ಕುಮಾರಸ್ವಾಮಿ ಕೈ ಸೇರಿದ ಮಂಡ್ಯ ಫಲಿತಾಂಶದ ಗುಪ್ತಚರ ವರದಿಯಲ್ಲೇನಿದೆ?

Recommended Video

      ಎಚ್‍ಡಿಕೆ ಕೈ ಸೇರಿತು ಮಂಡ್ಯ ಚುನಾವಣೆಯ 3ನೇ ಗುಪ್ತಚರ ಇಲಖೆ ವರದಿ | Oneindia Kannada

      ಮಂಡ್ಯ, ಮೇ 12: ಕರ್ನಾಟಕದ ಒಟ್ಟು ಕ್ಷೇತ್ರಗಳ ಪೈಕಿ ಮಂಡ್ಯ ಲೋಕಸಭಾ ಕ್ಷೇತ್ರದತ್ತ ಎಲ್ಲರ ಚಿತ್ತವಿದೆ.

      ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ ಸ್ವಾಮಿ ಹಾಗೂ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಫಲಿತಾಂಶಕ್ಕೂ ಮುನ್ನ ಹೊರಬಿದ್ದಿರುವ ಕೆಲವು ವರದಿಗಳ ಮೇಲಿನ ಚರ್ಚೆ ನಡೆಯುತ್ತಿದೆ. ಈ ಸಾಲಿಗೆ ಇದೀಗ ಗುಪ್ತಚರ ಇಲಾಖಾ ವರದಿಯೂ ಕೂಡ ಸೇರಿಕೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

      ಗುಪ್ತಚರ ಇಲಾಖೆ ನೀಡಿರುವ ಅಂತಿಮ ವರದಿಯಿಂದ ಸಿಎಂ ಕುಮಾರಸ್ವಾಮಿ ಅವರಿಗೆ ಕೊಂಚ ಹಿನ್ನಡೆಯಾಗಿದೆ ಎನ್ನಲಾಗಿದ್ದು, ಸುಮಲತಾಗೆ ಹೋಲಿಸಿದರೆ ನಿಖಿಲ್​ಗೆ ಲೀಡ್ ಕಮ್ಮಿ ಇದೆ ಎಂಬುದು ವರದಿಯಲ್ಲಿ ಇರುವುದಾಗಿ ತಿಳಿದುಬಂದಿದೆ.

      Chief minister got another intelligence report on mandya constituency

      ಮೊದಲನೇ ಹಂತದಲ್ಲಿ ಏಪ್ರಿಲ್ 18ರಂದು ಮಂಡ್ಯ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಹಾಸನ, ತುಮಕೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು-ಕೊಡಗು, ಬೆಂಗಳೂರು ಸೆಂಟ್ರಲ್, ಉಡುಪಿ-ಚಿಕ್ಕಮಗಳೂರು, ಚಿತ್ರದರ್ಗ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು.

      ಮಂಡ್ಯ ಲೋಕಸಭಾ ಸಮರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್​ ಹಾಗೂ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ನಡುವೆ ಲೆಕ್ಕಾಚಾರಗಳು ನಡೆಯುತ್ತಿದ್ದು, ರಹಸ್ಯ ಕ್ಷೇತ್ರವಾರು ಸಮೀಕ್ಷಾ ವರದಿಯನ್ನು ಗುಪ್ತಚರ ಇಲಾಖೆ ಸಿಎಂ ಕುಮಾರಸ್ವಾಮಿ ಅವರಿಗೆ ನೀಡಿದೆ ಎಂದು ಹೇಳಲಾಗಿದೆ.

      ಮಹಿಳಾ ಮತ್ತು ಯುವ ಮತದಾರರ ಬಗ್ಗೆ ಗುಪ್ತಚರ ಇಲಾಖೆ ನಿಖರ ವರದಿ ನೀಡುವಲ್ಲಿ ವಿಫಲವಾಗಿದೆ ಎಂಬ ಮಾಹಿತಿ ಇದ್ದು, ಮಂಡ್ಯದ ಬಿಜೆಪಿ, ರೈತ ಸಂಘ ಮತ್ತು ಜೆಡಿಎಸ್ ನ ಕೆಲ ಅತೃಪ್ತರು ಸುಮಲತಾಗೆ ಬೆಂಬಲ ನೀಡಿರುವುದು ಸಿಎಂಗೆ ನುಂಗಲಾರದ ತುಪ್ಪವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+