ್, ಮಂಡ್ಯ ಉಸ್ತುವಾರಿ ಸಚಿವರಾದ ಸಿ.ಎಸ್.ಪುಟ್ಟರಾಜು, ಮಂಡ್ಯ ಲೋಕಸಭಾ ಸದಸ್ಯರಾದ ಎಲ್.ಆರ್.ಶಿವರಾಮೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ನಾಗರತ್ನಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಶ್ರೀಕಂಠೇಗೌಡ, ಅಪ್ಪಾಜಿಗೌಡ ಹಾಗೂ ಮಂಡ್ಯ ಜಿಲ್ಲಾಧಿಕಾರಿಗಳಾದ ಎನ್.ಮಂಜುಶ್ರೀ ಅವರು ಉಪಸ್ಥಿತರಿದ್ದರು.

    ಇನ್ನಷ್ಟು ಮಂಡ್ಯ ಸುದ್ದಿಗಳುView All

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    CM Kumaraswamy cut paddy in Mandya district Sitapura village. He came late to the paddy cuttingt program. many farmers were waiting there for CM but as he came late many of them gone back.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more