ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು ಪುನರ್‌ನಿರ್ಮಾಣಕ್ಕೆ ಹೆಚ್ಚುವರಿ 500 ಕೋಟಿ ಕೊಟ್ಟ ಯಡಿಯೂರಪ್ಪ

|
Google Oneindia Kannada News

ಕೊಡಗು, ಜುಲೈ 30: ಪ್ರವಾಹದಿಂದ ತತ್ತರಿಸಿದ್ದ ಕೊಡಗು ಜಿಲ್ಲೆ ಪುನರ್‌ ನಿರ್ಮಾಣಕ್ಕೆ ನೂತನ ಸಿಎಂ ಯಡಿಯೂರಪ್ಪ ಅವರು 500 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದ್ದಾರೆ.

ಕಳೆದ ವರ್ಷ ಕೊಡಗಿನಲ್ಲಿ ಭಾರಿ ಪ್ರವಾಹದಿಂದಾಗಿ ಹಲವರು ಮನೆ, ಹೊಲ, ಬೆಳೆ ಕಳೆದುಕೊಂಡಿದ್ದರು. ಕುಮಾರಸ್ವಾಮಿ ಅವರು ಈಗಾಗಲೇ ಕೊಡಗು ಪುನರ್‌ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದ್ದಾರೆ. ಆದರೆ ಯಡಿಯೂರಪ್ಪ ಅವರು ಈಗ ಹೆಚ್ಚುವರಿ 500 ಕೋಟಿ ಬಿಡುಗಡೆ ಮಾಡಿದ್ದಾರೆ.

ಇನ್ಮೇಲೆ ಟಿಪ್ಪು ಜಯಂತಿ ಇಲ್ಲ! ಬಿಜೆಪಿ ಸರ್ಕಾರದ ಮಹತ್ವದ ನಿರ್ಣಯಇನ್ಮೇಲೆ ಟಿಪ್ಪು ಜಯಂತಿ ಇಲ್ಲ! ಬಿಜೆಪಿ ಸರ್ಕಾರದ ಮಹತ್ವದ ನಿರ್ಣಯ

ಕೊಡಗು ಜಿಲ್ಲೆಗೆ ಆಗಸ್ಟ್‌ 7-8 ರಂದು ಯಡಿಯೂರಪ್ಪ ಅವರು ಭೇಟಿ ನೀಡುತ್ತಿದ್ದು, ಪುನರ್‌ವಸತಿ ಕಾರ್ಯ ಪರಿಶೀಲನೆ ನಡೆಸಲಿದ್ದಾರೆ. ಅಲ್ಲದೆ ಪ್ರವಾಹದಿಂದ ಹಾನಿಗೆ ಒಳಗಾದ ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ.

Yeddyurappa grant 500 crore extra for flood affected Kodagu

ಕೊಡಗು ಪ್ರವಾಹದಿಂದ ಹಾನಿಗೆ ಒಳಗಾಗಿದ್ದ 40 ಹಳ್ಳಿಗಳ ಸಹಾಯಕ್ಕೆ ಹೆಚ್ಚುವರಿ 500 ಕೋಟಿ ನೀಡಬೇಕೆಂದು ಬೋಪಯ್ಯ ಅವರು ಮನವಿ ಸಲ್ಲಿಸಿದ್ದರು, ಮನವಿಯ ಮೇರೆಗೆ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡಲಾಗಿದೆ.

ಆಗಸ್ಟ್ 2 ರಂದು ಯಡಿಯೂರಪ್ಪ ಅವರು ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಸಿಇಓಗಳ ಸಭೆ ಕರೆಯಲಾಗಿದ್ದು, ಬರ ನಿರ್ವಹಣೆ ಮತ್ತು ಮೋಡ ಬಿತ್ತನೆ ಕಾರ್ಯದ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಸಾಲಮನ್ನಾ: ಮೀನುಗಾರರಿಗೆ ಬಂಪರ್ ಖುಷಿ ನೀಡಿದ ಯಡಿಯೂರಪ್ಪ ಸಾಲಮನ್ನಾ: ಮೀನುಗಾರರಿಗೆ ಬಂಪರ್ ಖುಷಿ ನೀಡಿದ ಯಡಿಯೂರಪ್ಪ

ಆಗಸ್ಟ್‌ 5 ಮತ್ತು 6 ರಂದು ಕೇಂದ್ರ ಹಣಕಾಸು ಮಂತ್ರಿಗಳನ್ನು ಭೇಟಿಯಾಗಿ ಬರ ನಿರ್ವಹಣೆಗೆ ಅನುದಾನ ಬಿಡುಗಡೆಗೆ ಮನವಿ ಮಾಡಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

English summary
Yeddyurappa gives grant 500 crore extra money to flood affected Kodagu. He visiting Kodagu on August 7th and 8.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X