ಮಡಿಕೇರಿ ನಾಮಕರಣ ಕಾರ್ಯಕ್ರಮದಲ್ಲಿ ಮದ್ಯ, ಗನ್, ಹೊಡೆದಾಟ

Posted By:
Subscribe to Oneindia Kannada

ಮಡಿಕೇರಿ, ಅಕ್ಟೋಬರ್ 30: ನಾಮಕರಣ ನಡೆಯುತ್ತಿದ್ದ ಸಭಾಂಗಣಕ್ಕೆ ನುಗ್ಗಿ ಮಡಿಕೇರಿ ನಗರಸಭೆ ಕೌನ್ಸಿಲರ್ ಹಾಗೂ ಅವರ ಬೆಂಬಲಿಗರು ಗನ್ ತೋರಿಸಿ ದಾಂದಲೆ ಮಾಡಿರುವ ಘಟನೆ ಮಡಿಕೇರಿಯಲ್ಲಿ ಭಾನುವಾರ ನಡೆದಿದೆ. ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ ನಾಮಕರಣ ಸಮಾರಂಭವೊಂದು ನಡೆಯುತ್ತಿತ್ತು.

ಮಡಿಕೇರಿ ದಸರಾ ದಿನ ವ್ಯಕ್ತಿಯನ್ನು ಕೊಲೆಗೈದಿದ್ದ ಹಂತಕರ ಬಂಧನ

ನಗರಸಭೆ ಕೌನ್ಸಿಲರ್ ವೀಣಾಕ್ಷಿ ಹಾಗೂ ಸಮಾರಂಭದಲ್ಲಿ ಮದ್ಯಪಾನ ಮಾಡುತ್ತಿದ್ದವರ ಮಧ್ಯೆ ಘರ್ಷಣೆ ಏರ್ಪಟ್ಟಿದ್ದು, ಈ ಸಂದರ್ಭ ಅಲ್ಲಿಗೆ ಬಂದ ವೀಣಾಕ್ಷಿ ಬೆಂಬಲಿಗನೊಬ್ಬ ಗನ್ ತೋರಿಸಿ ಬೆದರಿಸಿದ್ದಾನೆ. ಸಮಾರಂಭದಲ್ಲಿ ಕಟ್ಟಡದ ಮೊದಲ ಅಂತಸ್ತಿನಲ್ಲಿ ಕುಳಿತು ಮದ್ಯಪಾನ ಮಾಡುತ್ತಿದ್ದ ಯುವಕರ ಗುಂಪೊಂದು ಅಲ್ಲಿಂದ ಗ್ಲಾಸ್ ಹಾಗೂ ಬಾಟಲಿಗಳನ್ನು ಕೆಳಕ್ಕೆ ಬೀಳಿಸಿದ್ದಾರೆ.

Naming ceremony witnessed clash, gun and liquor

ಅದೇ ಕಟ್ಟಡದಲ್ಲಿ ಅಂಗಡಿ ನಡೆಸುತ್ತಿರುವ ನಗರಸಭೆ ಸದಸ್ಯೆ ವೀಣಾಕ್ಷಿ ಇದನ್ನು ಪ್ರಶ್ನಿಸಿದಾಗ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಸಂದರ್ಭದಲ್ಲಿ ವೀಣಾಕ್ಷಿ ಹಾಗೂ ಅದೇ ಬಡಾವಣೆಯ ಯುವಕರು ಹಾಲ್ ಗೆ ನುಗ್ಗಿದ್ದು, ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಆಗ ಏಕಾಏಕಿ ಬಂದ ವೀಣಾಕ್ಷಿ ಬೆಂಬಲಿಗ ಎಂದು ಹೇಳಲಾಗುತ್ತಿರುವ ಯುವಕನೊಬ್ಬ ತನ್ನ ಕಾರಿನಿಂದದ ಬಂದೂಕು ತಂದು ಅಲ್ಲಿದ್ದವರನ್ನು ಬೆದರಿಸಿದ್ದಾನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Clash between two groups in a naming ceremony in Madikeri on Sunday. Somebody has thrown liquor bottle on Councillor Veenakshi shop. After that, clashes erupted.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ