ಕೊಡಗಿನ ವಿಲ್ಮಾ ಈಗ ಐಎಎಫ್ ನಲ್ಲಿ ವಿಂಗ್ ಕಮಾಂಡರ್

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಆಗಸ್ಟ್ 02:ಭಾರತೀಯ ರಕ್ಷಣಾ ಪಡೆಗೆ ತನ್ನದೇ ಕೊಡುಗೆ ನೀಡುತ್ತಾ ಬಂದಿರುವ ಕೊಡಗಿನವರು ಇಂದಿಗೂ ರಕ್ಷಣಾ ಪಡೆಯಲ್ಲಿ ಕಾರ್ಯ ನಿರ್ವಹಿಸುವಲ್ಲಿ ಹಿಂದೆ ಬಿದ್ದಿಲ್ಲ. ಕಾಫಿ, ಕಿತ್ತಲೆ ನಾಡು ಕೊಡಗು, ವೀರಯೋಧರನ್ನು ದೇಶದ ಸೇವೆಗೆ ನೀಡುತ್ತಾ ಬಂದಿದೆ.

ಕೊಡಗಿನ ಯೋಧರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ದೇಶಕ್ಕಾಗಿ ಹಲವರು ಪ್ರಾಣತೆತ್ತಿದ್ದಾರೆ. ಆದರೂ ಸೈನ್ಯಕ್ಕೆ ಸೇರುವಲ್ಲಿ ಯುವಕರು ಹಿಂದೆ ಬಿದ್ದಿಲ್ಲ. ಈ ನಡುವೆ ಯುವತಿಯರು ಕೂಡ ಸೇನೆಗೆ ಸೇರಲು ಮುಂದಾಗುತ್ತಿದ್ದು, ಈಗಾಗಲೇ ಹಲವು ಯುವತಿಯರು ಸೇನೆ ಹಲವು ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಾ ತಮ್ಮ ಸಾಧನೆಯನ್ನು ಮಾಡುತ್ತಿದ್ದು ಇವರ ಪೈಕಿ ವಿಲ್ಮಾ ಕೂಡ ಒಬ್ಬರಾಗಿದ್ದಾರೆ.

Pandanda Wilma Bheemaiah

ಮೂಲತಃ ಕೊಡಗಿನವರಾದ ಪ್ರಸ್ತುತ ಆಗ್ರಾದಲ್ಲಿ ನೆಲೆಸಿರುವ ಪಾಂಡಂಡ ವಿಲ್ಮಾ ಭೀಮಯ್ಯ ಭಾರತೀಯ ವಾಯು ಪಡೆಯ ವಿಂಗ್ ಕಮಾಂಡರ್ ಆಗಿ ನೇಮಕವಾಗಿದ್ದಾರೆ.

ಇವರು ಆಫ್ರಿಕಾ ದೇಶದ ಕಾಂಗೋ ಪ್ರದೇಶದಲ್ಲಿ ಭಾರತೀಯ ಶಾಂತಿಪಾಲನಾ ಪಡೆಯ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಹೆಮ್ಮೆಯಿದೆ. ಪಾಂಡಂಡ ಭೀಮಯ್ಯ ಅವರ ಪತ್ನಿಯಾಗಿರುವ ವಿಲ್ಮಾ, ಹುದಿಕೇರಿ ಗ್ರಾಮದ ಅಳಮೇಂಗಡ ಡಬ್ಲ್ಯೂ ಮುದ್ದಪ್ಪ ಹಾಗೂ ತಾರಾ ಮುದ್ದಪ್ಪ ಅವರ ಪುತ್ರಿಯಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Pandanda Wilma Bheemaiah, wife of Pandanda Bheemaiah.Daughter of Alamengada Muddappa and Tara from Hudikeri in Kodagu is now Wing commander in Indian Air Force (IAF)
Please Wait while comments are loading...