ತಾಯಿ ಅಸ್ಥಿ ವಿಸರ್ಜನೆಗೆ ಬಂದ ಮಗನೂ ನೀರು ಪಾಲು
ಮಂಡ್ಯ, ಆಗಸ್ಟ್ 1: ಕಾವೇರಿ ನದಿಯಲ್ಲಿ ತನ್ನ ತಾಯಿಯ ಅಸ್ಥಿ ವಿಸರ್ಜಿಸಲು ಬಂದ ಮಗ ಅದೇ ನದಿಯಲ್ಲಿ ಕೊಚ್ಚಿ ಹೋದ ಘಟನೆ ಶ್ರೀರಂಗಪಟ್ಟಣದ ಗಂಜಾಂ ಬಳಿ ನಡೆದಿದೆ.
ಶ್ರೀಕಾಂತ್ (45) ಮುಳುಗಿ ಸಾವಿಗೀಡಾದ ವ್ಯಕ್ತಿ. ಬೆಂಗಳೂರಿನ ರಾಜಾಜಿನಗರದ ನಿವಾಸಿ ಶ್ರೀಕಾಂತ್ ಅವರ ತಾಯಿ ಅಂಬುಜಾ ಸಾವಿಗೀಡಾಗಿದ್ದರು. ಹಾಗಾಗಿ ತಾಯಿಯ ಅಸ್ಥಿ ವಿಸರ್ಜನೆಗಾಗಿ 5 ಜನರ ಜೊತೆ ಸಂಗಮಕ್ಕೆ ಶ್ರೀಕಾಂತ್ ಆಗಮಿಸಿದ್ದರು. ಈ ವೇಳೆ ಅಸ್ಥಿ ವಿಸರ್ಜನೆಗೆ ಕಾವೇರಿ ನದಿಗಿಳಿದಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಸುಮಾರು 4 ಗಂಟೆಗಳ ತೀವ್ರ ಶೋಧದ ಬಳಿಕ ಕೊಚ್ಚಿ ಹೋದ ಜಾಗದಿಂದ 6 ಕಿ. ಮೀ ದೂರದಲ್ಲಿರುವ ಶ್ರೀರಂಗಪಟ್ಟಣದ ತಾಲೂಕಿನ ಮಹದೇವಪುರದ ಬಳಿ ಶ್ರೀಕಾಂತ್ ಶವ ಸಿಕ್ಕಿದೆ.

ವ್ಯಕ್ತಿಯ ಶವ ಮೇಲೆತ್ತಿ ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications