ಮಂಡ್ಯದಲ್ಲಿ ಮುದ್ದೆ ಉಣ್ಣುವ ಸ್ಫರ್ಧೆಯಲ್ಲಿ ಬರೋಬ್ಬರಿ 10 ಮುದ್ದೆ ಉಂಡು ಪ್ರಥಮ ಸ್ಥಾನ ಗಳಿಸಿದ ವೃದ್ಧ !
ಮಂಡ್ಯ, ಜನವರಿ 02: ನಗರದ ಅಂಬೇಡ್ಕರ್ ಭವನದ ಆವರಣದಲ್ಲಿ ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ಸಾವಯವ ಸಿರಿಧಾನ್ಯ ಹಬ್ಬ, ಆಹಾರ ಮೇಳ ಮತ್ತು ವಸ್ತು ಪ್ರದರ್ಶನದಲ್ಲಿ ವೃದ್ಧರೋರ್ವರು ಬರೋಬ್ಬರಿ 10 ಮುದ್ದೆ ಉಣ್ಣುವ ಮೂಲಕ ಪ್ರಥಮ ಸ್ಥಾನ ಪಡೆದಿದ್ದಾರೆ.
ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಗ್ರಾಮದ ಈರೇಗೌಡ 10 ಮುದ್ದೆ (2 ಕೆ.ಜಿ. 717 ಗ್ರಾಂ) ನುಂಗಿ ಪ್ರಥಮ ಸ್ಥಾನ ಗಳಿಸಿ ಪ್ರಶಸ್ತಿ ಪಡೆದವರು. ಇದೇ ಗ್ರಾಮದ ದಿಲೀಪ್ 6 ಮುದ್ದೆ (1 ಕೆಜಿ 682 ಗ್ರಾಂ) ಉಂಡು ದ್ವಿತೀಯ ಸ್ಥಾನ ಪಡೆದರೆ, ಟಿ.ಎಂ. ಹೊಸೂರಿನ ರವೀಂದ್ರ ಎಂಬವರು 6 ಮುದ್ದೆ (1 ಕೆಜಿ 544 ಗ್ರಾಂ) ಉಂಡು ತೃತೀಯ ಸ್ಥಾನ ಪಡೆದರು.

ಸ್ಪರ್ಧೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಅಶೋಕ್, ಮಂಡ್ಯ ಸಾವಯವ ಬೆಲ್ಲ ಸಂಸ್ಥೆಯ ಅಧ್ಯಕ್ಷ ಕಾರಸವಾಡಿ ಮಹದೇವು ಸೇರಿದಂತೆ ಒಟ್ಟು 9 ಮಂದಿ ಭಾಗವಹಿಸಿದ್ದರು.
20 ನಿಮಿಷಗಳ ಸ್ಪರ್ಧೆ :
ರಾಗಿ ಮುದ್ದೆ ನಾಟಿಕೋಳಿ ಸಾರು ಊಟದ ಸ್ಪರ್ಧೆಗೆ 20 ನಿಮಿಷ ಕಾಲಾವಕಾಶ ನೀಡಲಾಗಿತ್ತು. ಈ ಸಮಯದಲ್ಲಿ ಯಾರು ಅತಿ ಹೆಚ್ಚು ಮುದ್ದೆ ತಿನ್ನುತ್ತಾರೆಯೋ ಅವರು ವಿಜಯಶಾಲಿಗಳು ಎಂದು ಘೋಷಿಸಲಾಗಿತ್ತು. ಮೊದಲು ಎಲ್ಲರ ತಟ್ಟೆಗೂ ಎರಡು ಮುದ್ದೆ, ನಾಟಿ ಕೋಳಿ ಮಾಂಸ, ಒಂದು ಮೊಟ್ಟೆ, ನಾಟಿ ಕೋಳಿ ಸಾರು ಹಾಕಿ ಆನಂತರ ಒಮ್ಮೆಗೆ ತೀರ್ಪುಗಾರರು ಊಟಕ್ಕೆ ಚಾಲನೆ ಕೊಟ್ಟರು. ಮುದ್ದೆ ಖಾಲಿಯಾಗುತ್ತಿದ್ದಂತೆ ತಟ್ಟೆಗೆ ಬಿಸಿ ಬಿಸಿ ಮುದ್ದೆ ಬಂದುಬೀಳುತ್ತಿದ್ದವು.
ಮೊದಲನೇ ಬಹುಮಾನವಾಗಿ 3 ಸಾವಿರ ನಗದು, ಪ್ರಶಸ್ತಿ ಪತ್ರ, ದ್ವಿತೀಯ 2 ಸಾವಿರ ರೂ., ತೃತೀಯ ಬಹುಮಾನವಾಗಿ ಒಂದು ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.
ಗಮನ ಸೆಳೆದೆ ತಿಂಡಿ-ತಿನಿಸುಗಳು, ಖಾದ್ಯಗಳು :
ಬಾಯಲ್ಲಿ ನೀರೂರಿಸುವ ಸಿರಿಧಾನ್ಯದ ತಿಂಡಿ-ತಿನಿಸುಗಳು, ವೈವಿಧ್ಯಮಯ ಖಾದ್ಯಗಳು, ಆರೋಗ್ಯಕರ ಉತ್ಪನ್ನಗಳು ಸೇರಿದಂತೆ ಹಲವು ಬಗೆಯ, ವಿಭಿನ್ನ ಮಾದರಿಯ ಆಹಾರಗಳು ಸಿರಿಧಾನ್ಯ ಹಬ್ಬದಲ್ಲಿ ಜನರನ್ನು ಆಕರ್ಷಿಸಿದವು.
ಸಿರಿಧಾನ್ಯ ಹಬ್ಬ, ಆಹಾರ ಮೇಳ, ವಸ್ತು ಪ್ರದರ್ಶನ ಗಮನಸೆಳೆಯುವಂತಿತ್ತು. ಮೇಳದಲ್ಲಿ 52 ಮಳಿಗೆಗಳನ್ನು ಅಳವಡಿಸಲಾಗಿದ್ದು, ಈ ಪೈಕಿ 14 ಮಳಿಗೆಗಳಲ್ಲಿ ಸಿರಿಧಾನ್ಯ ಆಹಾರ ತಯಾರಿಕೆಗೆ ಮೀಸಲಿಡಲಾಗಿತ್ತು. ಉಳಿದಂತೆ ಸಿರಿಧಾನ್ಯ ಉತ್ಪನ್ನಗಳು, ಸಾವಯವ ಉತ್ಪನ್ನಗಳನ್ನು ಮಾರಾಟ ಮತ್ತು ಪ್ರದರ್ಶನ ಮಾಡಲಾಗುತ್ತಿತ್ತು.

ಸಿರಿಧಾನ್ಯಗಳಿಂದ ತಯಾರಿಸಲಾದ ದೋಸೆ, ವಡೆ, ಬೆಲ್ಲದ ರವೆ ಉಂಡೆ, ಕಜ್ಜಾಯ, ಇಡ್ಲಿ, ಬಿಸಿಬೇಳೆ ಬಾತ್, ಸಜ್ಜೆ ದೋಸೆ, ರಾಗಿ ಪಕೋಡ, ರಾಗಿ ಇಡ್ಲಿ, ಪೊಂಗಲ್, ನವಣೆ ಸಂಡಿಗೆ, ನತ್ತು ನವಣೆ ಗುಲಾಬ್ ಜಾಮೂನ್, ನವಣೆ ಇಡ್ಲಿ, ಸಿರಿಧಾನ್ಯಗಳ ರೊಟ್ಟಿ, ಖಾರಪುರಿ, ದೊಡ್ಡಪತ್ರೆ ಬಜ್ಜಿ, ಚುರುಮುರಿ, ಸಿರಿಧಾನ್ಯ ಹೋಳಿಗೆ, ಮಸಾಲೆ ವಡೆ, ಸಿಹಿ ಮತ್ತು ಖಾರ ಪದಾರ್ಥಗಳು ಮೇಳಕ್ಕೆ ಬಂದ ಜನರನ್ನು ಮಳಿಗೆಗಳತ್ತ ಆಕರ್ಷಿಸಿದವು.
ರಾಗಿ ಹಿಟ್ಟಿನಿಂದ ತಯಾರಿಸಲಾದ ಕೇಕ್, ಚೌಚೌ, ಬೂಂದಿ ವೈಶಿಷ್ಟ್ಯಪೂರ್ಣವೆನಿಸಿದರೆ, ನಾಟಿ ಹಸುವಿನ ಹಾಲಿನಿಂದ ತಯಾರಿಸಿದ ಕಾಫೀ-ಟೀಗಳು ಜನರ ಮನಸೂರೆಗೊಂಡವು. ಚಕ್ಕುಲಿ, ನಿಪ್ಪಟ್ಟು, ಸಿರಿಧಾನ್ಯ ಲಡ್ಡು, ರಾಗಿ ಕಜ್ಜಾಯ, ನವಣೆ ಪಾಯಸ, ಸಿರಿಧಾನ್ಯದಿಂದ ರೂಪುಗೊಂಡ ಅಣಬೆ ಗೋಬಿ, ಸುವರ್ಣಗಡ್ಡೆ ಕಬಾಬ್ ವಿಶಿಷ್ಟ ರುಚಿಯೊಂದಿಗೆ ಜನರ ಮೆಚ್ಚುಗೆಗೆ ಪಾತ್ರವಾದವು.
ಇನ್ನು ಸಿರಿಧಾನ್ಯ ಉತ್ಪನ್ನಗಳಾದ ರಾಗಿ ಮಾಲ್ಟ್, ಮಸಾಲಾ ಉತ್ಪನ್ನಗಳು, ನವಣೆ ಉಂಡೆ, ಚಕ್ಕುಲಿ, ನಿಪ್ಪಟ್ಟು, ಹಪ್ಪಳ, ಉಪ್ಪಿನಕಾಯಿ, ಸಾಂಬಾರ್‌ಪುಡಿ, ಬಿಸಿಬೇಳೆಬಾತ್ ಪೌಡರ್, ಪುಳಿಯೊಗರೆ ಮಿಕ್ಸ್, ರಾಗಿ ಹಪ್ಪಳ, ಸಿರಿಧಾನ್ಯ ಮಾಲ್ಟ್, ಕೋಲ್ಡ್ ಪ್ರೆಸ್ ಆಯಿಲ್, ನೈಸರ್ಗಿಕ ತೈಲ, ಹುಣಸೆಹಣ್ಣಿನ ಉಪ ಉತ್ಪನ್ನಗಳು, ಸಾವಯವ ತರಕಾರಿ, ಸೊಪ್ಪು, ಹಣ್ಣುಗಳು ವಿಶೇಷವಾಗಿ ಗಮನಸೆಳೆದವು.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications