ಮೇ 23ರಂದು ಮಂಡ್ಯ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ
Recommended Video
ಮಂಡ್ಯ, ಮೇ 18: ಮಂಡ್ಯ ಲೋಕಸಭೆ ಚುನಾವಣೆ ಕಣ ಬಹು ಜಿದ್ದಾ-ಜಿದ್ದಿನದ್ದಾದ್ದರಿಂದ ಭದ್ರತೆ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ, ಹಾಗಾಗಿ ಫಲಿತಾಂಶದ ದಿನ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಹೊರಡಿಸಲಾಗಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಸಾಮಾನ್ಯವಾಗಿ ಚುನಾವಣಾ ಮತ ಎಣಿಕೆಯ ಸುತ್ತ-ಮುತ್ತ ಮಾತ್ರ ನಿಷೇಧಾಜ್ಞೆ ಇರುತ್ತದೆ, ಆದರೆ ಮಂಡ್ಯ ಅತಿ ಸೂಕ್ಷ್ಮ ಪ್ರದೇಶವಾದ್ದರಿಂದ ಫಲಿತಾಂಶದ ದಿನ (ಮೇ 23) ರಂದು ಮಂಡ್ಯ ನಗರ ಸೇರಿ ಲೋಕಸಭೆ ಕ್ಷೇತ್ರದ ಪ್ರಮುಖ ನಗರ, ಪಟ್ಟಣ ಹಾಗೂ ಇನ್ನೂ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇಧಾಜ್ಞೆ ಹೇರಲಾಗಿದೆ.
ಗೆದ್ದ ಅಭ್ಯರ್ಥಿಗಳ ಮೆರವಣಿಗೆಗೆ ನಿಷೇಧ ಹೇರಲಾಗಿದ್ದು, ಯಾವುದೇ ಪಕ್ಷದವರು ಫಲಿತಾಂಶದ ನಂತರ ಮೆರವಣಿಗೆ ಮಾಡುವವುದಕ್ಕೆ ನಿಷೇಧ ಹೇರಲಾಗಿದೆ.

ಮೇ 23 ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯ ರಾತ್ರಿಯವರೆಗೂ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ಪಿ.ಸಿ.ಜಾಫರ್ ಅವರು ಹೇಳಿದ್ದಾರೆ. ಪಟಾಕಿ ಸಿಡಿಸುವುದು, ಸಿಡಿಮದ್ದು ಹೊಡೆಯುವುದು, ಗುಂಪುಗೂಡಿ ಘೋಷಣೆ ಕೂಗುವುದು ಸಹ ಅಂದು ಮಾಡುವಂತಿಲ್ಲ.
ಮಂಡ್ಯ ಚುನಾವಣಾ ಕಣದಲ್ಲಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೆ, ಸುಮಲತಾ ಅವರು ಎದುರಾಳಿಯಾಗಿ ಸ್ಪರ್ಧಿಸಿದ್ದಾರೆ. ಇಬ್ಬರ ನಡುವೆ ಭಾರಿ ಬಿರುಸಿನ ಪೈಪೋಟಿ ನಡೆದಿದ್ದು, ಈ ಚುನಾವಣಾ ಫಲಿತಾಂಶದ ಮೇಲೆ ರಾಜ್ಯ ರಾಜಕೀಯ ಭವಿಷ್ಯವೂ ನಿಂತಿದೆ ಎನ್ನಲಾಗುತ್ತಿದೆ.












Click it and Unblock the Notifications