ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಡಿಕೇರಿಯ ರಾಜಾಸೀಟ್ ಬಳಿ ಅಕ್ರಮ ಅಂಗಡಿಗಳ ತೆರವು

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ನವೆಂಬರ್ 24: ನಗರದಲ್ಲಿರುವ ಪ್ರವಾಸಿ ತಾಣದಲ್ಲೊಂದಾದ ರಾಜಾಸೀಟ್ ಪ್ರವೇಶ ದ್ವಾರದ ಬಳಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ತಳ್ಳುಗಾಡಿ, ಇನ್ನಿತರ ವ್ಯಾಪಾರ ಮಳಿಗೆಗಳನ್ನು ನಗರಸಭೆ ವತಿಯಿಂದ ತೆರವುಗೊಳಿಸಲಾಯಿತು.

ರಾಜಾಸೀಟಿನ ಮುಂಭಾಗದ ಎಲ್ಲೆಂದರಲ್ಲಿ ಅನಧಿಕೃತ ಗಾಡಿ ಅಂಗಡಿ ಹಾಗೂ ಇತರ ಸಾಮಾಗ್ರಿಗಳ ಮಾರಾಟದ ಭರಾಟೆ ಹೆಚ್ಚಾಗಿತ್ತು. ಇದು ಪ್ರವಾಸಿಗರ ಕಿರಿಕಿರಿಗೆ ಕಾರಣವಾಗಿತ್ತು.

Rajaseat

ಹೊರಗಿನವರು ಇಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರಲ್ಲದೆ, ಯಾವುದೇ ತೆರಿಗೆಯನ್ನು ನಗರಸಭೆಗೆ ಪಾವತಿಸದೆ, ಪುಟಾಣಿ ರೈಲ್ ಟೆಂಡರ್ ಪಡೆದ ವ್ಯಕ್ತಿಗೆ ನೀಡುತ್ತಿದ್ದರು ಎನ್ನಲಾಗಿದೆ.

ಈ ನಡುವೆ ಮಡಿಕೇರಿಯ ರಾಜಾಸೀಟ್ ಉದ್ಯಾನವನ ಮುಂಭಾಗದ ಪುಟಾಣಿ ರೈಲ್ ಆವರಣದಲ್ಲಿ ನಗರಸಭೆಯ ಆಡಳಿತ ಮಂಡಳಿಯು ಕಳೆದ ಕೆಲವು ತಿಂಗಳ ಹಿಂದೆ ಸಾಮಾನ್ಯ ಸಭೆಯಲ್ಲಿ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ಸುಮಾರು 7 ಗಾಡಿ ಅಂಗಡಿಗಳಿಗೆ ಪರವಾನಗಿಯನ್ನು ನೀಡಲಾಗಿತ್ತು.

rajaseat

ಅನಧಿಕೃತ ಗಾಡಿ ಅಂಗಡಿಗಳ ಸಂಖ್ಯೆ ಹೆಚ್ಚಳಗೊಂಡಿದ್ದರಿಂದ ರಾಜಾಸೀಟ್ ನಲ್ಲಿ ಅಶುಚಿತ್ವ ತಾಂಡವವಾಡುತ್ತಿತ್ತು. ಇದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಅಕ್ರಮ ಅಂಗಡಿಗಳನ್ನು ತೆರವುಗೊಳಿಸಿದ್ದರಿಂದ ಸಾರ್ವಜನಿಕರಿಗೆ ನಿರಾಳವಾದಂತಾಗಿದೆ.

English summary
The tourist place of rajaseat near evacuate the illegal shops in Madikeri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X