ಅಯೋಧ್ಯೆ ರಾಮಮಂದಿರ ಕಟ್ಟುಕಥೆ; ಪ್ರಚೋದನಾಕಾರಿ ಭಿತ್ತಿ ಪತ್ರ ಕಂಡಿದ್ದೆಲ್ಲಿ?

ಮಡಿಕೇರಿ, ನವೆಂಬರ್ 20: ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ನವೆಂಬರ್‌ 10ರಂದು ಸುಪ್ರೀಂ ಕೋರ್ಟು ಐತಿಹಾಸಿಕ ತೀರ್ಪನ್ನು ನೀಡಿದ್ದು, ದೇಶಾದ್ಯಂತ ವಿವಿಧ ಧಾರ್ಮಿಕ ಮುಖಂಡರು ಈ ತೀರ್ಪನ್ನು ಸ್ವಾಗತಿಸಿದರು. ದೇಶದಲ್ಲಿ ಕೋಮು ಸೌಹಾರ್ದತೆ ಬೆಸೆಯುವ ತೀರ್ಪು ಎಂದು ಶ್ಲಾಘಿಸಿದರು.

ಆದರೆ ಸುಂಟಿಕೊಪ್ಪದಲ್ಲಿ ಸಂಘಟನೆಯೊಂದು ಸಮಾಜದ ಶಾಂತಿ ಕದಡುವ ಉದ್ದೇಶದಿಂದ ತೀರ್ಪನ್ನು ವಿರೋಧಿಸುವಂತೆ ಕರೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

Poster Opposing Ayodhya Verdict Circulated In Suntikoppa

ಕರಪತ್ರದ ಮೂಲಕ ಮನವಿ ಮಾಡಿದ್ದು, ಅದರಲ್ಲಿ ಬಾಬ್ರಿ ಮಸೀದಿ ತೀರ್ಪಿನಲ್ಲಿ ನ್ಯಾಯವನ್ನು ನಿರಾಕರಿಸಲಾಗಿದೆ, ವಿವಾದಿತ ಸ್ಥಳದಲ್ಲಿ ಯಾವುದೇ ಮಂದಿರ ಇರಲಿಲ್ಲ, ಅದು ಕಟ್ಟು ಕಥೆ ಎಂದು ಪ್ರತಿಪಾದಿಸಲಾಗಿದೆ. ಈ ಭಿತ್ತಿ ಪತ್ರಗಳನ್ನು ಸೋಮವಾರ ರಾತ್ರಿ ಸುಂಟಿಕೊಪ್ಪದ ಬಸ್‌ ತಂಗುದಾಣ ಮತ್ತು ಪಟ್ಟಣ ಪಂಚಾಯ್ತಿ ಕಚೇರಿಯ ಗೋಡೆಗಳ ಮೇಲೆ ಅಂಟಿಸಲಾಗಿದ್ದು, ವಿಷಯ ತಿಳಿದ ಕೂಡಲೇ ಸುಂಟಿಕೊಪ್ಪ ಗ್ರಾಮ ಪಂಚಾಯ್ತಿ ದೂರು ದಾಖಲಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+