ಮಹಿಳೆಯರನ್ನು ಯಾಮಾರಿಸಿ ಚಿನ್ನ ದೋಚುತ್ತಿದ್ದವರ ಸೆರೆ

Posted By: Nayana
Subscribe to Oneindia Kannada

ಮಂಡ್ಯ, ಡಿಸೆಂಬರ್ 29 : ಮಹಿಳೆಯರನ್ನು ಯಾಮಾರಿಸಿ ಚಿನ್ನದ ಸರವನ್ನು ದೋಚುತ್ತಿದ್ದ ಖತರ್ನಾಕ್ ಸರಗಳ್ಳರನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪೊಲೀಸರು ಸೆರೆ ಹಿಡಿದಿದ್ದಾರೆ.

ಜಾತ್ರೆ, ಸಂತೆಗಳಲ್ಲಿ ಹಣ, ಪರ್ಸ್ ಗಳನ್ನು ಬೀಳಿಸಿ ಮಹಿಳೆಯರನ್ನು ಯಾಮಾರಿಸಿ ಚಿನ್ನದ ಸರವನ್ನು ದೋಷುತ್ತಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಮಂಜ(32), ಕಲ್ಯಾಣಿ(28), ಭಾಗ್ಯ(25) ಬಂಧಿತರು.
ಅವರಿಂದ ಅಂದಾಜು 15.50 ಲಕ್ಷ, 492 ಗ್ರಾಂ ಚಿನ್ನ, 20 ಗ್ರಾಂ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ. ಜತೆಗೆ ಕೃತ್ಯಕ್ಕೆ ಬಳಸುತ್ತಿದ್ದ ಮೋಟಾರ್ ಸೈಕಲ್ ನ್ನು ಕೂಡ ವಶಕ್ಕೆ ಪಡೆಯಲಾಗಿದೆ.

Chain snatchers including Women arrested

ಇವರ ವಿರುದ್ಧ ಮಂಡ್ಯದ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಆರತಿ ಉಕ್ಕಡದಲ್ಲಿ ಕಳ್ಳರ ಗ್ಯಾಂಗ್ ನ್ನು ಬಂಧಿಸಲಾಗಿದೆ. ಕಾರ್ಯಾಚರಣೆ ನಡೆಸಿದ ತಂಡಕ್ಕೆ ಜಿಲ್ಲಾ ಎಸ್ ಪಿ ರಾಧಿಕಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Including two women three chain snatchers have been arrested by Mandya police. That gand was many theft cases in the district and they had snatched gold ornaments in marketing places and religious fair.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ