ಕೇಂದ್ರ ತಂಡದಿಂದ ಕೃಷ್ಣರಾಜ ಸಾಗರ ಸಮೀಕ್ಷೆ

Posted By: Prithviraj
Subscribe to Oneindia Kannada

ಮಂಡ್ಯ, ಅಕ್ಟೋಬರ್, 8: ಕಾವೇರಿ ಜಲಾನಯನ ಪ್ರದೇಶದ ವಸ್ತುಸ್ಥಿತಿ ಅಧ್ಯಯನ ಮಾಡಲು ಬಂದಿರುವ ಕೇಂದ್ರ ಜಲ ಆಯೋಗ ತಜ್ಞರ ತಂಡ ಶನಿವಾರ ಕೃಷ್ಣರಾಜ ಸಾಗರ ಜಲಾಶಯವನ್ನು ವೀಕ್ಷೀಸಿತು.

ಜಿ.ಎಸ್.ಝಾ ನೇತೃತ್ವದ ತಂಡದ ಸದಸ್ಯರು ಇಂದು ಬೆಳಿಗ್ಗೆ 9:30ಕ್ಕೆ ಅಣೆಕಟ್ಟೆ ಮೇಲೆ ಸಮೀಕ್ಷೆ ಆರಂಭಿಸಿದರು. ನಂತರ ಕೆ.ಆರ್.ಎಸ್ ಮುಖ್ಯದ್ವಾರದ ಬಳಿ ಅಣೆಕಟ್ಟೆಯ ಒಳಗೆ ಇಳಿದು (ನೀರು ಅಳೆಯುವ ಮಾಪಕವನ್ನು) ಪರಿಶೀಲನೆ ನಡೆಸಿದರು.ನಂತರ ಹೆಲಿಕಾಪ್ಟರ್ ಮೂಲಕ ಜಲಾಶಯದ ವೈಮಾನಿಕ ಸಮೀಕ್ಷೆ ನಡೆಸಿದರು.[ಅಧ್ಯಯನ ತಂಡದ ಜತೆ ರಮ್ಯಾ, ಅಂಬಿಯಣ್ಣ ಎಲ್ಲಿ?]

Central team conduct survey KRS Dam

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಝಾ ಅವರು ಕೆ.ಆರ್.ಎಸ್ ನ ವಾಸ್ತವ ಸ್ಥಿತಿಯನ್ನು ಅರಿತಿದ್ದೇವೆ. ನೀರಿನ ಮಟ್ಟ ಕಡಿಮೆ ಇದೆ. ವಾಸ್ತವ ಸ್ಥಿತಿ ಅರಿವಾಗಿದೆ. ಇದನ್ನೇ ಸುಪ್ರೀಂಕೋರ್ಟ್ ಗೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.['ತಜ್ಞರ ತಂಡಕ್ಕೆ ಕಾವೇರಿ ಕೊಳ್ಳದ ವಸ್ತುಸ್ಥಿತಿ ಮನವರಿಕೆ']

ನಂತರ ರೈತರ ತಂಡ ಝಾ ಅವರನ್ನು ಭೇಟಿಮಾಡಿ, ಜಲಾಶಯದ ಪಕ್ಕದಲ್ಲೇ ಇರುವ ನಮ್ಮ ಹೊಲಗಳಿಗೆ ನೀರಿಲ್ಲ. ವಾಸ್ತವ ಸ್ಥಿತಿ ಪರಿಶೀಲಿಸಿ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದರು. ತಜ್ಞರ ತಂಡ ಪಾಂಡವಪುರ ತಾಲ್ಲೂಕಿನ ಚಿನಕುರಳಿ, ಗುಮ್ಮನಹಳ್ಳಿ, ಬಳ್ಳೇಕಟ್ಟಿಕೊಪ್ಪಲು ಮತ್ತು ಕೆ.ಆರ್.ಪೇಟೆ ತಾಲ್ಲೂಕಿನ ತೆಂಡೇಕೆರೆ, ಅಂಚನಹಳ್ಳಿ, ಬಣ್ಣನಕೆರೆ, ಯಗಚಗುಪ್ಪೆ, ಚೋಕನಹಳ್ಳಿ, ಬೂಕನಕೆರೆ ಹಳ್ಳಿಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿತು.[ಕಾವೇರಿ ಕೊಳ್ಳದ ವಾಸ್ತವ ಚಿತ್ರಣ ಅಧ್ಯಯನ ಆರಂಭ]

ತಂಡದಲ್ಲಿ ಕೇಂದ್ರ ಜಲ ಆಯೋಗದ ಸದಸ್ಯ, ಎಸ್, ಮಸೂದ್ ಹುಸೇನ್, ಮುಖ್ಯ ಇಂಜಿನಿಯರ್ ಗುಪ್ತಾ, ತೋಟಗಾರಿಕೆ ಇಲಾಖೆ ಹೆಚ್ಚುವರಿ ಆಯುಕ್ತ ಬಿ.ರಾರ್, ಕೇರಳದ ಮಾಹಾನುದೇವನ್, ತಮಿಳುನಾಡು ಪ್ರಧಾನ ಕಾರ್ಯದರ್ಶಿ ಪ್ರಭಾಕರ್, ಪುದುಚೇರಿಯ ಪಿ.ಸ್ವಾಮಿನಾಥನ್ ಮತ್ತಿತರರು ಇದ್ದರು.

Central team conduct survey KRS Dam

ಕೆ.ಆರ್.ಎಸ್. ಇಂದಿನ ಮಟ್ಟ
ಗರಿಷ್ಠ ಮಟ್ಟ-124.80 ಅಡಿ
ಇಂದಿನ ಮಟ್ಟ-85.90 ಅಡಿ
ಒಳಹರಿವು-4034 ಕ್ಯೂಸೆಕ್
ಹೊರಹರಿವು-9715 ಕ್ಯೂಸೆಕ್

ಸಂಸದ ಪುಟ್ಟರಾಜು ಕಾರು ಜಖಂ: ಕೇಂದ್ರ ತಜ್ಞರ ತಂಡ ಪಾಂಡವಪುರ ತಾಲ್ಲೂಕಿನ ಕೆ.ಮಲ್ಲೇನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದಾಗ ಅಪಘಾತವಾಗಿ ಸಂಸದ ಸಿ.ಎಸ್.ಪುಟ್ಟರಾಜು ಅವರ ಕಾರು ಜಖಂಗೊಂಡಿದೆ.[ತಮಿಳರು, ಜಯಲಲಿತಾ ನಿಂದನೆ ವಿಡಿಯೋ: ಮೂವರ ವಿರುದ್ಧ ಕೇಸ್]

ಮುಂದೆ ಹೋಗುತ್ತಿದ್ದ ಸಮಿತಿ ಸದಸ್ಯರ ಕಾರುಗಳು ತಕ್ಷಣ ನಿಲ್ಲಿಸಿದ್ದರಿಂದ ಹಿಂದೆ ಬರುತ್ತಿದ್ದ ಸಂಸದರ ಕಾರು ಕೂಡ ಸಹ ನಿಲ್ಲಿಸಿದ್ದಾರೆ. ಈ ಪರಿಣಾಮ ಹಿಂದೆ ಬರುತ್ತಿದ್ದ ಬೊಲೆರೊ ಕಾರು ಸಂಸದರ ಕಾರಿಗೆ ಡಿಕ್ಕಿ ಹೊಡೆದಿದ್ದು ಸಂಸದರ ಕಾರು ಜಖಂಗೊಂಡಿದೆ. ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
On Saturday the high level technical team conducted an survey of the Krishnaraja sagara reservoir near Sri rangapatna
Please Wait while comments are loading...