ಕೊಡಗಿನ ಮದುವೆಗಳಲ್ಲಿ ಮದ್ಯ ಬಳಕೆಗೆ ಸನ್ನದು ಕಡ್ಡಾಯ: ಏನಿದು ಹೊಸ ಆದೇಶ?
ಮಡಿಕೇರಿ, ಫೆಬ್ರವರಿ 15: ಕೊಡಗಿನ ಮದುವೆ ಸೇರಿದಂತೆ ಸಭೆ ಸಮಾರಂಭಗಳಲ್ಲಿ ಮದ್ಯ ಸೇವನೆ ಮಾಡುವುದು ಸಂಪ್ರದಾಯವಾಗಿದ್ದು, ಇದು ಕಾರ್ಯಕ್ರಮದ ಒಂದು ಭಾಗವಾಗಿ ಹೋಗಿದೆ. ಯಾವುದೇ ಕಾರ್ಯಕ್ರಮಗಳು ಮದ್ಯದ ಪಾರ್ಟಿಯಿಲ್ಲದೆ ಮುಗಿಯುವುದಿಲ್ಲ. ಆದರೀಗ ಇಂತಹ ಕಾರ್ಯಕ್ರಮಗಳಲ್ಲಿ ಮದ್ಯ ಸರಬರಾಜಿಗೆ ಒಂದು ದಿನದ ಸನ್ನದು ಪಡೆಯುವುದನ್ನು ಅಬಕಾರಿ ಇಲಾಖೆ ಕಡ್ಡಾಯಗೊಳಿಸಿದೆ. ಹೀಗಾಗಿ ಈ ವಿಚಾರದಲ್ಲಿ ಜಿಲ್ಲೆಯ ಜನರು ಯಾವ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಾರೆ ಎನ್ನುವುದು ಕುತೂಹಲಕಾರಿಯಾಗಿದೆ.
ಬೇರೆಡೆಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ನಡೆಯುವ ಮದುವೆ ಇನ್ನಿತರ ಕಾರ್ಯಕ್ರಮಗಳಲ್ಲಿ ಸಂಸ್ಕೃತಿ, ಊಟೋಪಚಾರಗಳಲ್ಲಿ ಭಿನ್ನತೆ ಕಾಣುತ್ತದೆ. ಹಾಗೆಯೇ ಊಟೋಪಚಾರಕ್ಕೂ ಮೊದಲು ಮದ್ಯಸೇವನೆಯೂ ಮಾಮೂಲಿಯಾಗಿದೆ. ಆದರೆ ಈಗ ಕಾರ್ಯಕ್ರಮಗಳಲ್ಲಿ ಮದ್ಯ ಸರಬರಾಜು ಮಾಡುವುದಾದರೆ ಅಬಕಾರಿ ಇಲಾಖೆಯಿಂದ ಒಂದು ದಿನದ ಸನ್ನದು ಪಡೆಯುವಂತೆ ಅಬಕಾರಿ ಇಲಾಖೆ ಉಪ ಆಯುಕ್ತರು ಸೂಚಿಸಿದ್ದಾರೆ. ಇದಕ್ಕೆ ಕಾರಣಗಳನ್ನು ಕೂಡ ನೀಡಿದ್ದಾರೆ.

ಅದು ಏನೆಂದರೆ ಕೊಡಗು ಜಿಲ್ಲೆಯಲ್ಲಿ ನಡೆಯುವ ಮದುವೆ, ಸಭೆ, ಸಮಾರಂಭಗಳಲ್ಲಿ ರಕ್ಷಣಾ ಮದ್ಯ ಹೊರ ರಾಜ್ಯದ ಮದ್ಯ, ನಕಲಿ ಮದ್ಯ, ಅಕ್ರಮ ಮದ್ಯ ಸರಬರಾಜಾಗುತ್ತಿರುವ ಬಗ್ಗೆ ದೂರು ಬಂದಿದ್ದು, ಇದು ರಾಜ್ಯ ಅಬಕಾರಿ ಕಾಯ್ದೆಯನ್ವಯ ಶಿಕ್ಷಾರ್ಹ ಅಪರಾಧವಾಗಿದೆ. ಹೀಗಾಗಿ ಸನ್ನದ್ದು ಪಡೆಯಲು ಸೂಚಿಸಿರುವುವಾಗಿ ಹೇಳಿದ್ದಾರೆ. ಇಲ್ಲಿ ಮುಖ್ಯವಾಗಿ ಹೇಳಬೇಕೆಂದರೆ ಕೊಡಗಿನಲ್ಲಿ ಹೆಚ್ಚಿನವರು ಸೈನ್ಯದಲ್ಲಿ ಕೆಲಸ ಮಾಡುವವರು, ಸೈನ್ಯದಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದ ಮಾಜಿ ಸೈನಿಕರಿದ್ದು ಸಮಾರಂಭಗಳು ನಡೆದಾಗ ಕೆಲವರು ತಮ್ಮ ಕೋಟಾದ ಮದ್ಯವನ್ನು ನೀಡುತ್ತಾರೆ. ಅದನ್ನೇ ಕಾರ್ಯಕ್ರಮಗಳಲ್ಲಿ ಬಳಸಿಕೊಳ್ಳುವುದು ಇದೆ.
ಇನ್ನು ಹೊರಗಿನಿಂದ ಅಕ್ರಮ ಮದ್ಯಗಳು ಬರುತ್ತಿವೆ ಎನ್ನುವುದನ್ನು ಕೂಡ ತಳ್ಳಿಹಾಕಲಾಗದು, ಹೊರಗಿನಿಂದ ಮದ್ಯವನ್ನು ಸರಬರಾಜು ಮಾಡುವವರು ಇಲ್ಲದಿಲ್ಲ. ಹೀಗಾಗಿ ಇದೆಲ್ಲದಕ್ಕೂ ಕಡಿವಾಣ ಹಾಕುವ ಮತ್ತು ರಾಜ್ಯದಲ್ಲಿ ಮಾರಾಟವಾಗುವ ಅಧಿಕೃತ ಮದ್ಯವನ್ನೇ ಬಳಸುವ ಸಲುವಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.ಇನ್ನು ಮುಂದೆ ಯಾವುದೇ ಕಾರ್ಯಕ್ರಮಗಳಿರಲಿ ಅಲ್ಲಿ ಸಾರ್ವಜನಿಕವಾಗಿ ಮದ್ಯ ಸರಬರಾಜು ಮಾಡುವವರು ಅಬಕಾರಿ ಕಾಯ್ದೆ ಅಡಿಯಲ್ಲಿ ಒಂದು ದಿನಕ್ಕೆ ಸಂಬಂಧಿಸಿದಂತೆ ಸಿಎಲ್-5 ಸನ್ನದು ಪಡೆಯಬೇಕಾಗುತ್ತದೆ.

ಇನ್ನು ಸಿಎಲ್-5 ಸನ್ನದು ಅರ್ಥಾತ್ ಸಾಂದರ್ಭಿಕ ಸನ್ನದು ಪಡೆಯುವುದು ಹೇಗೆ ಎಂಬುದನ್ನು ನೋಡಿದ್ದೇ ಆದರೆ ಅಬಕಾರಿ ವೆಬ್ ಸೈಟ್ ನಲ್ಲಿ ಖಾಸಗಿ ಸಮಾರಂಭಗಳಲ್ಲಿ ನಿಗದಿತ ಶುಲ್ಕ ಪಾವತಿಸಿ ಸ್ಥಳದ ಮಾಲೀಕರು, ಸಮಾರಂಭದ ಆಯೋಜಕರು ನಿಗದಿತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಆ ನಂತರ ಅರ್ಜಿ ಸಲ್ಲಿಸಿದ ಸ್ಥಳಕ್ಕೆ ನಿಯಮಾನುಸಾರ ಮದ್ಯ ಸರಬರಾಜು, ಬಳಕೆ ಮಾಡಲು ಸಿಎಲ್-5 ಸನ್ನದು ನೀಡಲಾಗುತ್ತದೆ. ಇದನ್ನು ಅಬಕಾರಿ ಇಲಾಖೆ ಆದೇಶದನ್ವಯ ಪಾಲನೆ ಮಾಡಬೇಕಾಗಿದೆ.
ಅಬಕಾರಿ ಕಾನೂನಿನಂತೆ ಕ್ರಮದ ಎಚ್ಚರಿಕೆ
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ತಮಗೆ ಸೇರಿದ ಕಲ್ಯಾಣ ಮಂಟಪಗಳು, ಹೋಂ ಸ್ಟೇ, ರೆಸಾರ್ಟ್ಸ್ ಹಾಗೂ ಇನ್ನಿತರೇ ಸಾರ್ವಜನಿಕ, ಖಾಸಗಿ ಸ್ಥಳಗಳಲ್ಲಿ ನಡೆಯುವ ಮದುವೆ ಹಾಗೂ ಇನ್ನಿತರೆ ಸಮಾರಂಭಗಳಿಗೆ ಅಬಕಾರಿ ಇಲಾಖೆಯಿಂದ ಸಿಎಲ್-5 ಸನ್ನದು ಪಡೆಯಬೇಕಾಗುತ್ತದೆ. ಸಾಂದರ್ಭಿಕ ಸನ್ನದು (ಸಿಎಲ್-5) ಪಡೆದಲ್ಲಿ ಮಾತ್ರ ಅನುಮತಿ ಪಡೆದ ಸ್ಥಳದಲ್ಲಿ ಕರ್ನಾಟಕ ರಾಜ್ಯದಲ್ಲಿ ಮಾರಾಟವಾಗುವ ಅಧಿಕೃತ ಮದ್ಯವನ್ನು ಬಳಸಬಹುದಾಗಿದೆ.

ಒಂದು ವೇಳೆ ಸ್ಥಳಗಳಲ್ಲಿ ಅಬಕಾರಿ ಇಲಾಖೆಯಿಂದ ಯಾವುದೇ ಸನ್ನದು ಪಡೆಯದೇ ಮದ್ಯ ಬಳಕೆ, ಮಾರಾಟ ಮಾಡಿರುವುದು ಕಂಡು ಬಂದಲ್ಲಿ ಈ ಸ್ಥಳದ ಮಾಲೀಕರು ಮತ್ತು ಕಾರ್ಯಕ್ರಮದ ಆಯೋಜಕರ ವಿರುದ್ಧ ಅಬಕಾರಿ ಕಾನೂನಿನಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಆಯುಕ್ತರು ಎಚ್ಚರಿಸಿದ್ದಾರೆ.
-
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ












Click it and Unblock the Notifications