ಮಂಡ್ಯದಲ್ಲಿ ಲಾಕ್ ಡೌನ್ ನಡುವೆ ಪಾರ್ಟಿ; 34 ಜನರ ಬಂಧನ
ಮಂಡ್ಯ, ಜೂನ್ 11: ದೇಶಾದ್ಯಂತ ಕೊರೊನಾ ಲಾಕ್‌ಡೌನ್ ಘೋಷಿಸಲಾಗಿದ್ದು, ಪದೇ ಪದೇ ಮಾಧ್ಯಮಗಳ ಮೂಲಕ ಎಚ್ಚರಿಕೆ ನೀಡುತ್ತಿದ್ದರೂ ಅದನ್ನು ಉಲ್ಲಂಘಿಸಿ ಹುಟ್ಟು ಹಬ್ಬದ ಭರ್ಜರಿ ಪಾರ್ಟಿ ಮಾಡಿದ ಆರೋಪದಡಿಯಲ್ಲಿ 34 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಆರ್ ಎಸ್ ಹಿನ್ನೀರಿನ ಸಮೀಪದ ತೋಟವೊಂದರಲ್ಲಿ ಮೂರು ದಿನಗಳ ಹಿಂದೆ ತಡರಾತ್ರಿ ಪಾರ್ಟಿ ಮಾಡಲಾಗಿತ್ತು.
Recommended Video
ಡಿ ಬಾಸ್ ಮುಟ್ಟಿದ ಮೇಲೆ ದಾರಿ ಬಿಟ್ಟಿದ್ದ ದೇವರ ಬಸವ ಸಾವು | Oneindia Kannada
ಮೈಸೂರಿನ ಶೇಖರ್ ಎಂಬುವರಿಗೆ ಸೇರಿದ ತೋಟದಲ್ಲಿ ಬುಧವಾರ ರಾತ್ರಿ ದಾಸಪ್ಪ ಎಂಬುವರ ಹುಟ್ಟುಹಬ್ಬದ ಪಾರ್ಟಿ ನಡೆದಿತ್ತು. ಇವರು ಸರ್ಕಾರದ ಆದೇಶ ಉಲ್ಲಂಘಿಸಿ ಯಾವುದೇ ಅನುಮತಿ ಪಡೆಯದೇ ತಡರಾತ್ರಿ ಜೋರಾಗಿ ಸಂಗೀತ ಹಾಕಿಕೊಂಡು ನೃತ್ಯ ಮಾಡಿದ್ದಾಗಿ ಆರೋಪಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಕೆ.ಆರ್.ಸಾಗರ ಠಾಣೆಯ ಪಿಎಸ್ ಐ ಎಸ್.ಬಿ.ನವೀನ್‌ಗೌಡ ಅವರು, ಸಾರ್ವಜನಿಕರಿಂದ ನಮಗೆ ದೂರು ಬಂದಿತ್ತು. ಕೂಡಲೇ ದಾಳಿ ನಡೆಸಿ 34 ಜನರನ್ನೂ ವಶಕ್ಕೆ ಪಡೆದಿದ್ದು, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು. ನೋಟೀಸ್ ಜಾರಿ ಮಾಡಿ ತನಿಖೆ ಕೈಗೊಂಡಿದ್ದಾರೆ.












Click it and Unblock the Notifications