ಮಂಡ್ಯದಲ್ಲಿ 15 ವರ್ಷದ ಬಾಲಕನ ಮೇಲೆ ಚಿರತೆ ದಾಳಿ
ಬುಧವಾರ ಸಂಜೆ ಗೌತಮ್ (15) ಎಂಬ ಬಾಲಕ ತಮ್ಮ ಜಮೀನಿನ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಚಿರತೆ ದಾಳಿ ಮಾಡಿ ಗಾಯಗೊಳಿಸಿದೆ.
ಮಂಡ್ಯ, ಮಾರ್ಚ್ 2: ಮಂಡ್ಯ ಜಿಲ್ಲೆಯ ಚಿಕ್ಕಬೋರೇಗೌಡನದೊಡ್ಡಿ ಗ್ರಾಮದಲ್ಲಿ ಬುಧವಾರ ಚಿರತೆಯೊಂದು 15 ವರ್ಷದ ಬಾಲಕನ ಮೇಲೆ ದಾಳಿ ನಡೆಸಿದೆ.
ಬುಧವಾರ ಸಂಜೆ ಗೌತಮ್ (15) ಎಂಬ ಬಾಲಕ ತಮ್ಮ ಜಮೀನಿನ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಚಿರತೆ ಕಂಡು ಹೌಹಾರಿದ್ದಾನೆ. ಬಾಲಕನ್ನು ಕಂಡ ಚಿರತೆ ಆತನ ದಾಳಿ ಮಾಡಿ ಬಾಲಕನ ಕಿವಿ, ಕತ್ತು ಕೆನ್ನಯ ಭಾಗದಲ್ಲಿ ಕಚ್ಚಿ ಗಾಯಗೊಳಿಸಿದೆ. ಆಗ ಸಮೀಪದಲ್ಲಿಯೇ ಇದ್ದ ಬಾಲಕನ ಸಹೋದರ ಚಿರತೆ ಚಿರತೆ ಎಂದು ಕಿರುಚಲು ಆರಂಭಿಸಿದಾಗ ಚಿರತೆ ಅಲಿಂದ ಓಡಿಹೋಗಿ ಬಾಲಕ ಬದುಕುಳಿದಿದ್ದಾನೆ.

ನಂತರ ಬಾಲಕನನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿರತೆ ಹಿಡಿಯುವಂತೆ ಪೋಷಕರು ಹಾಗೂ ಗ್ರಾಮಸ್ಥರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಕಳೆದ ತಿಂಗಳು ಕರ್ನಾಟಕದಲ್ಲಿ ನಡೆದ ಚಿರತೆ ದಾಳಿಗೆ ಸಂಬಂಧಿಸಿದಂತೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ಸದಸ್ಯ ಎಚ್‌ಡಿ ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಚಿರತೆ ದಾಳಿ ಸಮಸ್ಯೆಯನ್ನು ನಿಭಾಯಿಸುವಲ್ಲಿ ಕರ್ನಾಟಕ ಸರ್ಕಾರವು ವಿಫಲವಾಗಿದೆ. ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಇಂತಹ ದಾಳಿಗಳು ನಡೆಯುತ್ತಿವೆ ಎಂದು ಹೇಳಿದ್ದರು.
ಇಷ್ಟು ಜನರ ಜೀವ ಹೋದರೂ ಬೇರೆ ರಾಜ್ಯಗಳ ಮಾದರಿಯಲ್ಲಿ ಈ ಪರಿಸ್ಥಿತಿ ಹತೋಟಿಗೆ ತರಲು ಸರ್ಕಾರ ಯತ್ನಿಸುತ್ತಿಲ್ಲ. ಅರಣ್ಯ ವೀಕ್ಷಕರ ಹುದ್ದೆಗಳನ್ನು ಏಕೆ ಭರ್ತಿ ಮಾಡಿಲ್ಲ? ವನ್ಯಜೀವಿಗಳ ಹಾವಳಿಯನ್ನು ತಡೆಗಟ್ಟುವಲ್ಲಿ ಜೀವಾಳವಾಗಿರುವ ಅರಣ್ಯ ವೀಕ್ಷಕರ ಖಾಲಿ ಹುದ್ದೆಗಳನ್ನು ಭರ್ತಿ ಮಾಡದೆ ಉಳಿಸಿಕೊಂಡಿರುವುದು ಎಷ್ಟು ಸರಿ ಅವರು ಪ್ರಶ್ನಿಸಿದ್ದರು.
ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಮಾನವ-ವನ್ಯಪ್ರಾಣಿ ಸಂಘರ್ಷದ ಹಲವು ಘಟನೆಗಳು ವರದಿಯಾಗಿವೆ. ಜನವರಿಯಲ್ಲಿ ಟಿ ನರಸೀಪುರದ ಹೊರನಹಳ್ಳಿಯ 11 ವರ್ಷದ ಬಾಲಕ ಬಯಲಿನಲ್ಲಿ ಮಲವಿಸರ್ಜನೆಗೆ ಹೋಗಿದ್ದಾಗ ಚಿರತೆ ದಾಳಿ ಮಾಡಿತ್ತು. ಮರುದಿನ ಅವನ ಶವ ಪತ್ತೆಯಾಗಿತ್ತು. ಇದು ಆ ತಿಂಗಳಲ್ಲಿ ಚಿರತೆಯಿಂದ ಎರಡನೇ ಸಾವು ಮತ್ತು ಮೂರು ತಿಂಗಳಲ್ಲಿ ನಾಲ್ಕನೇ ಸಾವು ಆಗಿತ್ತು. ಮತ್ತೊಂದೆಡೆ ಮನೆಯ ಹಿಂಬದಿಯಲ್ಲಿದ್ದ ಸಿದ್ದಮ್ಮ (60) ಎಂಬ ಮಹಿಳೆಯನ್ನೂ ಚಿರತೆ ಕೊಂದು ಹಾಕಿದೆ. ಮೈಸೂರು ಜಿಲ್ಲೆಯಲ್ಲಿ ಜನರ ಮೇಲೆ ದಾಳಿ ನಡೆಸುತ್ತಿದ್ದ ಚಿರತೆಯನ್ನು ಕರ್ನಾಟಕ ಅರಣ್ಯ ಇಲಾಖೆಯ ತಂಡ ಯಶಸ್ವಿಯಾಗಿ ಹಿಡಿದಿತ್ತು.












Click it and Unblock the Notifications