ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಜಾಗ ಹಸ್ತಾಂತರ

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಜನವರಿ 5: ರಾಷ್ಟ್ರಮಟ್ಟದಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಕೊಡಗಿನ ಹೆಸರನ್ನು ಚಿರಸ್ಥಾಯಿ ಆಗಿರುವಂತೆ ಮಾಡಿದ ವೀರಸೇನಾನಿಗಳ ಪೈಕಿ ಒಬ್ಬರಾದ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಸ್ಮಾರಕ ಭವನ ನಿರ್ಮಾಣಕ್ಕೆ 2.40 ಎಕರೆ ಜಾಗದ ಪತ್ರವನ್ನು ಸಾರಿಗೆ ಇಲಾಖೆ ಆಯುಕ್ತ ಎಂ.ಕೆ.ಅಯ್ಯಪ್ಪ ಅವರು ಗುರುವಾರ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರಿಗೆ ಹಸ್ತಾಂತರಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಾರಿಗೆ ಇಲಾಖೆ ಆಯುಕ್ತರು ಪ್ರಾದೇಶಿಕ ಸಾರಿಗೆ ಕಚೇರಿಗೆ ಸೇರಿದ ಸನ್ನಿಸೈಡ್ ಸುತ್ತಮುತ್ತಲಿನ ಭೂಮಿಯ ಪತ್ರವನ್ನು ಜಿಲ್ಲಾಧಿಕಾರಿ ಅವರಿಗೆ ನೀಡಿದರು. ಇದರಿಂದ ಹಲವು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಸ್ಮಾರಕ ಕನಸು ನನಸಾಗುವುದು ಖಚಿತವಾದಂತಿದೆ.[ಕೊಂಬೊ ಮೀಸೆರ ಬಂಬೋ ಆದ ಲೋಕೇಶ್ ಅಚ್ಚಪ್ಪ]

Plot handed over to Thimmaiah memorial hall

ಜನರಲ್ ತಿಮ್ಮಯ್ಯ ಅವರು ಹುಟ್ಟಿ ಬೆಳೆದ ಮನೆ ಸನ್ನಿಸೈಡ್ ನ ಸ್ಮಾರಕ ನಿರ್ಮಾಣಕ್ಕಾಗಿ ಮಡಿಕೇರಿ ಪ್ರಾದೇಶಿಕ ಸಾರಿಗೆ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದ ಕಟ್ಟಡವನ್ನು 2006-07ರಲ್ಲಿ ಆಯವ್ಯಯದಲ್ಲಿ ಘೋಷಿಸಲಾಗಿತ್ತು, ಅದರಂತೆ ಜನರಲ್ ತಿಮ್ಮಯ್ಯ ಮನೆ ಸನ್ನಿಸೈಡ್ ನ ಆಕರ್ಷಣೀಯವಾಗಿ ಸ್ಮಾರಕ ಮಾಡುವ ನಿಟ್ಟಿನಲ್ಲಿ ಮನೆಯ ಮೂಲ ರೂಪಕ್ಕೆ ಧಕ್ಕೆಯಾಗದಂತೆ ತಾಂತ್ರಿಕತೆಯೊಂದಿಗೆ ಕಾಮಗಾರಿ ಕೈಗೊಂಡಿದ್ದಾರೆ.

ಜನರಲ್ ತಿಮ್ಮಯ್ಯ ಅವರು ಸೇವೆ ಸಲ್ಲಿಸಿದ ಸ್ಥಳದಿಂದ ಸಂಗ್ರಹಿಸಿದ ದಾಖಲೆಗಳು, ಸೇನಾ ಅಧಿಕಾರಿಗಳಿಂದ ನೀಡಿದ ಎರಡು ಬೆಟಲ್ ಟ್ಯಾಂಕ್ ಗಳು, ಫೈಟರ್ ವಿಮಾನ ಮತ್ತು ಇತರೆ ಸೇವೆ ಸಲ್ಲಿಸಿದ ಯುದ್ಧ ಟ್ಯಾಂಕರ್ ಗಳನ್ನು ಸನ್ನಿಸೈಡ್ ನ ಹೊರಾಂಗಣದಲ್ಲಿ ಇಡಲಾಗುವುದು.[ಪಿಸಿಯಿಂದ ಒತ್ತುವರಿ : ರಾಜ್ಯ ಸರಕಾರಕ್ಕೆ ಸಿಂಹ ಸವಾಲ್]

ಇದರ ಜತೆಗೆ ಜನರಲ್ ತಿಮ್ಮಯ್ಯ ಅವರ ಪುತ್ಥಳಿ, ಯುದ್ಧ ಸ್ಮಾರಕ ನಿರ್ಮಾಣ, ಉದ್ಯಾನವನ, ವಾಹನ ನಿಲುಗಡೆಗೆ ವ್ಯವಸ್ಥೆ ಮತ್ತಿತರ ಉಪಯೋಗಕ್ಕಾಗಿ ಸನ್ನಿಸೈಡ್ ನ ಸುತ್ತಮುತ್ತಲಿನ ಜಾಗ ಬಿಟ್ಟುಕೊಡಲು ಪ್ರಾದೇಶಿಕ ಸಾರಿಗೆ ಇಲಾಖೆಗೆ ಕೋರಲಾಗಿತ್ತು, ಅದರಂತೆ

ಸಾರಿಗೆ ಇಲಾಖೆ ಸಿಬ್ಬಂದಿ ವಾಸವಿದ್ದ 7 ವಸತಿ ಗೃಹಗಳು ಸೇರಿದಂತೆ ಒಟ್ಟು 2.40 ಎಕರೆ ಜಾಗವನ್ನು ಜನರಲ್ ತಿಮ್ಮಯ್ಯ ಸ್ಮಾರಕ ಭವನ ನಿರ್ಮಾಣಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬಿಟ್ಟುಕೊಡಲು ಸಾರಿಗೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿತ್ತು, ಸಾರಿಗೆ ಇಲಾಖೆಗೆ ಸೇರಿದ ವಸತಿ ಗೃಹಗಳಲ್ಲಿ ವಾಸವಿದ್ದ ಸಿಬ್ಬಂದಿಗೆ ಲೋಕೋಪಯೋಗಿ ಇಲಾಖೆಯಿಂದ ಪರ್ಯಾಯ ವ್ಯವಸ್ಥೆ ಮಾಡಿ, ಈ ಜಾಗವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಸ್ತಾಂತರಿಸಲಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Transport department handed over plot documents to Kodagu DC on Thursday, which is used General Thimmaiah memorial hall in Madikeri.
Please Wait while comments are loading...