ದಳವಾಯಿ ಕೆರೆ ಬಳಿ ನವಜಾತ ಹೆಣ್ಣು ಮಗವಿನ ಶವ ಪತ್ತೆ
ಮಂಡ್ಯ, ಡಿಸೆಂಬರ್ 13: ಪ್ರಖ್ಯಾತ ಧಾರ್ಮಿಕ ಕ್ಷೇತ್ರವಾದ ಮೇಲುಕೋಟೆಯ ದಳವಾಯಿ ಕೆರೆಯ ಎರಿಯ ಸಮೀಪದಲ್ಲಿ ನವಜಾತ ಹೆಣ್ಣು ಶಿಶುವಿನ ಶವ ದೊರೆತಿದೆ.
ಕರುಳುಬಳ್ಳಿಯ ಸಹಿತ ಕಂಡುಬಂದಿರುವ ಮೃತ ಹೆಣ್ಣು ಮಗು ಬಹುಶಃ ಎರಡು ದಿನ ಹಿಂದೆಯಷ್ಠೇ ಜನಿಸಿದೆ ಎಂದು ಅಂದಾಜಿಸಲಾಗಿದೆ. ಪರಿಚಿತ ವ್ಯಕ್ತಿಗಳು ಮಗುವಿನಶವವನ್ನು ಕವರ್‌ನಲ್ಲಿ ಸುತ್ತಿ ಕೆರೆಯ ಸಮೀಪದ ಏರಿಯ ಪಕ್ಕದಲ್ಲಿ ಬಿಸಾಡಿ ಹೋಗಿದ್ದಾರೆ. ಹೆಣ್ಣೆಂಬ ಕಾರಣಕ್ಕೋ ಅಥವಾ ಅಕ್ರಮ ಸಂಬAಧ ದಿಂದ ಹುಟ್ಟಿದ ಮಗು ಎಂಬಕಾರಣಕ್ಕೋ ಸಾಯಿಸಿ ಬಿಸಾಡಿರಬಹುದು. ಇಲ್ಲವೇ ಸತ್ತ ಮಗು ಕಳೆಬರವನ್ನು ಎಸೆದು ಹೋಗಿ ರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಸಾರ್ವಜಮಿಕರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಮೇ ಲುಕೋಟೆ ಪೊಲೀಸರು ಮಗುವಿನ ಕಳೆಬರವನ್ನು ವಶಕ್ಕೆ ಪಡೆದು ಶವ ಪರೀಕ್ಷೆಗಾಗಿ ತಾಲ್ಲೂಕು ಶವಾಗಾರಕ್ಕೆ ಕಳುಹಿಸಿದ್ದಾರೆ. ವೈಧ್ಯಕೀಯ ಪರಿಕ್ಷೆಯಿಂದ ಮಗುವಿನ ಸಾವಿಗೆ ಕಾರಣ ತಿಳಿದು ಬರಲಿದ್ದು, ಘಟನೆಯ ಸಂಬAಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡ್ಯ ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮತ್ತೆ ಹೆಣ್ಣು ಭ್ರೂಣ ಹತ್ಯೆ ನಡೆದಿರುವುದು ನಿಜಕ್ಕೂ ಆಘಾತಕಾರಿವಿಚಗಾರವಾಗಿದ್ದು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಇಂತಹ ಅನಿ಼ಷ್ಠಗಳನ್ನು ತೊಲಗಿಸಬೇಕಿದೆ.
ಮೂರು ವರ್ಷದ ಮಗವಿನ ಮೇಲೆ ಅತ್ಯಾಚಾರಕ್ಕೆ ಯತ್ನ:
ಕೆಆರ್‌ಎಸ್ ಪೊಲೀಸ್ ಠಾಣಾ ವ್ಯಾಪ್ತಿಯ ಸುಮಾರು 55 ವರ್ಷದ ಶಿವಣ್ಣ ಎಂಬ ವ್ಯಕ್ತಿ ಮೂರು ವರ್ಷದ ಮಗುವನ್ನು ಪುಸಲಾಯಿಸಿ ತನ್ನ ಮನೆಗೆ ಕರೆತಂದು ನಗ್ನಗೊಳಿಸಿ ಅತ್ಯಾಚಾರ ಯತ್ನ ಮಾಡಿದ ಅಮಾನುಷ ಘಟನೆ ನಡೆದಿದೆ.
ಮಗುವಿನ ತಾಯಿ ನೀಡಿದ ದೂರಿನ ಮೇರೆಗೆ ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗು ಮನೆ ಹಾಗೂ ಸುತ್ತಮುತ್ತಲು ಕಾಣದಿದ್ದಾಗ ಮಗುವಿನ ತಾಯಿ ಮಗುವನ್ನು ಹುಡಕಾಟ ನಡೆಸಿದ್ದು, ಅಕ್ಕಪಕ್ಕದವರು ಹುಡಕಾಟ ನಡೆಸಿದ ಸಂದರ್ಭದಲ್ಲಿ ಮಗು ಚೀರಿದ ಶಬ್ಭದ ಕೇಳಿ ಬಂದಿದೆ.
ಆರೋಪಿ ಬಾಗಿಲು ಹಾಕಿದ್ದ ಮನೆ ಒಡೆದು ಒಳ ಹೋದಾಗ ಆರೋಪಿ ಮಗುನ್ನು ನಗ್ನ ಸ್ಥಿತಿಯಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ತಕ್ಷಣ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿ ಮಗುವನ್ನು ಮೈಸೂರು ಕೆಆರ್‌ಆಸ್ಪತ್ರೆಗೆ ಕರೆ ತಂದು ಪರೀಕ್ಷೆ ಮಾಡಲಾಗುತ್ತಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಚರಣೆ ನಡೆಸಿದ ಪಿಎಸ್‌ಐ ಬಸವರಾಜು ಮತ್ತು ಸಿಬ್ಬಂದಿ ಆರೋಪಿ ಶಿವಣ್ಣ(55) ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications