ಶ್ರೀರಂಗಪಟ್ಟಣದಲ್ಲಿ ಮಗು ಮಾರುವಾಗ ಸಿಕ್ಕಿ ಬಿದ್ದ ತಂದೆ!

By: ಮಂಡ್ಯ ಪ್ರತಿನಿಧಿ
Subscribe to Oneindia Kannada

ಮೈಸೂರು, ಜೂನ್ 14: ಹೆಣ್ಣು ಮಗುವನ್ನು ಮಾರುತ್ತೇನೆಂದು ಹೇಳಿದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು ಶ್ರೀರಂಗಪಟ್ಟಣ ಠಾಣೆ ಪೊಲೀಸರಿಗೊಪ್ಪಿಸಿದ್ದು, ವಿಚಾರಣೆಗೊಳಪಡಿಸಿದಾಗ ತಂದೆಯೇ ಮಗುವನ್ನು ಮಾರಾಟ ಮಾಡಲು ಮುಂದಾಗಿರುವುದು ಬೆಳೆಕಿಗೆ ಬಂದಿದೆ.

ಬೆಂಗಳೂರು ಮೂಲದ ವಿನೋದ್ (35) ಎಂಬಾತನೇ ಮಗುವನ್ನು ಮಾರುತ್ತೇನೆಂದು ಹೇಳಿ ಪೊಲೀಸರ ಅತಿಥಿಯಾಗಿರುವ ವ್ಯಕ್ತಿ. ಈತ ಶ್ರೀರಂಗಪಟ್ಟಣ ಬಸ್ ನಿಲ್ದಾಣದಲ್ಲಿ ಮಗುವಿನೊಂದಿಗೆ ಕಾಣಿಸಿಕೊಂಡಿದ್ದು, ಕೆಲಕಾಲ ಬಸ್ ನಿಲ್ದಾಣದಲ್ಲಿ ಕುಳಿತಿದ್ದ.

ಮಂಡ್ಯ: ತುತ್ತು ನೀಡಬೇಕಾದ ಕೈಯಲ್ಲಿ ವಿಷವುಣಿಸಿದ ಹೆತ್ತತಾಯಿ!

A man trying to sell his daughter in Mandya, arrested

ಆ ನಂತರ ಆಚೆ ಈಚೆ ಓಡಾಡುತ್ತಿದ್ದ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತ ಕುಳಿತಿದ್ದವರನ್ನು ಸಂಪರ್ಕಿಸಿ ನನಗೆ ಊರಿಗೆ ಹೋಗಲು ಬಸ್ಸಿಗೆ ಹಣವಿಲ್ಲ ಹಾಗಾಗಿ ನನ್ನಲ್ಲಿರುವ ಮಗುವನ್ನು ಮಾರುವುದಾಗಿ ಹೇಳಿದ್ದಾನೆ. ಈತನ ಮಾತು ಅನುಮಾನ ಹುಟ್ಟಿಸಿದ್ದರಿಂದ ಅಲ್ಲಿದ್ದವರು ಒಟ್ಟಾಗಿ ಆತನನ್ನು ಹಿಡಿದು ತದಕಿ ಬಳಿಕ ಶ್ರೀರಂಗಪಟ್ಟಣ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ಪಿಎಸ್ ಐ ಯೋಗಾಂಜನಪ್ಪ ನೇತೃತ್ವದ ತಂಡ ಮಗುವನ್ನು ಮಾರಾಟ ಮಾಡಲು ಮುಂದಾಗಿದ್ದ ವಿನೋದ್ ಹಾಗೂ ಮಗುವನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ತನ್ನ ವೃತ್ತಾಂತವನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾನೆ.

ಮಂಡ್ಯದಲ್ಲಿ ಮತಾಂತರದ ವಿವಾದ ಭುಗಿಲು, ಸತ್ಯ ಬಯಲಾಗಲಿ

ಮೂವರು ಹೆಂಡಿರ ಗಂಡನಾದ ಆರೋಪಿ ವಿನೋದ ಇದೀಗ ಮೂವರೊಂದಿಗೂ ಇರದೆ ಏಕಾಂಗಿಯಾಗಿದ್ದಾನಂತೆ. ತನ್ನ ಮೂವರು ಹೆಂಡತಿಯರ ಪೈಕಿ ಮೊದಲ ಹೆಂಡತಿಗೆ ಇಬ್ಬರು, ಎರಡನೆಯವಳಿಗೆ ನಾಲ್ವರು, ಮೂರನೇ ಪತ್ನಿಗೆ ಇಬ್ಬರು ಮಕ್ಕಳಿರುವುದಾಗಿ ಹೇಳಿದ್ದು, ಮೂರನೇ ಹೆಂಡತಿಯ ಎರಡನೇ ಹೆಣ್ಣು ಮಗುವನ್ನು ತನ್ನೊಂದಿಗೆ ಕರೆತಂದು ಮಾರಾಟ ಮಾಡಲು ಯತ್ನಿಸುತ್ತಿದ್ದನು ಎನ್ನುವುದು ಗೊತ್ತಾಗಿದೆ.

A man trying to sell his daughter in Mandya, arrested

ಎರಡು ಹೆಂಡತಿಯನ್ನು ಬಿಟ್ಟು ಮೂರನೆಯವಳಾದ ರಾಮಮ್ಮನೊಂದಿಗೆ ಈತ ಸಂಸಾರ ಮಾಡಿಕೊಂಡಿದ್ದನಾದರೂ, ಆಕೆ ಈತನ ಸ್ನೇಹಿತನೊಂದಿಗೆ ಅಕ್ರಮ ಸಂಬಂಧ ಬೆಳೆಸಿ ಕಳೆದ ನಾಲ್ಕು ದಿನಗಳ ಹಿಂದೆ ಹೆಣ್ಣು ಮಗುವನ್ನು ಬಿಟ್ಟು ಗಂಡು ಮಗುವನ್ನು ಕರೆದುಕೊಂಡು ಪರಾರಿಯಾಗಿದ್ದಾಳೆ ಎನ್ನಲಾಗಿದೆ. ಇದೀಗ ಆ ಹೆಣ್ಣು ಮಗುವನ್ನು ಮಾರಲು ವಿನೋದ್ ಮುಂದಾಗಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

ಆದರೆ ಆತ ತಾನು ಮಗುವನ್ನು ಮಾರುವ ಸಲುವಾಗಿ ಬಂದಿಲ್ಲ. ಶ್ರೀರಂಗಪಟ್ಟಣ ದೇವಸ್ಥಾನಕ್ಕೆ ಬಂದಿದ್ದು, ಮರಳಿ ಬೆಂಗಳೂರಿಗೆ ಹೋಗಲು ಬಸ್ಸಿಗೆ ದುಡ್ಡಿಲ್ಲದ ಕಾರಣದಿಂದ ಮಗುವನ್ನು ಮಾರಾಟ ಮಾಡಲು ಮುಂದಾಗಿದ್ದಾಗಿ ಹೇಳಿದ್ದಾನೆ.

ಕುರುಬರಹಳ್ಳಿ ರೌಡಿ ಪ್ರಶಾಂತ್ ಕೊಲೆ ಆರೋಪಿಗಳ ಬಂಧನ

ಮಂಡ್ಯ ಮಕ್ಕಳ ಸಹಾಯವಾಣಿ ಕೇಂದ್ರದ ಅಧಿಕಾರಿಗಳಾದ ನಂದಿನಿ ಮತ್ತು ನಂದೀಶ್ ಗೌಡ ಠಾಣೆಗೆ ಆಗಮಿಸಿ ಮಗುವನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ವಿಷಯ ತಿಳಿದ ಅಪರ ಪೊಲೀಸ್ ವರಿಷ್ಠಾಧಿಕಾರಿ ಸವಿತಾ ಪೊಲೀಸ್ ಠಾಣೆಗೆ ತೆರಳಿ ಮಗುವಿನ ತಂದೆ ವಿನೋದನನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದ್ದು, ಆತ ಹೇಳಿದ್ದು ನಿಜನಾ ಅಥವಾ ಇದರ ಹಿಂದೆ ಇನ್ನೇನಾದರೂ ರಹಸ್ಯ ಇದೆಯಾ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Srirangapatna police have detained a man from Mandya, who was trying to sell his own daughter for money.
Please Wait while comments are loading...