ಕದ್ದುಮುಚ್ಚಿ ಗೃಹಪ್ರವೇಶ ಮಾಡಿದ ಮಾಜಿ ಸಂಸದೆ ರಮ್ಯಾ

By: ಮಂಡ್ಯ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಅಕ್ಟೋಬರ್, 25 : ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಸದಾ ಸುದ್ದಿಯಲ್ಲಿದ್ದ ಮಾಜಿ ಸಂಸದೆ ದಿವ್ಯಸ್ಪಂದನಾ ಉ. ರಮ್ಯಾ ಮಂಡ್ಯದ ವಿದ್ಯಾನಗರದಲ್ಲಿ ತೆಗೆದುಕೊಂಡಿರುವ ಮನೆಗೆ ಕದ್ದುಮುಚ್ಚಿ ಗೃಹಪ್ರವೇಶ ಮಾಡುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

actor-ramya-house-warming-mandya-vidyanagar

ಭಾನುವಾರವೇ ನೂತನ ಮನೆಗೆ ಗೃಹ ಪ್ರವೇಶ ಮಾಡಿರುವ ರಮ್ಯಾ, ಮಂಗಳವಾರ ಮನೆಗೆ ಬಂದಿದ್ದು, ಈಕೆಯ ದರ್ಶನಕ್ಕಾಗಿ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು, ಮನೆಯ ಮುಂದೆ ಕಾಯುತ್ತಿದ್ದರೂ ಕ್ಯಾರೆ ಅನ್ನದೆ ದರ್ಶನವನ್ನೂ ನೀಡಿಲ್ಲ. ಇದರಿಂದಾಗಿ ಅಭಿಮಾನಿಗಳು ಬೇಸರದಿಂದಲೇ ವಾಪಸ್ಸಾದರು.

ನಾನು ಇದ್ದೇನೆ ಎಂದು ತೋರಿಸಲಿಕ್ಕಾಗಿಯೇ ಗಿಮಿಕ್‍ಗಳನ್ನು ಮಾಡುತ್ತಿರುವ ರಮ್ಯಾ, ಮೊನ್ನೆ ಭಾನುವಾರವಷ್ಟೇ ಯುವತಿಯೊಬ್ಬಳ ಹೋಂಡಾ ಆಕ್ಟಿವಾದಲ್ಲಿ ರೈಲ್ವೆ ನಿಲ್ದಾಣಕ್ಕೆ ತೆರಳಿ ಟಿಪ್ಪು ಎಕ್ಸ್‍ಪ್ರೆಸ್ ರೈಲಿನಲ್ಲಿ ಬೆಂಗಳೂರಿಗೆ ತೆರಳಿದ್ದರು.

ರಮ್ಯಾ ಅವರು ಈರೀತಿಯ ಗಿಮಿಕ್‍ಗಳನ್ನು ಮಾಡುತ್ತಿರುವುದಾದರೂ ಏಕೆ ಎನ್ನುವುದು ಜಿಲ್ಲಾ ಸಾರ್ವಜನಿಕರ ಪ್ರಶ್ನೆಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kannada film actor and politician Ramya House warming in Mandya Vidyanagar on sunday Oct 24.
Please Wait while comments are loading...