ಕೊಡಗಿ ಡಿಸಿ ವಿರುದ್ಧ ಎಫ್‌ಐಆರ್ ದಾಖಲು ಮಾಡಲು ಆದೇಶ
ಕೊಡಗು, ನವೆಂಬರ್ 23 : ಕೊಡಗು ಜಿಲ್ಲಾಧಿಕಾರಿ ವಿರುದ್ಧ ಎಫ್‌ಐಆರ್ ದಾಖಲು ಮಾಡಿ ಇಲಾಖಾ ತನಿಖೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.
ಮೊಹಮೊದ್ ಶೋಯೆಬ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಈ ಆದೇಶವನ್ನು ನೀಡಿದೆ. ಎರಡು ಭಿನ್ನ ಆದೇಶವನ್ನು ಮಾಡಿದ್ದ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರ ಕ್ರಮವನ್ನು ತರಾಟೆಗೆ ತೆಗೆದುಕೊಂಡಿತು.

ಜಮೀನು ಖಾತಾ ಸಂಬಂಧ ಎರಡು ಆದೇಶವನ್ನು ಕೊಡಗು ಜಿಲ್ಲಾಧಿಕಾರಿಗಳು ನೀಡಿದ್ದರು. ಒಂದೇ ದಿನ ಒಂದೇ ಪ್ರಕರಣದಲ್ಲಿ ಎರಡು ಆದೇಶ ನೀಡಿದ್ದ ಜಿಲ್ಲಾಧಿಕಾರಿಗಳ ಕ್ರಮವನ್ನು ಮೊಹಮೊದ್ ಶೋಯೆಬ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಜಿಲ್ಲಾಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಿ, ಕೊಡಗಿನ ನ್ಯಾಯಾಂಗಾಧಿಕಾಗಿಗಳ ಮೂಲಕ ಎಫ್‌ಐಆರ್ ದಾಖಲಿಸಿ, ಇಲಾಖಾ ತನಿಖೆಗೂ ಆದೇಶ ನೀಡಿತು.












Click it and Unblock the Notifications