ದಯಾಮರಣ ಕೋರಿದ ಹೊಸಹಳ್ಳಿ ಬಿಜೆಪಿ ಮುಖಂಡ!

By: ಮಂಡ್ಯ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಸೆಪ್ಟೆಂಬರ್ 21 : ಎಲ್ಲ ರೀತಿಯ ಪ್ರತಿಭಟನೆ ಮಾಡಿದರೂ ಯಾವುದೇ ಪ್ರಯೋಜನವಾಗದೆ ನೀರು ಹರಿದು ತಮಿಳುನಾಡು ಸೇರಿದ್ದು, ಕೆಆರ್‌ಎಸ್ ಖಾಲಿಯಾಗಿದೆ. ಬೆಳೆ ಬೆಳೆಯುವುದಿರಲಿ ಕುಡಿಯಲೂ ನೀರಿಲ್ಲದ ಪರಿಸ್ಥಿತಿಗೆ ಬಂದು ತಲುಪಿದೆ ಹೀಗಿರುವಾಗ ಬದುಕುವುದಾದರೂ ಹೇಗೆ? ಆದ್ದರಿಂದ ನಮಗೆ ದಯಾಮರಣ ಕರುಣಿಸಿ ಎಂದು ಬಿಜೆಪಿ ಮುಖಂಡ, ಹೊಸಹಳ್ಳಿಯ ಸಿದ್ದರಾಜು ಅವರು ಜಿಲ್ಲಾಧಿಕಾರಿಗೆ ಮನವಿ ಮಾಡುವ ಮೂಲಕ ವಿಭಿನ್ನ ಪ್ರತಿಭಟನೆ ನಡೆಸಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆಯಷ್ಟೆ ರಾಜ್ಯ ಸರ್ಕಾರ ಬೆಳೆಗೆ ನೀರು ಕೊಡುವುದಾಗಿ ಹೇಳಿ ಬಿತ್ತನೆ ಬೀಜ ವಿತರಿಸಿತು. ಇದನ್ನು ನಂಬಿದ ರೈತರು ಸಾಲ ಮಾಡಿ ಬೆಳೆ ಬೆಳೆದಿದ್ದಾರೆ. ಆದರೆ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ರಾಜ್ಯದ ವಾಸ್ತವಾಂಶವನ್ನು ಅರಿಯದೆ ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದರಿಂದ ರಾಜ್ಯ ಸರ್ಕಾರ ರೈತರ ಹಾಗೂ ಜನತೆಯ ಹಿತವನ್ನು ಬದಿಗಿಟ್ಟು ತಮಿಳುನಾಡಿಗೆ ನೀರು ಹರಿಸಿದ್ದರಿಂದ ರೈತರು ಬೆಳೆದ ಬೆಳೆಗೆ ನೀರಿಲ್ಲದೆ ಒಣಗುತ್ತಿದೆ. [ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡುವುದು ಬೇಡ!]

Cauvery issue : BJP leader in Mandya urges permission for euthanasia

ಹೀಗಿರುವಾಗ ರೈತರಿಗೆ ಬದುಕಲು ಯಾವುದೇ ಮಾರ್ಗವಿಲ್ಲದ ಪರಿಸ್ಥಿತಿ ತಲೆದೋರಿದೆ. ನಾವು ಸಾಲ ಸೋಲ ಮಾಡಿ ಬಿತ್ತನೆ ಮಾಡಿದ್ದ ಬೆಳೆಯೂ ಇಲ್ಲದಾಗಿದೆ. ಆದ್ದರಿಂದ ನಾವು ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ನೀಡಬೇಕೆಂದು ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಅವರಿಗೆ ಮನವಿ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a unique protest BJP leader in Mandya Hosahalli Siddaraju has urged deputy commissioner permission for euthanasia. He says that it is not possible to live without Cauvery water.
Please Wait while comments are loading...