ಮಖಾ ಮಳೆಯ ಆರ್ಭಟಕ್ಕೆ ಮೈಯದುಂಬಿದೆ ಅಬ್ಬಿ ಜಲಪಾತ

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಆಗಸ್ಟ್ 28: ಕೊಡಗಿನಲ್ಲಿ ಮಖಾ ಮಳೆ ಅಬ್ಬರಿಸುತ್ತಿರುವುದರಿಂದ ಸುಂದರ ಜಲಧಾರೆ ಅಬ್ಬಿ ಮೈದುಂಬಿ ಧುಮುಕುತ್ತಿದ್ದು ಈ ಸುಂದರ ದೃಶ್ಯವನ್ನು ವೀಕ್ಷಿಸಲು ಪ್ರವಾಸಿಗರ ದಂಡೇ ಆಗಮಿಸುತ್ತಿದೆ.

ಮಳೆಯ ಅಬ್ಬರ, ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು

ಸಾಮಾನ್ಯವಾಗಿ ಮಡಿಕೇರಿಯಲ್ಲಿ ಭಾರೀ ಮಳೆ ಸುರಿದಾಗ ಅಬ್ಬಿಜಲಪಾತ ತನ್ನ ರೌದ್ರತೆಯನ್ನು ಮೆರೆಯುತ್ತದೆ. ಈ ನಡುವೆ ಕೆಲವು ದಿನಗಳಿಂದ ಮಳೆ ಇಳಿಮುಖವಾಗಿದ್ದರಿಂದ ಜಲಧಾರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು.

Rain gives heavenly look to Abbey falls in Madikeri

ಮಖಾ ನಕ್ಷತ್ರದ ಕೊನೆ ಪಾದದ ಮಳೆ ಕಳೆದ ಕೆಲವು ದಿನಗಳಿಂದ ಅಬ್ಬರಿಸುತ್ತಿರುವುದರಿಂದ ಅಬ್ಬಿ ಜಲಪಾತವಲ್ಲದೆ ಇತರೆ ಜಲಧಾರೆಗಳು ಕೂಡ ಧುಮ್ಮಿಕ್ಕಿ ಹರಿಯುತ್ತಿವೆ.

ನದಿ, ಹೊಳೆ ಹಾಗೂ ತೋಡುಗಳು ಮೈದುಂಬಿ ಹರಿಯುತ್ತಿದ್ದು, ಕೆಲವೆಡೆ ಎತ್ತರದ ಸ್ಥಳದಿಂದ ತಗ್ಗು ಪ್ರದೇಶಗಳಿಗೆ ಧುಮುಕುವಾಗ ಕಂಡು ಬರುವ ದೃಶ್ಯ ಸುಂದರವಾಗಿರುತ್ತದೆ.

ಇದೀಗ ಮಳೆಯ ಕಾರಣ ನೀರು ಎಲ್ಲೆಂದರಲ್ಲಿ ಹರಿಯುತ್ತಿರುವುದರಿಂದ ಹಲವಷ್ಟು ಅಜ್ಞಾತ ಜಲಧಾರೆಗಳು ಹುಟ್ಟಿಕೊಂಡಿದ್ದು, ಗುಡ್ಡದ ಮೇಲೆ, ರಸ್ತೆ ಬದಿಗಳಲ್ಲಿ ಇವು ಕಂಡು ಬರುತ್ತಿವೆ. ಮಳೆ ನಿಂತರೆ ಈ ಜಲಧಾರೆಗಳು ಕೂಡ ಅದೃಶ್ಯವಾಗಿ ಬಿಡುತ್ತವೆ. ಒಟ್ಟಾರೆ ಮಳೆಯಿಂದಾಗಿ ಮತ್ತೆ ಜಲಧಾರೆಗಳು ಜೀವ ತುಂಬಿಕೊಂಡು ತಮ್ಮ ಸೌಂದರ್ಯವನ್ನು ಪ್ರದರ್ಶಿಸುತ್ತಿರುವುದು ಕೊಡಗು ಜಿಲ್ಲೆಯಾದ್ಯಂತ ಕಂಡುಬರುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After Madikeri district recieves rainfall from few days, famous Abbey water falls got heavenly look. Large number of tourists come to the district to feel such heavenly beauty of the nature.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ