ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಡಿಕೇರಿಯಲ್ಲಿ ದುರ್ಬಲವಾಗುತ್ತಿದೆ ಮಳೆಗಾಲ

By ಬಿ.ಎಂ.ಲವಕುಮಾರ್
|
Google Oneindia Kannada News

ಮಡಿಕೇರಿ, ಜುಲೈ 6: ಆರಂಭದಲ್ಲಿ ಅಬ್ಬರಿಸಿದ ಆರಿದ್ರಾ ಮಳೆ ವಾರಗಳ ಹಿಂದೆ ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತವಾಗುವಂತೆ ಮಾಡಿತ್ತು. ಆ ನಂತರ ಹೆಚ್ಚಿನ ಮಳೆ ಸುರಿದಿರಲಿಲ್ಲ. ಇದೀಗ ಜು.5ರಿಂದ ಪುನರ್ವಸು ಮಳೆ ಆರಂಭವಾಗಿದ್ದು, ಈ ನಕ್ಷತ್ರದ ಮಳೆ ಒಂದಷ್ಟು ಸುರಿಯಬಹುದು ಎಂಬ ಆಶಾಭಾವನೆ ಇಲ್ಲಿನವರದ್ದಾಗಿದೆ.

ಹಿಂದಿನ ಕಾಲದಲ್ಲಿ ಮೃಗಶಿರ, ಆರಿದ್ರಾ, ಪುನರ್ವಸು ನಕ್ಷತ್ರದಲ್ಲಿ ಮಳೆ ಹೆಚ್ಚಾಗಿ ಸುರಿಯುತ್ತಿತ್ತು. ಆದರೆ ಇತ್ತೀಚೆಗೆ ಮೊದಲ ಲೆಕ್ಕಾಚಾರಗಳು ಯಾವುದೂ ನಡೆಯುತ್ತಿಲ್ಲ. ಹೀಗಾಗಿ ಕೃಷಿಕರು ಚಿಂತಾಕ್ರಾಂತರಾಗಿದ್ದಾರೆ. ಕಳೆದೆರಡು ವರ್ಷಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ನಿರೀಕ್ಷಿತ ಮಳೆಯಾಗಿಲ್ಲ. ಆದರೂ ಜುಲೈ ತಿಂಗಳಲ್ಲಿ ಮಳೆಯಾಗಬಹುದು ಎಂಬ ನಿರೀಕ್ಷೆಯನ್ನು ಇಲ್ಲಿನ ಕೃಷಿಕರಿಟ್ಟುಕೊಂಡಿದ್ದಾರೆ.

Monsoon decreasing in Madikeri

ಪ್ರಿಯತಮೆಯ ಗಂಡನ ರುಂಡ, ಮುಂಡ, ಕೈಕಾಲು ಕತ್ತರಿಸಿದ ಚಾಲಕಪ್ರಿಯತಮೆಯ ಗಂಡನ ರುಂಡ, ಮುಂಡ, ಕೈಕಾಲು ಕತ್ತರಿಸಿದ ಚಾಲಕ

ಜಿಲ್ಲೆಯಲ್ಲಿ ಜನವರಿಯಿಂದ ಜೂನ್ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 731.53 ಮಿ.ಮೀ ಆಗಿದ್ದು ಈ ಬಾರಿ ಜನವರಿಯಿಂದ ಜೂನ್ ಅಂತ್ಯದವರೆಗೆ 695.57 ಮಿ.ಮೀ. ಮಳೆಯಾಗಿದೆ. ಹೀಗಾಗಿ ಶೇ.95.08ರಷ್ಟು ಮಾತ್ರ ಮಳೆಯಾಗಿದೆ ಎನ್ನಬಹುದಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸ್ವಲ್ಪ ಮಟ್ಟಿಗೆ ಪರ್ವಾಗಿಲ್ಲ ಎನ್ನಬಹುದು. 2015ರಲ್ಲಿ ಉತ್ತಮ ಮಳೆಯಾಗಿತ್ತು. ಇದೇ ಅವಧಿಯಲ್ಲಿ ಆ ವರ್ಷ 1,142.61 ಮಿ.ಮೀ. ಮಳೆಯಾಗಿತ್ತು.

ಕೊಡಗಿನಲ್ಲಿ ಕೃಷಿಕರಿಗೆ ಸಂಕಷ್ಟ ತಂದೊಡ್ಡುತ್ತಿರುವ ಕಾಡಾನೆಗಳುಕೊಡಗಿನಲ್ಲಿ ಕೃಷಿಕರಿಗೆ ಸಂಕಷ್ಟ ತಂದೊಡ್ಡುತ್ತಿರುವ ಕಾಡಾನೆಗಳು

ಕೊಡಗು ಜಿಲ್ಲೆಯಲ್ಲಿರುವ ಮೂರು ತಾಲೂಕುಗಳ ಪೈಕಿ ಮಡಿಕೇರಿ ತಾಲೂಕಿನಲ್ಲಿ ಹೆಚ್ಚಿನ ಮಳೆಯಾಗುವುದನ್ನು ಕಾಣಬಹುದು. ವೀರಾಜಪೇಟೆಯ ಕೆಲವು ಪ್ರದೇಶಗಳಲ್ಲಿ ಮಳೆ ಕೊರತೆ ಕಾಣಿಸುತ್ತಿದೆ. ಇನ್ನು ಸೋಮವಾರಪೇಟೆಯಲ್ಲಿಯೂ ಮಳೆಹೆಚ್ಚಾಗಿ ಬೀಳುತ್ತಿಲ್ಲ. ಆದರೆ ಶಾಂತಳ್ಳಿ, ಕುಂದಳ್ಳಿ, ಪುಷ್ಪಗಿರಿ ತಪ್ಪಲಿನಲ್ಲಿ ಅತಿ ಹೆಚ್ಚು ಮಳೆಯಾಗುತ್ತದೆ.

Monsoon decreasing in Madikeri

ಈ ವ್ಯಾಪ್ತಿಯ ಮಳೆಯ ನೀರು ಕುಮಾರಧಾರಾ ನದಿ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗಾಗಿ ಸಮುದ್ರ ಸೇರುತ್ತಿದೆ. ವೀರಾಜಪೇಟೆಯ ಬರಪೊಳೆ ವ್ಯಾಪ್ತಿಯಲ್ಲಿ ಮಳೆಯಾದರೆ ಅದು ಕೇರಳ ಪಾಲಾಗುತ್ತದೆ. ಹೀಗಾಗಿ ಕೊಡಗಿನಲ್ಲಿ ಮಳೆಯಾದರೂ ಎಲ್ಲ ನೀರು ಕಾವೇರಿಗೆ ಹರಿದು ಬರುತ್ತಿಲ್ಲ. ದಕ್ಷಿಣ ಕೊಡಗಿನಲ್ಲಿ ಹರಿಯುವ ಲಕ್ಷ್ಮಣ ತೀರ್ಥ ನದಿ ಈ ಬಾರಿ ಬೇಸಿಗೆಯಲ್ಲಿ ಬತ್ತಿ ಹೋಗಿತ್ತು. ಇದೀಗ ಸ್ವಲ್ಪ ಮಟ್ಟಿಗೆ ನೀರು ಕಾಣಿಸಿಕೊಂಡಿದೆ.

ಕೊಡಗಿನಲ್ಲಿ ಬಿರುಸಾದ ಮುಂಗಾರು: ಭಾಗಮಂಡಲದಲ್ಲಿ ಉಕ್ಕಿದ ಕಾವೇರಿಕೊಡಗಿನಲ್ಲಿ ಬಿರುಸಾದ ಮುಂಗಾರು: ಭಾಗಮಂಡಲದಲ್ಲಿ ಉಕ್ಕಿದ ಕಾವೇರಿ

ಮಡಿಕೇರಿ ತಾಲೂಕಿನಲ್ಲಿ ಮಳೆಯಾದರೆ ಎಲ್ಲ ನೀರು ಕಾವೇರಿ ನದಿ ಸೇರಿ ಆ ಮೂಲಕ ಕೆಆರ್ ಎಸ್ ಜಲಾಶಯವನ್ನು ತಲುಪಲು ಸಾಧ್ಯವಾಗಲಿದೆ. ಇನ್ನು ಮಳೆ ಜನವರಿಯಿಂದ ಇಲ್ಲಿವರೆಗೆ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಸುರಿದ ಮಳೆಯನ್ನು ಗಮನಿಸಿದರೆ ಅತಿ ಹೆಚ್ಚು 842.40 ಮಡಿಕೇರಿಯಲ್ಲಿ ಸುರಿದಿದ್ದರೆ, ವೀರಾಜಪೇಟೆಯಲ್ಲಿ 818.30ಮಿ.ಮೀ.ಗಳಾಗಿದ್ದು, ಸೋಮವಾರಪೇಟೆ ತಾಲೂಕಿನಲ್ಲಿ 533.90 ಮಿ.ಮೀ. ಮಳೆಯಾಗಿದೆ.

ಒಟ್ಟಾರೆ ಈ ಬಾರಿ (ಜನವರಿಯಿಂದ ಜೂನ್ ಅಂತ್ಯದ ವರೆಗೆ) ವಾಡಿಕೆಗಿಂತ ಕಡಿಮೆ ಮಳೆಯಾಗಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕಾಗಿದೆ. ಆದರೆ ಮುಂದಿನ ದಿನಗಳು ಅತಿ ಹೆಚ್ಚು ಮಳೆ ಸುರಿಯುವ ನಡು ಮಳೆಗಾಲವಾಗಿರುವುದರಿಂದ ಉತ್ತಮ ಮಳೆಯಾಗಿ ಕಾವೇರಿ ನದಿ ತುಂಬಿ ಹರಿಯಬಹುದೇನೋ ಎಂಬ ನಿರೀಕ್ಷೆಯಲ್ಲೇ ಎಲ್ಲರಲ್ಲೂ ಕಡುಬರುತ್ತಿದೆ.

English summary
Monsoon in beautiful Madikeri always creates a heavenly look to the district. But this year decreasing in rain creating tension among the people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X