ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ : ಮಾವು ಮೇಳಕ್ಕೆ ಚಾಲನೆ, 73 ಬಗೆಯ ಹಣ್ಣು ಸವಿಯಿರಿ

By Gururaj
|
Google Oneindia Kannada News

ಮಂಡ್ಯ, ಮೇ 25 : ಮಂಡ್ಯದಲ್ಲಿ 5 ದಿನಗಳ ಕಾಲ ನಡೆಯವ ಮಾವು ಮೇಳಕ್ಕೆ ಚಾಲನೆ ಸಿಕ್ಕಿದೆ. ರಾಜ್ಯ ಮತ್ತು ಅಕ್ಕಪಕ್ಕದ ರಾಜ್ಯಗಳ ವಿವಿಧ ತಳಿಗಳ ಮಾವಿನ ಹಣ್ಣುಗಳ ಸವಿಯನ್ನು ಜನರು ಮೇಳದಲ್ಲಿ ಸವಿಯಬಹುದಾಗಿದೆ.

ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತಿ ಮಂಡ್ಯ, ಜಿಲ್ಲಾ ತೋಟಗಾರಿಕೆ ಸಂಘ ಜಂಟಿಯಾಗಿ ಮಾವು ಮೇಳ ಆಯೋಜಿಸಿವೆ. ಶುಕ್ರವಾರ ಮಂಡ್ಯ ಜಿಲ್ಲಾಧಿ ಎನ್. ಮಂಜುಶ್ರೀ ಅವರು 5 ದಿನಗಳ ಮಾವು ಮೇಳಕ್ಕೆ ಚಾಲನೆ ನೀಡಿದರು.

ರಾಮನಗರ: ಮಾವಿನ ಮೇಳಕ್ಕೆ ಗ್ರಾಹಕರಿಂದ ಭರ್ಜರಿ ರೆಸ್ಪಾನ್ಸ್ರಾಮನಗರ: ಮಾವಿನ ಮೇಳಕ್ಕೆ ಗ್ರಾಹಕರಿಂದ ಭರ್ಜರಿ ರೆಸ್ಪಾನ್ಸ್

ನಂತರ ಮಾತನಾಡಿದ ಅವರು, 'ನಮ್ಮ ರಾಜ್ಯದ ವಿವಿಧ ಜಿಲ್ಲೆಗಳ ಮಾವು ತಳಿಗಳ ಜೊತೆಯಲ್ಲಿ ಬೇರೆ ರಾಜ್ಯದ ತಳಿಗಳ ಮಾವಿನ ಹಣ್ಣನ್ನೂ ಕೂಡ ಈ ಮೇಳದಲ್ಲಿ ಕಾಣಬಹುದಾಗಿದೆ. ಸೀಜನಲ್ ಹಣ್ಣುಗಳನ್ನು ಹೆಚ್ಚಾಗಿ ಸೇವನೆ ಮಾಡುವುದರ ಮೂಲಕ ಮಾವು ಬೆಳಗಾರರಿಗೆ ನೆರವಾಗಬೇಕು' ಎಂದು ಹೇಳಿದರು.

5 days Mango mela begins in Mandya

'ನಿಫಾ ವೈರಸ್ ಬಗ್ಗೆ ಎಲ್ಲಾ ರೀತಿಯ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಅತಂಕವಿಲ್ಲದೆ ಜನತೆ ಮಾವು ಸೇವನೆ ಮಾಡಬಹುದಾಗಿದೆ. ಕೃತಕವಾಗಿ ಹಣ್ಣು ಮಾಡಲಾಗಿಲ್ಲ. ಮಾವುಗಳನ್ನು ನೈಸರ್ಗಿಕವಾಗಿ ಮಾಗಿಸಲಾಗಿದೆ' ಎಂದರು.

ಮಾವು ಮೇಳಕ್ಕೂ ಕಂಟಕ ತಂದೊಡ್ಡಿತು ನಿಪಾಹ್ ವೈರಸ್ಮಾವು ಮೇಳಕ್ಕೂ ಕಂಟಕ ತಂದೊಡ್ಡಿತು ನಿಪಾಹ್ ವೈರಸ್

'ನಿಫಾ ವೈರಸ್ ಬಗ್ಗೆ ಸಾರ್ವಜನಿಕರು ಆತಂಕಗೊಳ್ಳದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆರೋಗ್ಯ ಇಲಾಖೆ ಮತ್ತು ಪಶು ಇಲಾಖೆಗಳ ಜೊತೆ ಸಭೆ ನಡೆಸಿ ಸಾರ್ವಜನಿಕರಿಗೆ ಅರಿವು ಮೂಡಿಸಲು ಸೂಚನೆ ನೀಡಿಲಾಗಿದ್ದು, ಗ್ರಾಮ ಪಂಚಾಯಿತಿ ಮಟ್ಟಗಳಲ್ಲಿ ರೋಗದ ಬಗ್ಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ' ಎಂದು ಹೇಳಿದರು.

5 days Mango mela begins in Mandya

ಮಾವಿನ ಮೇಳದಲ್ಲಿ 18 ಮಳಿಗೆಗಳನ್ನು ಸ್ಥಾಪನೆ ಮಾಡಲಾಗಿದೆ. ಒಟ್ಟು 73 ವಿವಿಧ ತಳಿಯ ಮಾವಿನ ಹಣ್ಣುಗಳು ಮೇಳದಲ್ಲಿವೆ. ಆಂಧ್ರ ಪ್ರದೇಶದ10, ಬೆಳಗಾವಿ ಜಿಲ್ಲೆಯ 30 ತಳಿಗಳನ್ನೊಳಗೊಂಡ ಮಾವಿನ ಹಣ್ಣುಗಳನ್ನು ಜನರು ಸವಿಯಬಹುದಾಗಿದೆ.

English summary
Mandya deputy commissioner N.Manjushree launched 5 days Mango mela in Mandya. More than 70 verities of Mangoes in mela.Mela jointly organized by Horticulture department and Mandya Zilla Panchayat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X