ಹೊಸ ವರ್ಷದ ಸಂಭ್ರಮ, ಕೊಡಗಿನ ತುಂಬ ಜನವೋ ಜನ

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಜನವರಿ 1: ನೂತನ ವರ್ಷವನ್ನು ಕೊಡಗಿನಲ್ಲಿ ಅ ಸಂಖ್ಯ ಪ್ರವಾಸಿಗರು ಸಡಗರ- ಸಂಭ್ರಮದಿಂದ ಆಚರಿಸಿದರು. ಇಲ್ಲಿನ ಹೋಟೆಲ್, ರೆಸಾರ್ಟ್, ಹೋಂ ಸ್ಟೇಗಳಲ್ಲಿ ಬೀಡುಬಿಟ್ಟಿದ್ದ ಪ್ರವಾಸಿಗರು ಕೊರೆಯುವ ಚಳಿಯಲ್ಲಿ ಕುಣಿದು, ಕುಪ್ಪಳಿಸಿ ಹಳೆಯ ವರ್ಷಕ್ಕೆ ವಿದಾಯ ಹೇಳಿ, ಹೊಸ ವರ್ಷವನ್ನು ಸ್ವಾಗತಿಸಿದರು.

ಪ್ರತಿ ವರ್ಷವೂ ಈ ಸಂದರ್ಭದಲ್ಲಿ ಪ್ರವಾಸಿಗರು ಕೊಡಗಿಗೆ ಬರುವುದು ಹೊಸತೇನಲ್ಲ. ಆದರೆ ಈ ಬಾರಿ ವಾರಾಂತ್ಯದಲ್ಲಿ ಹೊಸ ವರ್ಷ ಬಂದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದು ಕಂಡು ಬಂತು. ಶನಿವಾರ ಬೆಳಗ್ಗೆಯಿಂದಲೇ ಕೊಡಗಿನತ್ತ ಆಗಮಿಸಿದ ಪ್ರವಾಸಿಗರು, ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಖುಷಿಪಟ್ಟರು. ಸಂಜೆ ಮಡಿಕೇರಿಯ ರಾಜಾಸೀಟಿನಲ್ಲಿ ನೆರೆದವರು ಸೂರ್ಯಾಸ್ತಮಾನದ ಸುಂದರ ಕ್ಷಣಗಳಿಗಾಗಿ ಕಾದು ಕೂತರು.[ಹೊಸ ವರ್ಷಾಚರಣೆ ತಕರಾರಿಗೆ ಜತೆಯಲ್ಲಿದ್ದವನದೇ ಕೊಲೆ]

New year celebration in Kodagu

ಬೆಟ್ಟ-ಗುಡ್ಡಗಳ ನಡುವೆ ರಕ್ತದ ಚೆಂಡಿನಂತೆ ಕಂಗೊಳಿಸುತ್ತಾ ಅಸ್ತಂಗತವಾಗುತ್ತಿದ್ದ ರವಿಯನ್ನು ಕಂಡು ಕುಣಿದು ಕುಪ್ಪಳಿಸಿದರಲ್ಲದೆ, ಕೈಬೀಸುತ್ತಾ, ಶಿಳ್ಳೆ ಹಾಕುತ್ತಾ 2016ಕ್ಕೆ ವಿದಾಯ ಹೇಳಿದರು. ಪಟ್ಟಣ, ನಗರಗಳಲ್ಲಿ ನೆಲೆಸಿದ್ದ ಸಹಸ್ರಾರು ಮಂದಿ ಕಾಫಿ ತೋಟಗಳಲ್ಲಿರುವ ಹೋಂ ಸ್ಟೇಗಳಲ್ಲಿ ಬೀಡು ಬಿಟ್ಟು ಸುಂದರ ಪರಿಸರದಲ್ಲಿ ಹೊಸವರ್ಷವನ್ನು ಆಚರಿಸಿದರು.

New year celebration in Kodagu

ವಾಹನಗಳ ದಟ್ಟಣೆಯಿಂದ ಅಲ್ಲಲ್ಲಿ ಟ್ರಾಫಿಕ್ ಜಾಮ್ ಕಂಡು ಬಂದಿದ್ದು, ಪುಟ್ಟ ಊರಿನಲ್ಲಿ ಪ್ರವಾಸಿಗರದ್ದೇ ಕಾರುಬಾರು ಕಂಡು ಬರುತ್ತಿದೆ. ಸಂಜೆ ಹೊತ್ತಿಗೆಲ್ಲ ತಮ್ಮ ಊರಿನ ಹಾದಿಯನ್ನು ಹಿಡಿಯಲಿರುವುದರಿಂದ ಮತ್ತೆ ಕೊಡಗು ಮೌನಕ್ಕೆ ಜಾರುವ ಸಾಧ್ಯತೆಯಿದೆ. ಅಂತೂ ಕರ್ನಾಟಕದ ಕಾಶ್ಮೀರ, ಭಾರತದ ಸ್ವಿಟ್ಜರ್ ಲೆಂಡ್ ಎಂದೆಲ್ಲ ಅನ್ವರ್ಥನಾಮಗಳಿಂದ ಕರೆಯಿಸಿಕೊಳ್ಳುತ್ತಿರುವ ಕೊಡಗಿನಲ್ಲಿ ವರ್ಷಾಚರಣೆಯ ರಂಗು ಮೇಳೈಸಿದ್ದಂತೂ ನಿಜ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Grand new year celebration in Kodagu by tourists. January 1st on Sunday. So, tourists number are more. Home stays, hotels and resorts filled with tourists.
Please Wait while comments are loading...