ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಡಿಕೇರಿ: ಡಿ.21 ರಂದು ವಿರಾಜಪೇಟೆಯಲ್ಲಿ ಸಾಹಿತ್ಯ ಸಂಭ್ರಮ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಡಿಸೆಂಬರ್ 7: ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ತು ಹಾಗೂ ವಿರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಸಾಹಿತ್ಯ ಸಂಭ್ರಮ ಹಾಗೂ ಲೇಖಕರಾದ ಐ.ಮಾ.ಮುತ್ತಣ್ಣ, ಬಿ.ಡಿ.ಗಣಪತಿ ಅವರ ಜನ್ಮ ಶತಮಾನೋತ್ಸವದ ನೆನಪು ಕಾರ್ಯಕ್ರಮವು ಡಿಸೆಂಬರ್ 21 ರಂದು ವಿರಾಜಪೇಟೆಯಲ್ಲಿ ನಡೆಯಲಿದೆ.

ಕಾಲೇಜು ಮತ್ತು ಸಾರ್ವಜನಿಕ ವಿಭಾಗದಲ್ಲಿ ಭಾಷಣ ಸ್ಪರ್ಧೆ, ಜಿಲ್ಲೆಯ ಕವಿಗಳಿಗೆ ಸ್ವರಚಿತ ಗೀತೆಗಳ ಗಾಯನಗೋಷ್ಠಿ ಹಾಗೂ ಹಿರಿಯ ಕವಿಗಳಾದ ದಿವಂಗತ ಐ.ಮಾ.ಮುತ್ತಣ್ಣ ಹಾಗೂ ಬಿ.ಡಿ.ಗಣಪತಿ ಅವರ ಜನ್ಮ ಶತಮಾನೋತ್ಸವದ ನೆನಪು ಕಾರ್ಯಕ್ರಮ ಆಯೋಜಿಸಲಾಗಿದೆ.

ಕೊಡವರ ನಾಡಲ್ಲಿ ಹುತ್ತರಿ ಹಬ್ಬ: ಧಾನ್ಯಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳುವ ಉತ್ಸವಕೊಡವರ ನಾಡಲ್ಲಿ ಹುತ್ತರಿ ಹಬ್ಬ: ಧಾನ್ಯಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳುವ ಉತ್ಸವ

ಕಾಲೇಜು ಮತ್ತು ಸಾರ್ವಜನಿಕ ವಿಭಾಗದಲ್ಲಿ ನಡೆಯುವ ಭಾಷಣ ಸ್ಪರ್ಧೆ ಜಿಲ್ಲಾ ಮಟ್ಟದಾಗಿದ್ದು, ಕನ್ನಡ ಸಾಹಿತ್ಯದ ಬೆಳವಣಿಗೆಗೆ ಕವಿ, ಕಲಾವಿದರ ಕೊಡುಗೆ ಎಂಬ ವಿಷಯದಲ್ಲಿ ಸ್ಪರ್ಧೆ ನಡೆಯಲಿದೆ.

Madikeri: Literary Festival In Virajpete On December 21st

ಕೊಡಗು ಜಿಲ್ಲೆಯ ಆಸಕ್ತರಿಗೆ ಅವಕಾಶ ನೀಡಲಾಗುವುದು. 3 ನಿಮಿಷಗಳ ಗರಿಷ್ಠ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಬೇಕು. ಸ್ವರಚಿತ ಗೀತೆಗಳ ಗಾಯನಗೋಷ್ಠಿಯಲ್ಲಿ ಕೊಡಗಿನ ಕವಿಗಳಿಗೆ ಅವಕಾಶ ನೀಡಲಾಗುವುದು.

ಮೊದಲು ಬಂದ 2 ಕವಿಗಳಿಗೆ ಅವಕಾಶ ಸೀಮಿತವಾಗಿರುತ್ತದೆ. ಕವಿಗಳು ತಮ್ಮ ಸ್ವಂತ ರಚನೆಯ ಗೀತೆಗಳನ್ನು ರಾಗ ಸಂಯೋಜನೆಯೊಂದಿಗೆ ಪ್ರಸ್ತುತ ಪಡಿಸಬಹುದಾಗಿದೆ. ಭಾಷಣ ಸ್ಪರ್ಧೆ ಮತ್ತು ಗೀತ ಗಾಯನಗೋಷ್ಠಿಗೆ ಹೆಸರನ್ನು ನೋಂದಾಯಿಸಲು ಡಿಸೆಂಬರ್ 18 ಕೊನೆಯ ದಿನವಾಗಿದೆ.

Madikeri: Literary Festival In Virajpete On December 21st

Recommended Video

ಜಸ್ಟ್ ಕ್ಯಾಮರಾ ನೋಡಿ ತಬ್ಬಿಬ್ಬಾಗಿ ಘೋಷಣೆ ಕೂಗಿದ ನಾಯಕರು | Oneindia Kannada

ಹೆಚ್ಚಿನ ವಿವರಗಳು ಹಾಗೂ ನೋಂದಾವಣೆಗೆ ಮುಲ್ಲೇಂಗಡ ಮಧೋಶ್ ಪೂವಯ್ಯ ಮೊ.9480556667, ಎಂ.ಕೆ.ನಳಿನಾಕ್ಷಿ ಮೊ. 9611018818 ನ್ನು ಸಂಪರ್ಕಿಸಬಹುದು ಎಂದು ವಿರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಮುಲ್ಲೇಂಗಡ ಮಧೋಶ್ ಪೂವಯ್ಯ ಅವರು ತಿಳಿಸಿದ್ದಾರೆ.

English summary
Under the auspices of the Kodagu District Sahitya Parishad and the Virajpet Taluk Kannada Sahitya Parishad, the Sahithya Sambhrarama will be held on December 21 in Virajpete.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X