ಆ. 21ರಂದು ಕೆಆರ್‌ಎಸ್, ಕಬಿನಿಗೆ ಸಿಎಂ ಬಾಗಿನ ಅರ್ಪಣೆ
ಬೆಂಗಳೂರು, ಆ. 16: ಕೃಷ್ಣರಾಜಸಾಗರ ಹಾಗೂ ಕಬಿನಿ ಜಲಾಶಯಗಳು ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇದೇ ಆಗಸ್ಟ್ 21ರಂದು ಬಾಗಿನವನ್ನು ಅರ್ಪಿಸಲಿದ್ದಾರೆ.
Recommended Video
Americaಗೆ ಹೊಟ್ಟೆ ಉರಿಸಲು #Russia ಮಾಡಿದ ಪ್ಲಾನ್ ಇದು | Oneindia Kannada
ಗಣೇಶ ಹಬ್ಬದ ಹಿಂದಿನ ದಿನ ಕೃಷ್ಣರಾಜಸಾಗರ ಅಣೆಕಟ್ಟಿಗೆ ಸಿಎಂ ಯಡಿಯೂರಪ್ಪ ಅವರು ಬಾಗಿನ ಅರ್ಪಣೆ ಮಾಡಲಿದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಅಣೆಕಟ್ಟು ಭರ್ತಿಯಾಗುವ ಹಂತ ತಲುಪಿದೆ. ಅಣೆಕಟ್ಟು ಭರ್ತಿಗೆ ಒಂದು ಅಡಿಗೂ ಕಡಿಮೆ ಬಾಕಿಯಿದೆ. ಕೆಆರ್‌ಎಸ್ ಅಣೆಕಟ್ಟಿನ ಗರಿಷ್ಠ ಮಟ್ಟ 124.8 ಅಡಿಯಾಗಿದೆ. ಈಗ ನೀರು ಸಂಗ್ರಹಣೆ 123 ಅಡಿಗಿಂತ ಹೆಚ್ಚಾಗಿದೆ. ಒಳಹರಿವು 25,670 ಕ್ಯೂಸೆಕ್ ಆಗಿದ್ದು, ಹೊರ ಹರಿವು 4000 ಕ್ಯೂಸೆಕ್ ಆಗಿದೆ.

ಕೆಲ ದಿನಗಳ ಹಿಂದಷ್ಟೇ ಮಂಡ್ಯ ಸಂಸದೆ ಸುಮಲತಾ ಅವರು ಅಣೆಕಟ್ಟಿಗೆ ಭೇಟಿ ನೀಡಿದ್ದರು.












Click it and Unblock the Notifications