Get Updates
Get notified of breaking news, exclusive insights, and must-see stories!

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದ ನಾಳೆಯ ಕಾರ್ಯಕ್ರಮಗಳೇನು? ಇಲ್ಲಿದೆ ಸಂಪೂರ್ಣ ವಿವರ

ಮಂಡ್ಯ, ಡಿಸೆಂಬರ್‌ 20: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಡಿಸೆಂಬರ್‌ 21 ರಂದು ವಿವಿಧ ಕಾರ್ಯಕ್ರಮ ನಡೆಯಲಿದ್ದು, ಎಷ್ಟು ಗಂಟೆಗೆ ಯಾವ ಕಾರ್ಯಕ್ರಮ ನಡೆಯಲಿದೆ ಎಂಬುದರ ಸಮಗ್ರ ಮಾಹಿತಿ ಇಲ್ಲಿದೆ. ಗೋಷ್ಟಿಗಳು ನಾಳೆ ಬೆಳಗ್ಗಿನಿಂದ ಆರಂಭವಾಗಿ ಸಂಜೆವರೆಗೆ ನಡೆಯಲಿದೆ.

ಬೆಳಿಗ್ಗೆ 9.30 ರಿಂದ 11 ಗಂಟೆಯವರೆಗೆ ಪ್ರಧಾನ ವೇದಿಕೆಯಲ್ಲಿ ನೆಲ-ಜಲ ಸಾಕ್ಷಾರತೆ : ಅವಲೋಕನ ವಿಷಯದ ಬಗ್ಗೆ ಮೂರನೇ ಗೋಷ್ಠಿ ನಡೆಯಲಿದೆ. ನೀರಾವರಿ ತಜ್ಞರು ಕ್ಯಾಪ್ಟನ್ ರಾಜಾರಾವ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಚಿಂತಕರು ಡಾ. ಅಶೋಕ ದಳವಾಯಿ ಅವರು ಆಶಯ ನುಡಿ ನುಡಿಯಲಿದ್ದಾರೆ.

87th Akhila Bharata Kannada Sahitya Sammelana Here Is The List Of Tomorrow Program

ಕಾವೇರಿ ಅಚ್ಚುಕಟ್ಟಿನ ಕೆರೆಕಟ್ಟೆಗಳ ಸ್ಥಿತಿಗತಿಗಳು ವಿಷಯದ ಬಗ್ಗೆ ಡಾ. ಎಂ. ಎನ್. ತಿಮ್ಮೇಗೌಡ, ಕೃಷ್ಣಾ ಮತ್ತು ಮಹಾದಾಯಿ ವಿಷಯದ ಬಗ್ಗೆ ಡಾ. ಕೃಷ್ಣ ಕೋಲ್ಹಾರಕುಲಕರ್ಣಿ ಹಾಗೂ ಕೃಷಿಕರು ಮತ್ತು ಜನಸಾಮಾನ್ಯರಲ್ಲಿ ಇರಬೇಕಾದ ನೆಲ-ಜಲ ಸಾಕ್ಷಾರತೆ ವಿಷಯದ ಬಗ್ಗೆ ಡಾ. ಎ. ಬಿ. ಪಾಟೀಲ್ ಅವರು ವಿಷಯ ಮಂಡನೆ ಮಾಡಲಿದ್ದಾರೆ. ಕಾರ್ಯಕ್ರಮದ ನಿರ್ವಹಣೆ - ಓಂ ಪ್ರಕಾಶ್ ದಡ್ಡೆ, ಸ್ವಾಗತ - ಬಿ ಟಿ ನಾಗೇಶ್, ನಿರೂಪಣೆ - ಬಿ ಎನ್ ವಾಸರೆ, ವಂದನಾರ್ಪಣೆ - ಬಿ ಹೆಚ್ ಸತೀಶ್ ಗೌಡ ಅವರು ಮಾಡಲಿದ್ದಾರೆ.

ನಾಲ್ಕನೇ ಗೋಷ್ಠಿಯು ಬೆಳಿಗ್ಗೆ 11 ರಿಂದ 12.30 ಗಂಟೆಯಯವರೆಗೆ ಸಾಹಿತ್ಯದಲ್ಲಿ ರಾಜಕೀಯ : ರಾಜಕೀಯದಲ್ಲಿ ಸಾಹಿತ್ಯ ವಿಷಯದ ಬಗ್ಗೆ ನಡೆಯಲಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ರಾಜಕೀಯ ಚಿಂತಕರು ಡಾ.ಬಿ. ಎಲ್. ಶಂಕರ್ ಅವರು ಆಶಯ ನುಡಿಯನ್ನು ನೆರವೇರಿಸಲಿದ್ದಾರೆ.

ರಾಜಕೀಯ ಚಿಂತಕ ಸಿ.ಟಿ. ರವಿ ಅವರು ಸಾಹಿತ್ಯ ಕೇಂದ್ರಿತವಾದ ಸೈದ್ಧಾಂತಿಕ-ರಾಜಕೀಯ ನಿಲುವುಗಳು, ರಾಜಕೀಯ ಚಿಂತಕ ಡಾ. ಕೆ. ಅನ್ನದಾನಿ ಅವರು ರಾಜಕಾರಣಿಗಳಿಗಿರಬೇಕಾದ ಸಾಹಿತ್ಯ ಪ್ರಜ್ಞೆ ಹಾಗೂ ರಾಜಕೀಯ ವಿಶ್ಲೇಷಕರು ರವೀಂದ್ರ ರೇಷ್ಮೆ ಅವರು ಸಾಹಿತ್ಯ ಕೃತಿಗಳಲ್ಲಿ ಕಂಡು ಬರುವ ರಾಜಕೀಯ ಚಿತ್ರಣ ವಿಷಯದ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ. ಕಾರ್ಯಕ್ರಮದ ನಿರ್ವಹಣೆ - ಡಿ. ಎಸ್.ಕೃಷ್ಣಾರೆಡ್ಡಿ, ಸ್ವಾಗತ - ಕೆ. ಎಸ್. ಸಿದ್ಧಲಿಂಗಪ್ಪ, ನಿರೂಪಣೆ - ಕೊಂಡಳ್ಳಿ ಪ್ರಭಾಕರ್ ಶೆಟ್ಟಿ, ವಂದನಾರ್ಪಣೆ - ನಾಗೇಂದ್ರ ಎನ್. ಅವರು ನೆರವೇರಿಸಲಿದ್ದಾರೆ.

87th Akhila Bharata Kannada Sahitya Sammelana Here Is The List Of Tomorrow Program

ಐದನೇ ಗೋಷ್ಠಿ ಮಧ್ಯಾಹ್ನ 12.30 ರಿಂದ 1.30 ರವರೆಗೆ ಕರ್ನಾಟಕ -50: ಹಿನ್ನೋಟ -ಮುನ್ನೋಟ, ಕನ್ನಡವೆಂದರೆ ಬರೀ ನುಡಿಯಲ್ಲ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನಡೆಯಲಿದೆ. ಹಿರಿಯ ವಿದ್ವಾಂಸ ಡಾ. ನರಹಳ್ಳಿ ಬಾಲಸುಬ್ರಮಣ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಶಂಕರ ಹಲಗತ್ತಿ ಅವರು ಹೆಸರಾಯಿತು ಕರ್ನಾಟಕ - ಉಸಿರಾಯಿತು ಕನ್ನಡ ವಿಷಯದ ಬಗ್ಗೆ ಹಾಗೂ ರಾಘವೇಂದ್ರ ಪಾಟೀಲ ಅವರು ಐದು ದಶಕಗಳ ಚಾರಿತ್ರಿಕ ಮತ್ತು ಸಾಂಸ್ಕೃತಿಕ ನೋಟ ವಿಷಯದ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ. ಕಾರ್ಯಕ್ರಮದ ನಿರ್ವಹಣೆ - ನಿತ್ಯಶ್ರೀ ಎಂ.ಎಸ್., ಸ್ವಾಗತ - ಸಿದ್ದಪ್ಪ ಹೊಟ್ಟಿ, ನಿರೂಪಣೆ - ಸುಮತಿ ಎ. ಜಿ. ವಂದನಾರ್ಪಣೆ - ಹಣಮಂತ ಶೇರಿ ಖಚೋರಿ ಅವರು ನೆರವೇರಿಸಲಿದ್ದಾರೆ.

ಆರನೇ ಗೋಷ್ಠಿ ಮಧ್ಯಾಹ್ನ 1.30 ರಿಂದ 3 ಗಂಟೆಯವರೆಗೆ ಮಂಡ್ಯ ನೆಲ ಮೂಲದ ಮೊದಲುಗಳು ವಿಷಯದ ಬಗ್ಗೆ ಗೋಷ್ಠಿ -6 ನಡೆಯಲಿದೆ. ಖ್ಯಾತ ವಾಗ್ಮಿಗಳು ಪ್ರೊ. ಎಂ. ಕೃಷ್ಣೆಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಪ್ರೊ.ಬಿ.ಶಿವಲಿಂಗಯ್ಯ ಅವರು ಕೆರೆ, ಅಣೆಕಟ್ಟೆ, ಸೇತುವೆ, ಕಾಲುವೆಗಳ ನಿರ್ಮಾಣ ವಿಷಯದ ಬಗ್ಗೆ, ಡಾ. ವಿ. ನಾಗೇಂದ್ರ ಪ್ರಸಾದ್ ಅವರು ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆ ವಿಷಯದ ಬಗ್ಗೆ, ಡಾ.ಕೆಂಪಮ್ಮ ಅವರು ಜನಪದ, ನವೀನ್ ಕುಮಾರ್ ಅವರು ಜಲವಿದ್ಯುತ್ ವಿಷಯದ ಬಗ್ಗೆ ನವೀನ್ ಕುಮಾರ್ ಅವರು ವಿಷಯ ಮಂಡನೆ ಮಾಡಲಿದ್ದಾರೆ.

ನಿವೃತ್ತ ಕನ್ನಡ ಪ್ರಾಧ್ಯಪಕರು ಡಾ.ಎಚ್. ಎಸ್. ಮುದ್ದೇಗೌಡ ಅವರು ಕಾರ್ಯಕ್ರಮದ ವಿಶೇಷ ಉಪಸ್ಥಿತಿ ವಹಿಸಲಿದ್ದಾರೆ. ಕಾರ್ಯಕ್ರಮದ ನಿರ್ವಹಣೆ - ಮಂಡ್ಯ ಮಿತ್ರ ಚನ್ನೇಗೌಡ, ಸ್ವಾಗತ - ಚಂದ್ರಲಿಂಗು, ನಿರೂಪಣೆ - ಮಂಜುನಾಥ ಎಚ್. ಎಸ್, ವಂದನಾರ್ಪಣೆ - ಗೂಳಪ್ಪ ಹುಲಿಮನಿ ಅವರು ನೆರವೇರಿಸಲಿದ್ದಾರೆ.

ಏಳನೇ ಗೋಷ್ಠಿಯು ಮಧ್ಯಾಹ್ನ - 3 ರಿಂದ 5.05 ಗಂಟೆಯವರೆಗೆ ಕರ್ನಾಟಕದ ಮೌಖಿಕ ಪರಂಪರೆಗಳ ಪ್ರದರ್ಶನ ಮತ್ತು ವಿವರಣೆ ವಿಷಯದ ಬಗ್ಗೆ ನಡೆಯಲಿದೆ. ಹಿರಿಯ ಜಾನಪದ ತಜ್ಞ ಡಾ. ವೀರಣ್ಣ ದಂಡೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾ.ರಾಮೇಶ್ವರಪ್ಪ ಅವರು ಮಂಟೇಸ್ವಾಮಿ ಕಾವ್ಯ, ನಂಜುಂಡಸ್ವಾಮಿ ಪಿ.ಎಂ. ಅವರು ಮೂಡಲಪಾಯ, ಎಂ. ಮೋಹನ್ ಅವರು ಜುಂಜಪ್ಪ ಕಾವ್ಯ, ಮಲ್ಲವ್ವ ಮೇಗೇರಿ ಅವರು ಶ್ರೀಕೃಷ್ಣ ಪಾರಿಜಾತ, ನಾಗರಾಜ ತೋಂಬ್ರಿ ಅವರು ಜೋಗಿ ಕಥಾನಕ ವಿಷಯದ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ. ಕಾರ್ಯಕ್ರಮದ ನಿರ್ವಹಣೆ - ಜಿ. ವೈ. ಪದ್ಮ, ಸ್ವಾಗತ - ಸುರೇಶ್ ಚನ್ನಶೆಟ್ಟಿ, ನಿರೂಪಣೆ -ಡಾ. ರೇಷ್ಮಾ ಅಂಗಡಿ, ವಂದನಾರ್ಪಣೆ- ಕೆ.ಆರ್.ಮಮತೇಶ್ ಅವರು ನೆರವೇರಿಸಲಿದ್ದಾರೆ.

ಇದೆಲ್ಲದರ ನಡುವೆ ಸಂಜೆ 5. 05 ರಿಂದ 6 ಗಂಟೆಯವರೆಗೆ ಸಮ್ಮೇಳನಾಧ್ಯಕ್ಷರ ಜೊತೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಸಮ್ಮೇಳನಾಧ್ಯಕ್ಷರು - ನಾಡೋಜ ಡಾ. ಗೊ. ರು. ಚನ್ನಬಸಪ್ಪ ಹಾಗೂ ಪ್ರಧಾನ ನಿರ್ವಹಣೆ - ಹಿರಿಯ ಜಾನಪದ ತಜ್ಞ ಡಾ ಕೆ ಆರ್ ಸಂಧ್ಯಾರೆಡ್ಡಿ ಮಾಡಲಿದ್ದಾರೆ.: ಡಾ. ಬಸವರಾಜ್ ನೆಲ್ಲೀಸರ, ಮಾರುತಿ ಶಿಡ್ಲಾಪುರ, ಪ್ರೊ. ಟಿ.ವಿ.ಸುರೇಶ ಗುಪ್ತ, ಡಾ. ಅನಸೂಯಾ ಹೊಂಬಾಳೆ, ಶಂಕರ ಮಲ್ಲಪ್ಪ ಬೈಚಬಾಳ, ಶಾಂತಲಾ ಧರ್ಮರಾಜ, ಡಾ. ಪಿ. ನಾಗರಾಜು, ಡಾ. ಕುರುವ ಬಸವರಾಜ್, ಪ್ರೊ. ಎಂ.ವೈ. ಶಿವರಾಂ, ಡಾ. ಸಂತೋಷ್ ಹಾನಗಲ್ ಅವರುಗಳು ಸಂವಾದಕರಾಗಿದ್ದಾರೆ. ಕಾರ್ಯಕ್ರಮದ ನಿರ್ವಹಣೆ - ಶರಣು ಸಬರದ, ಸ್ವಾಗತ - ಸೂರಿ ಶ್ರೀನಿವಾಸ್, ನಿರೂಪಣೆ - ಡಾ. ಜಿನದತ್ತ ಹಡಗಲಿ, ವಂದನಾರ್ಪಣೆ - ವೆಂಕಟೇಶ ಬೇವಿನಬೆಂಚಿ ಅವರು ನೆರವೇರಿಸಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+