• search
  • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕುರುಕ್ಷೇತ್ರ ಸಿನಿಮಾ ಬಿಡುಗಡೆ; 50 ಸಾವಿರ ಲಾಡು ವಿತರಣೆಗೆ ಸಿದ್ಧತೆ

|

ಮಂಡ್ಯ, ಆಗಸ್ಟ್ 8 : ನಾಳೆ ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಕುರುಕ್ಷೇತ್ರ ಸಿನಿಮಾ ಬಿಡುಗಡೆಯಾಗಲಿದೆ. ಈಗಾಗಲೇ ರಾಜ್ಯದೆಲ್ಲಡೆ ಚಿತ್ರಾಭಿಮಾನಿಗಳು ಮುಂಗಡವಾಗಿ ಟಿಕೆಟ್ ಬುಕ್ ಮಾಡಿದ್ದು, ಬಹುತೇಕ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ.

ನಾಳೆ ಚಿತ್ರಮಂದಿದಲ್ಲಿ ತಮ್ಮ ನೆಚ್ಚಿನ ನಾಯಕರ ಕಟೌಟ್ ನಿಲ್ಲಿಸಿ ಪಟಾಕಿ ಹೊಡೆದು ಸಂಭ್ರಮಿಸಲು ತಯಾರಿ ನಡೆಸಿದ್ದಾರೆ. ಅದರಲ್ಲೂ ಮಂಡ್ಯದಲ್ಲಿ ಕುರುಕ್ಷೇತ್ರ ಚಿತ್ರವನ್ನು ಸ್ವಾಗತಿಸಲು ವಿಶೇಷವಾಗಿ ಅಭಿಮಾನಿಗಳು ಮುಂದಾಗಿದ್ದಾರೆ.

ದರ್ಶನ್ ಸ್ಟೈಲ್ ನಲ್ಲಿ ಡೈಲಾಗ್ ಹೇಳಿದ ಸಿದ್ದರಾಮಯ್ಯ: ವಿರೋಧಿಗಳಿಗೆ ಎಚ್ಚರಿಕೆ!

ಹೌದು,ಮಂಡ್ಯದಲ್ಲಿ ಚಿತ್ರದ ಬಿಡುಗಡೆಯನ್ನು ಹಬ್ಬದಂತೆ ಆಚರಿಸಲು ಸಿದ್ಧತೆ ನಡೆಸಲಾಗುತ್ತಿದೆ. ಇದಕ್ಕಾಗಿ ಮಂಡ್ಯದ ಇಂಡುವಾಳು ಸಚ್ಚಿದಾನಂದ ಹಿತೈಷಿಗಳ ಬಳಗದ ವತಿಯಿಂದ ಹಲವು ಕಾಯಕ್ರಮಗಳನ್ನು ಆಯೋಜಿಸಲಾಗಿದೆ.

ನಾಳೆ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಅಭಿಮಾನಿಗಳಿಂದ ಸಾಮೂಹಿಕ ರಕ್ತದಾನ, ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನೂರು ಕ್ವಿಂಟಲ್ ಅಕ್ಕಿ ತಲುಪಿಸಲು ನಿರ್ಧರಿಸಲಾಗಿದೆ.

ಅಲ್ಲದೆ ಸಿನೆಮಾ ಪ್ರದರ್ಶನಕ್ಕೂ ಮುನ್ನ ಮಂಡ್ಯದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಕೂಡ ನಡೆಯಲಿದೆ. ಈ ಮೆರವಣಿಗೆಯಲ್ಲಿ 50 ಜೋಡೆತ್ತು, 50 ಆಟೋ, 50 ಟ್ರ್ಯಾಕ್ಟರ್ ಹಾಗೂ 500 ಬೈಕ್ ಸೇರಿದಂತೆ 50 ಬಗೆಯ ವಿವಿಧ ಜಾನಪದ ಕಲಾತಂಡಗಳು ಭಾಗಿಯಾಗಿ ಸಂಭ್ರಮಿಸಲಿದೆ.

ಚಿತ್ರ ಬಿಡುಗಡೆಯಾಗಲಿರುವ ಚಿತ್ರ ಮಂದಿರದ ಮುಂಭಾಗ 50 ಅಡಿ ಉದ್ದದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಟೌಟ್ ನಿಲ್ಲಿಸಲಾಗುತ್ತಿದ್ದು, ಇನ್ನು ಸಿನಿಮಾ ನೋಡಲು ಬಂದರಿಗೆ ಹಾಗೂ ಅಭಿಮಾನಿಗಳಿಗೆ ಹಂಚಲು 50 ಸಾವಿರ ಲಾಡು ತಯಾರಿಸಲಾಗುತ್ತಿದೆ. ಹೀಗೆ ವಿಶಿಷ್ಟವಾಗಿ ಪೌರಾಣಿಕ ಸಿನಿಮಾ ಬರಮಾಡಿಕೊಳ್ಳಲು ಅಭಿಮಾನಿಗಳು ಮುಂದಾಗಿದ್ದಾರೆ.

English summary
50 thousand laddus distributing tomorrow Kurukshetra movie release at Mandya. Also actor Darshan fans are doing social awareness programs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X