• search
 • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಡಿಕೇರಿ; ಮೂವರಿಗೆ ಚಾಕು ಇರಿದು ವ್ಯಕ್ತಿ ಪರಾರಿ

By ಮೈಸೂರು ಪ್ರತಿನಿಧಿ
|

ಮಡಿಕೇರಿ, ಡಿಸೆಂಬರ್ 29: ವ್ಯಕ್ತಿಯೊಬ್ಬ ಮೂವರಿಗೆ ಚಾಕು ಇರಿದು ಪರಾರಿಯಾಗಿರುವ ಘಟನೆ ಸಿದ್ದಾಪುರದ ಸಮೀಪ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಸಿದ್ದಾಪುರ ಸಮೀಪದ ಕರಡಿಗೋಡುವಿನಲ್ಲಿ ರಾಮದಾಸ್ ಎಂಬ ವ್ಯಕ್ತಿ ಮೂವರಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾನೆ. ಸೋಮವಾರ ರಾತ್ರಿ 10 ಘಂಟೆ ಸಮಯದಲ್ಲಿ ಈ ಘಟನೆ ನಡೆದಿದೆ.

ಮೈಸೂರು; ಪ್ರೇಯಸಿಗೆ ಚಾಕು ಇರಿದು ಪೊಲೀಸರಿಗೆ ಶರಣಾದ ಯುವಕ

ಹವ್ಯಾಸಿಯಾಗಿ ಹಾವುಗಳ ರಕ್ಷಣೆ ಮಾಡುತಿದ್ದ ರಾಮದಾಸ್‌ ಸ್ಟೀಫನ್‌ (28), ವಿಲ್ಸನ್‌ (45) ಮತ್ತು ತೀರ್ಥ (18) ಎಂಬವವರಿಗೆ ಚೂರಿಯಿಂದ ಇರಿದು, ಗಾಯಗೊಳಿಸಿ ಪರಾರಿಯಾಗಿದ್ದಾನೆ.

ಅನೈತಿಕ ಸಂಬಂಧ ಶಂಕೆ; ಪತ್ನಿಗೆ ಚಾಕು ಇರಿದು ಕೊಲೆ ಮಾಡಿದ ಪತಿ

ಈ ಹಿಂದೆ ರಾಮದಾಸ್ ಸ್ಟೀಫನ್‌ನ ಸಂಬಂಧಿಕರಾದ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದ ಎಂಬ ಆರೋಪವಿದೆ. ಆಗ ಮೂವರು ಸಹ ರಾಮದಾಸ್ ನಡವಳಿಕೆ ಖಂಡಿಸಿದ್ದು, ಬುದ್ಧಿ ಹೇಳಿದ್ದರು.

ಚಾಕು ಇರಿತ; ಕೋಲಾರದ ಬಂಗಾರಪೇಟೆ ತಹಶೀಲ್ದಾರ್ ಸಾವು

ಇದರಿಂದ ಮೂವರ ವಿರುದ್ಧವೂ ಆತ ಕೋಪಗೊಂಡಿದ್ದ. ಆದ್ದರಿಂದ, ಸೋಮವಾರ ರಾತ್ರಿ ಚಾಕು ಇರಿದಿದ್ದಾನೆ ಎಂದು ಶಂಕಿಸಲಾಗಿದೆ. ಆರೋಪಿ ಪರಾರಿಯಾಗಿದ್ದು, ಹುಡುಕಾಟ ನಡೆಸಿದೆ.

ಚಾಕು ಇರಿತದಿಂದ ಗಾಯಗೊಂಡಿರುವ ತೀರ್ಥನನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ಮೈಸೂರಿನ ಕೆ. ಆರ್‌. ಆಸ್ಪತ್ರೆಗೆ ದಾಖಲಿಸಲಾಗಿದೆ.

   ಧರ್ಮೆಗೌಡ ಅವರ ಅಕಾಲಿಕ ಮರಣ ಮನಸ್ಸಿಗೆ ನೋವು ತಂದಿದೆ !! | Oneindia Kannada

   ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಪರಾರಿಯಾಗಿರುವ ಆರೋಪಿ ರಾಮದಾಸ್‌ಗಾಗಿ ಹುಡುಕಾಟ ನಡೆಯುತ್ತಿದೆ.

   English summary
   Man identified as Ramdas stabbed three persons in Karadigodu near Siddapura, Madikeri. Police searching for the man.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X