ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾವೇರಿ ವಿವಾದ: ಸಿಜೆಐ ವಿರುದ್ಧ ಮಂಡ್ಯದಲ್ಲಿ 420 ಕೇಸ್

By ವಿಕಾಸ್ ನಂಜಪ್ಪ
|
Google Oneindia Kannada News

ಮಂಡ್ಯ, ಸೆ.09: ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್ ಹಾಗೂ ಇನ್ನಿತರ ಜಡ್ಜ್ ಗಳ ವಿರುದ್ಧ 420 ಕೇಸ್ ದಾಖಲಾಗಿದೆ. ಈ ಮೂಲಕ ಕಾವೇರಿ ನದಿ ನೀರಿಗಾಗಿ ನಡೆದ ಕರ್ನಾಟಕ ಬಂದ್ ಅಂತ್ಯ ಕಂಡಿದೆ. ಮಂಡ್ಯದ ಜೆಎಂಎಫ್ ಕೋರ್ಟಿನಲ್ಲಿ ಸಿಜೆಐ ಸೇರಿದಂತೆ ಅನೇಕ ವಿರುದ್ದ ಪ್ರಕರಣ ದಾಖಲಾಗಿದೆ.

ಕಾವೇರಿ ವಿವಾದ ತಾರಕಕ್ಕೇರಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂಥ ಪರಿಸ್ಥಿತಿ ನಿರ್ಮಾಣವಾಗಲು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ , ಸಚಿವ ಎಂಬಿ ಪಾಟೀಲ್, ಸುಪ್ರೀಂಕೋರ್ಟ್ ಜಡ್ಜ್ ಗಳು ಕಾರಣ ಎಂದು ಮಂಡ್ಯದಲ್ಲಿ ಎಂಡಿ ರಾಜಣ್ಣ ಎಂಬುವವರಿಂದ ಜೆಎಂಎಫ್ ಕೋರ್ಟ್ ನಲ್ಲಿ ದೂರು ದಾಖಲಾಗಿದೆ. ಸೆಪ್ಟೆಂಬರ್ 14 ರಂದು ವಿಚಾರಣೆ ಸಾಧ್ಯತೆಯಿದೆ.[ಬೈದ ಮೇಲೆ ಉಲ್ಟಾ ಹೊಡೆದ ಬಯೋಕಾನ್ ಕಿರಣ್ ಶಾ]

CJI an accused in Cauvery Case Karnataka Bandh ends with a farcical plea
ನಾನು ಮಂಡ್ಯದ ನಿವಾಸಿಯಾಗಿದ್ದು, ಸ್ವ ಇಚ್ಛೆಯಿಂದ ದೂರು ದಾಖಲಿಸಿದ್ದೇನೆ. ಸುಪ್ರೀಂಕೋರ್ಟ್ ಆಗಲಿ, ಯಾವುದೇ ಕೋರ್ಟಿನ ವ್ಯಾಪ್ತಿಗೆ ಜಲವಿವಾದ ಬರುವುದಿಲ್ಲ. ಸಿಜೆಐ ಟಿಎಸ್ ಠಾಕೂರ್ ಅವರು ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿದ್ದಾರೆ.[ಕದ್ದು ಮುಚ್ಚಿ ಕೆಲ್ಸ, ಟೆಕ್ಕಿಗಳಿಗೆ ಬಿಸಿ ಮುಟ್ಟಿಸಿದ ಕನ್ನಡಿಗರು]

ಇದರಿಂದ ಜನತೆಗೆ ವಂಚನೆ, ಅನ್ಯಾಯವಾಗಿದೆ. ಸುಪ್ರೀಂಕೋರ್ಟ್ ಅದೇಶಕ್ಕೆ ತಲೆಬಾಗಿ ತಮಿಳುನಾಡಿಗೆ ಪ್ರತಿದಿನ 15,000ಕ್ಯೂಸೆಕ್ಸ್ ನೀರು ಬಿಡಲು ಕರ್ನಾಟಕ ಸರ್ಕಾರ ಮುಂದಾಗಿದೆ. ಅಸಲಿಗೆ ಸುಪ್ರೀಂ ಆದೇಶವೇ ಅಕ್ರಮವಾಗಿದೆ ಎಂದು ಅರ್ಜಿದಾರ ಎಂಡಿ ರಾಜಣ್ಣ ಹೇಳಿದ್ದಾರೆ.[ಮಂಡ್ಯದಲ್ಲಿ ಶೇ90 ರಷ್ಟು ಕೃಷಿಕಾರ್ಯ ಸಂಪೂರ್ಣ: ರಮ್ಯಾ]

ಕೋರ್ಟ್ ವ್ಯಾಪ್ತಿಗೆ ಒಳಪಡದಿದ್ದರೂ ಕಾನೂನು ಮೀರಿ ಆದೇಶ ನೀಡುತ್ತಿದ್ದೇವೆ ಎಂಬ ಅರಿವು ಟಿಎಸ್ ಠಾಕೂರ್ ಹಾಗೂ ಇತರೆ ಜಡ್ಜ್ ಗಳಿಗಿದೆ. ಈ ಪ್ರಕರಣದಲ್ಲಿ ಜಸ್ಟೀಸ್ ದೀಪಕ್ ಮಿಶ್ರಾ ಹಾಗೂ ಉದಯ್ ಉಮೇಶ್ ಲಲಿತ್ ಕೂಡಾ ಹೊಣೆಗಾರರು.

ಎರಡು ರಾಜ್ಯಗಳ ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಗಳು, ನೀರಾವರಿ ಸಚಿವರುಗಳ ಮೇಲೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 420ರಂತೆ ಕ್ರಮ ಜರುಗಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ. (ಒನ್ಇಂಡಿಯಾ ಸುದ್ದಿ)

English summary
The Karnataka bandh ended with a farcical plea being filed in a Mandya court in which it was sought to make the Chief Justice of India, T S Thakur among others an accused for interfering in the Cauvery issue. The plea filed by M D Rajanna before the PCJ and JMFC court in Mandya
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X