ಕೊಡಗಿನವರಿಗೆ ಆತಂಕಕಾರಿಯಾದ ಟಿಪ್ಪು!

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ನೆಂಬರ್. 10 : ಟಿಪ್ಪು ಸುಲ್ತಾನ್ ಮತಾಂಧ, ಹಿಂದೂ ದೇವಾಲಯ, ಚರ್ಚ್‍ ಗಳನ್ನು ಧ್ವಂಸ ಮಾಡಿದವನು, ಕೊಡವರನ್ನು ಹತ್ಯೆಗೈದವನು ಹೀಗೆ ಮೊದಲಾದ ಆರೋಪಗಳನ್ನು ಮಾಡುತ್ತಾ ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಆತ ಅವತ್ತು ಅದೇನಾಗಿದ್ದನೋ ಗೊತ್ತಿಲ್ಲ. ಆದರೆ ಈಗ ಕೊಡಗಿನ ಸಾಮಾನ್ಯ ಜನಕ್ಕೆ ಆತಂಕಕಾರಿಯಾಗಿರುವುದಂತೂ ಸತ್ಯ.

ಸಧ್ಯ ಕೊಡಗಿನಲ್ಲಿ ಅದರಲ್ಲೂ ಮಡಿಕೇರಿಯಲ್ಲಿ ಭಯದ ವಾತಾವರಣವಿದೆ. ಏನಾಗುತ್ತದೆಯೋ ಎಂಬ ಆತಂಕ ಅವರನ್ನು ಕಾಡುತ್ತಿದೆ. ಇದಕ್ಕೆ ಕಾರಣ ಕಳೆದ ವರ್ಷ ಇದೇ ನ.10 ರಂದು ನಡೆದ ದುರ್ಘಟನೆ.

ಸರ್ಕಾರ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಮೂರು ಜೀವಗಳು ಬಲಿಯಾಗಿ ಹಲವರು ಗಾಯಗೊಂಡಿದ್ದರು. ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿತ್ತಲ್ಲದೆ, ಅಂಗಡಿ, ಮುಂಗಟ್ಟುಗಳಿಗೆ ಹಾನಿಯಾಗಿತ್ತು. ಶಾಂತಿಯ ನಾಡು ಅರ್ಥಾತ್ ರಣರಂಗವಾಗಿ ಮಾರ್ಪಟ್ಟಿತ್ತು.

Tippu is disquieting for kodagu peoples

ಕೇರಳ ಸೇರಿದಂತೆ ಹೊರ ಊರುಗಳಿಂದ ಕಿಡಿಗೇಡಿಗಳ ದೊಡ್ಡದಂಡೇ ಗಲಾಟೆ ಮಾಡಲೆಂದೇ ಬಂದಿತ್ತು. ಅವತ್ತು ನಡೆದ ಘಟನೆ ತೀವ್ರತೆಯನ್ನು ಜನತೆ ಇಂದಿಗೂ ಮರೆತಿಲ್ಲ. ಹೀಗಾಗಿ ಇವತ್ತು ಮಡಿಕೇರಿಯ ಜನತೆಯಲ್ಲಿ ಆತಂಕ ಮನೆಮಾಡಿದೆ.

ಅದು ಎಂತಹದ್ದೇ ವಿರೋಧ ಬಂದರೂ ಎದುರಿಸಿ ಟಿಪ್ಪು ಜಯಂತಿಯನ್ನು ಆಚರಿಸಿ ಎಂಬುದಾಗಿ ಸರ್ಕಾರ ಸೂಚಿಸಿದ್ದು ಇದಕ್ಕಾಗಿ ಕೋಟ್ಯಂತರ ರೂಪಾಯಿ ಹಣವನ್ನು ವ್ಯಯ ಮಾಡಿದೆ. ಇಷ್ಟೊಂದು ಭದ್ರತೆಯಲ್ಲಿ ಆಚರಣೆ ನಡೆಸುವ ಅವಶ್ಯಕತೆ ಇತ್ತಾ ಎಂಬುದು ಸಾಮಾನ್ಯ ಮನುಷ್ಯನ ಪ್ರಶ್ನೆಯಾಗಿದೆ.

ಟಿಪ್ಪು ಜಯಂತಿಯನ್ನು ರಾಜಕೀಯ ಪಕ್ಷಗಳು ಓಟ್ ಬ್ಯಾಂಕ್ ಆಗಿ ಪರಿವರ್ತಿಸಿಕೊಳ್ಳಲು ಹವಣಿಸುತ್ತಿದ್ದು, ಅವುಗಳಿಗೆ ಲಾಭವಾದರೂ ಅನುಭವಿಸುವವನು ಶ್ರೀಸಾಮಾನ್ಯ ಎಂಬುವುದರಲ್ಲಿ ಎರಡು ಮಾತಿಲ್ಲ.

Tippu is disquieting for kodagu peoples

ಇಂದು ಆಚರಿಸಲ್ಪಡುವ ಟಿಪ್ಪು ಜಯಂತಿ ಆಚರಣೆಗೆ ಬಿಜೆಪಿ ಮತ್ತು ಸಂಘ ಪರಿವಾರದವರು ವಿರೋಧ ವ್ಯಕ್ತಪಡಿಸುವ ಹಾಗೂ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸುವ ಮುನ್ಸೂಚನೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಅದರಲ್ಲೂ ಮಡಿಕೇರಿಯ ಜನತೆ ಈಗಾಗಲೇ ಭಯಭೀತರಾಗಿದ್ದಾರೆ. ಪ್ರತಿಯೊಬ್ಬರ ಮುಖದಲ್ಲಿ ಭಯದ ಛಾಯೆ ಮೂಡಿದೆ.

ಬಹುಶಃ ನ.10 ರಂದು ನಡೆಯಲಿರುವ ಟಿಪ್ಪು ಜಯಂತಿ ಆಚರಣೆಗೆ ಯಾರೂ ಕೂಡ ಬಾರದಿರುವುದು ಈಗಾಗಲೇ ಸ್ಪಷ್ಟಗೊಂಡಿದೆ.ಕಳೆದ ವರ್ಷ ಟಿಪ್ಪು ಜಯಂತಿ ಆಚರಣೆಗೆ ಕೇರಳದಿಂದ ಜನರು ಬಂದಿದ್ದರೆನ್ನಲಾಗಿತ್ತು.

ಆದರೆ ಈ ವರ್ಷ ಹೊರ ಜಿಲ್ಲೆಗಳಿಂದ ಹಿಂದೂ ಸಂಘಟನೆಯ ಮತ್ತು ಬಿಜೆಪಿಯ ಕಾರ್ಯಕರ್ತರು ಆಗಮಿಸಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾದ ಹಿನ್ನೆಲೆಯಲ್ಲಿ ಈಗಾಗಲೇ ಪೊಲೀಸರು ಎಲ್ಲಾ ಹೋಟೆಲ್ ಹಾಗೂ ಹೋಂಸ್ಟೇಗಳನ್ನು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಕಳೆದ ವಾರದಿಂದಲೇ ಪೊಲೀಸರು ಜಿಲ್ಲೆಗೆ ಹೊರ ಜಿಲ್ಲೆಗಳಿಂದ ಹಾಗೂ ರಾಜ್ಯಗಳಿಂದ ಅಪರಿಚಿತರು ಆಗಮಿಸುವ ಮತ್ತು ಅವರ ವಾಹನಗಳ ತಪಾಸಣೆಯೊಂದಿಗೆ ವಾಹನಗಳ ಸಂಖ್ಯೆಗಳನ್ನು ದಾಖಲು ಮಾಡಿಕೊಂಡಿದ್ದಾರೆ.

ಹೀಗಾಗಿ ಟಿಪ್ಪು ಜಯಂತಿ ಆಚರಣೆ ವೇಳೆ ಯಾವುದೇ ಅನಾಹುತಗಳು ಹಾಗೂ ಗಲಭೆಗಳು ನಡೆಯದಂತೆ ಅಲ್ಲದೆ, ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸರು ಸಜ್ಜಾಗಿದ್ದು ಯಾವುದೇ ಆತಂಕ ಬೇಡ ಎಂದು ಜಿಲ್ಲಾಡಳಿತ ಹೇಳುತ್ತಿದ್ದರೂ ಆತಂಕ ಮಾತ್ರ ಇದ್ದೇ ಇದೆ.

ಇನ್ನು ಟಿಪ್ಪು ಜಯಂತಿ ಆಚರಣೆಯ ಆಮಂತ್ರಣ ಪತ್ರದಲ್ಲಿ ಬಿಜೆಪಿ ನಾಯಕರ ಹೆಸರು ನಮೂದಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಗೊಂಡಿದೆ. ಜಿಲ್ಲಾಡಳಿತದಿಂದ ಆಮಂತ್ರಣ ಪತ್ರವನ್ನು ಮುದ್ರಿಸಲಾಗಿದ್ದು,

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tippu is disquieting for kodagu peoples because.the last year some bad insident was happened in Madikeri, during Tippu Jayanti.
Please Wait while comments are loading...