ನಿವೇಶನದಲ್ಲಿ ಸಿಕ್ಕ ನಿಧಿಯನ್ನು ಪೊಲೀಸರಿಗೊಪ್ಪಿಸಿದ ಮಹಾತಾಯಿ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಮೇ 19: ಹಣ ಅಂದ್ರೆ ಹೆಣಾನೂ ಬಾಯ್ಬಿಡುತ್ತೆ ಅಂತಾರೆ. ಆದ್ರೆ ಬಡತನವಿದ್ದರೂ, ಸಿಕ್ಕ ಲಕ್ಷಾಂತರ ಮೌಲ್ಯದ ಚಿನ್ನದ ನಾಣ್ಯವನ್ನು ಪ್ರಾಮಾಣಿಕವಾಗಿ ಪೊಲೀಸರ ಕೈಗೊಪ್ಪಿಸುವುದಕ್ಕೂ ಗುಂಡಿಗೆ ಬೇಕು!

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಾಣಸಮುದ್ರ ಎಂಬ ಊರಿನಲ್ಲಿ ಮನೆ ಕಟ್ಟುಸುತ್ತಿದ್ದ ಲಕ್ಷ್ಮಮ್ಮ(55) ಎಂಬುವವರಿಗೆ 435 ಅಪ್ಪಟ ಚಿನ್ನದ ನಾಣ್ಯ ಸಿಕ್ಕಿದೆ. ಮನೆಗೆ ಪಾಯ ತೋಡುತ್ತಿದ್ದ ಸಮಯದಲ್ಲಿ ಸಿಕ್ಕ ಈ ನಾಣ್ಯಗಳನ್ನು ಚಿನ್ನ ಹೌದೊ, ಅಲ್ಲವೋ ಎಂದು ಅಕ್ಕಸಾಲಿಗರನ್ನು ಕರೆಸಿ, ಪರೀಕ್ಷಿಸಿ, ನಂತರ ಹಲಗೂರು ಪೊಲೀಸರಿಗೆ ಒಪ್ಪಿಸಿದ್ದಾರೆ.[ಸಾಲಗಾರರ ಕಾಟಕ್ಕೆ ಹೆದರಿ ಮಂಡ್ಯದಲ್ಲಿ ರೈತ ಆತ್ಮಹತ್ಯೆ]

A land owner in Mandya hands over hidden treasure in her site to police

ತಮ್ಮ ಜಾಗದಲ್ಲಿ ಸಿಕ್ಕ ಲಕ್ಷಾಂತರ ಮೌಲ್ಯದ ಹಣವನ್ನು ಸ್ವಂತ ಉಪಯೋಗಕ್ಕಾಗಿ ಬಳಸಿಕೊಳ್ಳದೆ ಪ್ರಾಮಾಣಿಕವಾಗಿ ಅದನ್ನು ಪೊಲೀಸರಿಗೆ ತಂದಿತ್ತ ಲಕ್ಷ್ಮಮ್ಮ ಅವರ ಪ್ರಾಮಾಣಿಕತೆಯನ್ನು ಪೊಲೀಸರು ಶ್ಲಾಘಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A land owner in Banasamudra, Malavalli taluk, Mandya hands over hidden treasure in her site to police. The incident is the best example for honesty, police said.
Please Wait while comments are loading...