ಮದ್ದೂರಿನ ಹೊಳೇ ಆಂಜನೇಯನ ದರ್ಶನ ಪಡೆದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಮಂಡ್ಯ, ಜೂನ್ 14: ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ ಕಾಲಭೆರವೇಶ್ವರ ಹಾಗೂ ಮದ್ದೂರಿನ ಹೊಳೇ ಆಂಜನೇಯಸ್ವಾಮಿ ದೇಗುಲಕ್ಕೆ ನಿನ್ನೆ ಶನಿವಾರ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

Recommended Video

      ಯಡಿಯೂರಪ್ಪ ಶಾಶ್ವತ ಅಲ್ಲ ಎಂದು ಏಕವಚನದಲ್ಲಿ ರೇಗಾಡಿದ ರೇವಣ್ಣ | Revanna | Yeddiyurappa

      ಬೆಂಗಳೂರಿನಿಂದ ನೇರವಾಗಿ ಬೆಳಿಗ್ಗೆ ಚಿಕ್ಕರಸಿನಕೆರೆ ಕಾಲಭೆರವೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಭಾಸ್ಕರ್ ರಾವ್ ಅವರು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ನಂತರ ಮದ್ದೂರಿನ ಪುರಾಣ ಪ್ರಸಿದ್ಧ ಹೊಳೇ ಆಂಜನೇಯಸ್ವಾಮಿ ದೇಗುಲಕ್ಕೆ ಭೇಟಿ ನೀಡಿ, ಒಂದೂಕಾಲು ರೂಪಾಯಿ ನಾಣ್ಯವನ್ನು ಕೈನಲ್ಲಿ ಹಿಡಿದು ಇಷ್ಟಾರ್ಥ ನೆರವೇರಿಸುವಂತೆ ಪ್ರಾರ್ಥಿಸಿದರು.

      ನಂತರ ದೇಗುಲದ ಪ್ರಧಾನ ಅರ್ಚಕ ಪ್ರದೀಪಾಚಾರ್ಯ ಹಾಗೂ ಸಹಾಯ ಸುರೇಶಾಚಾರ್ಯ ಅವರು, ಆಂಜನೇಯಸ್ವಾಮಿ ಮೂಲ ವಿಗ್ರಹಕ್ಕೆ ಜೇನುತುಪ್ಪ ಅಭಿಷೇಕದೊಂದಿಗೆ ಮಹಾ ಮಂಗಳಾರತಿ ನೆರವೇರಿಸಿದರು. ಪೂಜಾ ಕಾರ್ಯದಲ್ಲಿ ಪಾಲ್ಗೊಂಡ ಆಯುಕ್ತ ಭಾಸ್ಕರ್ ರಾವ್ ಅವರು, ಪ್ರಸಾದ ಸ್ವೀಕರಿಸಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ಪರಶುರಾಮ, ಡಿವೈಎಸ್ಪಿ ಎಂ.ಜೆ. ಪೃಥ್ವಿ, ಸಿಪಿಐ ಕೆ.ಆರ್. ಪ್ರಸಾದ್ ಇದ್ದರು.

      Bengaluru Police Commissioner Bhaskar Roa Visited Hole Anjaneya Temple In Mandya

      ಆತ್ಮೀಯತೆ ತೋರಿದ ಭಾಸ್ಕರ್‌ರಾವ್: ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಅವರು ಎಎಸ್ ‌ಐಯೊಬ್ಬರ ಭುಜದ ಮೇಲೆ ಕೈ ಹಾಕಿ ಆತ್ಮೀಯತೆ ತೋರಿದ್ದು ಎಲ್ಲರ ಗಮನ ಸೆಳೆಯಿತು. ಹೊಳೇ ಆಂಜನೇಯಸ್ವಾಮಿ ದೇಗುಲದಿಂದ ತೆರಳುವ ವೇಳೆ ತಮ್ಮ ಬೆಂಗಾವಲು ಪಡೆಯ ವಾಹನದಲ್ಲಿ ಬಂದಿದ್ದ ಎಎಸ್ ‌ಐ ಚಿಕ್ಕಣ್ಣ ಅವರನ್ನು ಹತ್ತಿರ ಕರೆದು ಆತನ ಹೆಗಲ ಮೇಲೆ ಕೈ ಹಾಕಿ ಉಭಯಕುಶಲೋಪರಿ ವಿಚಾರಿಸಿದರು.

      Bengaluru Police Commissioner Bhaskar Roa Visited Hole Anjaneya Temple In Mandya

      ಮಂಡ್ಯದಲ್ಲಿ ಐಪಿಎಸ್ ಸೇವೆಗೆ ಸೇರಿದ, ತರಬೇತಿ ವೇಳೆ ಪೇದೆಯಾಗಿದ್ದ ಚಿಕ್ಕಣ್ಣ ಅವರನ್ನು ಗುರುತಿಸಿದ್ದರು. ನಂತರ ಅವರ ಉಭಯ ಕುಶಲೋಪರಿ ವಿಚಾರಿಸಿ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದು ವಿಶೇವಾಗಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+