ಮಂಡ್ಯ ಟಿಕೆಟ್ ರಮ್ಯಾಗೆ ಕೊಟ್ಟಿದ್ದರೆ ಹೆಚ್ಚು ಸಂತೋಷ ಆಗ್ತಿತ್ತು: ಅಂಬರೀಶ್
Recommended Video

ರಮ್ಯಾಗೆ ಮಂಡ್ಯ ಟಿಕೆಟ್ ಸಿಕ್ಕಿದ್ದಿದ್ರೆ ನನಗೆ ಜಾಸ್ತಿ ಖುಷಿಯಾಗ್ತಿತ್ತು ಎಂದ ಅಂಬಿ | Oneindia Kannada
ಅಂಬರೀಶ್ ಅವರು ಹಲವು ದಿನಗಳಿಂದ ಕಾಂಗ್ರೆಸ್ ರಾಜ್ಯ ಕಾಂಗ್ರೆಸ್ ಮುಖಂಡರು ಮಾಧ್ಯಮದವರ ಕೈಗೆ ಸಿಕ್ಕದೆ ಓಡಾಡಿಕೊಂಡಿದ್ದವರು ಇಂದು ಮಂಡ್ಯ ಟಿಕೆಟ್ ಗಣಿಗ ರವಿಕುಮಾರ್‌ಗೆ ನೀಡಿದ ನಂತರ ಮಾಧ್ಯಮದವರೊಡನೆ ಮುಖಾಮುಖಿಯಾದರು.
ಸುಮಾರು ಅರ್ಧ ಗಂಟೆ ಸುದ್ದಿ ಮಾಧ್ಯಮದವರೊಡನೆ ತಮ್ಮ ಎಂದಿನ ಬಿಡು ಬೀಸು, ವ್ಯಂಗ್ಯ, ಸಿಟ್ಟಿನ ಶೈಲಿಯಲ್ಲೇ ಮಾಧ್ಯಮದವರೊಡನೆ ಮಾತಿಗಳಿದ ಅಂಬರೀಶ್ ಅವರು ಮಾಧ್ಯಮದವರ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದರು.
ತಮಗೆ ಆರೋಗ್ಯ ಸರಿ ಇಲ್ಲದ ಕಾರಣ ಟಿಕೆಟ್ ಬೇಡವೆಂದಿದ್ದಾಗಿ ಸ್ಪಷ್ಟಪಡಿಸಿದ ಅಂಬರೀಶ್ ಅವರು ರಾಜಕೀಯದಿಂದ ನಿವೃತ್ತಿ ಆಗುವುದಿಲ್ಲ ಆದರೆ ಚುನಾವಣೆ ರಾಜಕೀಯದಿಂದ ನಿವೃತ್ತಿ ಆಗುತ್ತಿದ್ದೇನೆ ಎಂದರು.
ಗಣಿಗ ರವಿಕುಮಾರ್ ಅವರಿಗೆ ಒಳ್ಳೆಯದಾಗಲಿ ಆ ವ್ಯಕ್ತಿ ಚುನಾವಣೆಯಲ್ಲಿ ಗೆಲ್ಲಲಿ ಎಂದು ಹಾರೈಸಿದ ಅಂಬರೀಶ್ ಅವರು ನಟಿ ರಮ್ಯಾ ಅವರಿಗೆ ಟಿಕೆಟ್ ನೀಡಿದ್ದರೆ ನನಗೆ ಇನ್ನೂ ಹೆಚ್ಚು ಸಂತೋಶವಾಗುತ್ತಿತ್ತು ಎಂದರು.












Click it and Unblock the Notifications