ಕೊಡಗು: ಜಿಲ್ಲೆಯ ಕಡಿಮೆಯಾದ ಮಳೆ ಅಬ್ಬರ, ಜನರ ನಿಟ್ಟುಸಿರು
ಮಡಿಕೇರಿ, ಆಗಸ್ಟ್ 14: ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಅಬ್ಬರ ಕಡಿಮೆಯಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸುರಿದ ಸರಾಸರಿ ಮಳೆ ಕೇವಲ 10.64 ಮಿ. ಮೀ., ಮಳೆ ಕಡಿಮೆಯಾಗಿದ್ದು, ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಆಗಸ್ಟ್ 17ರಿಂದ ರಾಜ್ಯದಲ್ಲಿ ಮತ್ತೆ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ಕೊಡಗು ಜಿಲ್ಲಾಡಳಿತ ಜಿಲ್ಲೆಯಲ್ಲಿ ಸುರಿದ ಮಳೆಯ ಅಂಕಿ ಸಂಖ್ಯೆಗಳ ಮಾಹಿತಿ ನೀಡಿದೆ. ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 10.64 ಮಿ. ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 2.91 ಮಿ. ಮೀ. ಮಳೆಯಾಗಿತ್ತು. ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯ ತನಕ 2342.77 ಮಿ. ಮೀ ಮಳೆಯಾಗಿದೆ.

ತಾಲೂಕವಾರು ಮಳೆ ಪ್ರಮಾಣ: ಮಡಿಕೇರಿ ತಾಲೂಕಿನಲ್ಲಿ ಸುರಿದ ಸರಾಸರಿ ಮಳೆ 7.58 ಮಿ. ಮೀ. ಆಗಿದೆ. ಕಳೆದ ವರ್ಷ ಇದೇ ದಿನ 7.67 ಮಿ. ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ ಸುರಿದ ಮಳೆ 3288.33 ಮಿ. ಮೀ.
ವಿರಾಜಪೇಟೆ ತಾಲೂಕಿನಲ್ಲಿ ಸುರಿದ ಸರಾಸರಿ ಮಳೆ 1.40 ಮಿ. ಮೀ. ಆಗಿದೆ. ಕಳೆದ ವರ್ಷ ಇದೇ ದಿನ 1.40 ಮಿ. ಮೀ. ಮಳೆಯಾಗಿತ್ತು. ಜಿಲ್ಲಾಡಳಿತದ ಮಾಹಿತಿಯಂತೆ ಜನವರಿಯಿಂದ ಇಲ್ಲಿಯವರೆಗೆ ತಾಲೂಕಿನಲ್ಲಿ ಸುರಿದ ಮಳೆ 2139.90 ಮಿ. ಮೀ., ಕಳೆದ ವರ್ಷ ಇದೇ ಅವಧಿಯಲ್ಲಿ 937.56 ಮಿ. ಮೀ. ಮಳೆಯಾಗಿತ್ತು.
ಪೊನ್ನಂಪೇಟೆ ತಾಲೂಕಿನಲ್ಲಿ ಸುರಿದ ಸರಾಸರಿ ಮಳೆ 25.25 ಮಿ. ಮೀ., ಕಳೆದ ವರ್ಷ ಇದೇ ದಿನ 5.23 ಮಿ. ಮೀ. ಮಳೆಯಾಗಿತ್ತು. ತಾಲೂಕಿನಲ್ಲಿ ಜನವರಿಯಿಂದ ಇಲ್ಲಿಯ ತನಕ 2230.63 ಮಿ. ಮೀ. ಮಳೆಯಾಗಿದೆ.
ಇನ್ನು ಸೋಮವಾರಪೇಟೆ ತಾಲೂಕಿನಲ್ಲಿ ಸುರಿದ ಸರಾಸರಿ ಮಳೆ 18.45 ಮಿ. ಮೀ. ಆಗಿದೆ. ಕಳೆದ ವರ್ಷ ಇದೇ ದಿನ 0.25 ಮಿ. ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯ ತನಕ ತಾಲೂಕಿನಲ್ಲಿ 2654.46 ಮಿ.ಮೀ. ಮಳೆಯಾಗಿದೆ.
ಕುಶಾಲನಗರ ತಾಲೂಕಿನಲ್ಲಿ ಸುರಿದ ಸರಾಸರಿ ಮಳೆ 0.50 ಮಿ. ಮೀ., ಜನವರಿಯಿಂದ ಇಲ್ಲಿಯ ತನಕ 1400.50 ಮಿ. ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 778.95 ಮಿ. ಮೀ. ಮಳೆಯಾಗಿತ್ತು.
ಜಿಲ್ಲೆಯಲ್ಲಿ ಹೋಬಳಿವಾರು ನಾಪೋಕ್ಲು 1.20, ಸಂಪಾಜೆ 12.50, ಭಾಗಮಂಡಲ 16.60, ವಿರಾಜಪೇಟೆ 2.80, ಹುದಿಕೇರಿ 43.20, ಶ್ರೀಮಂಗಲ 22.80, ಪೊನ್ನಂಪೇಟೆ 25, ಬಾಳೆಲೆ 10, ಸೋಮವಾರಪೇಟೆ 28.60, ಶನಿವಾರಸಂತೆ 11, ಶಾಂತಳ್ಳಿ 1.40, ಕೊಡ್ಲಿಪೇಟೆ 32.80, ಸುಂಟಿಕೊಪ್ಪ 1 ಮಿ. ಮೀ. ಮಳೆ ದಾಖಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಹಾರಂಗಿ ಜಲಾಶಯವಿದೆ. ಡ್ಯಾಂ ಗರಿಷ್ಠ ಮಟ್ಟ 2,859 ಅಡಿಗಳು, ಸದ್ಯದ ನೀರಿನ ಮಟ್ಟ 2857.20 ಅಡಿಗಳು. ನೀರಿನ ಒಳಹರಿವು 3325 ಕ್ಯುಸೆಕ್, ಹೊರ ಹರಿವು ನದಿಗೆ 1700 ಕ್ಯುಸೆಕ್. ನಾಲೆಗೆ 300 ಕ್ಯುಸೆಕ್ ಆಗಿದೆ.












Click it and Unblock the Notifications